HEALTH TIPS

ಇರಾನ್ ದಾಳಿಯ ಕುರಿತ ವರದಿಗೆ ಟ್ರಂಪ್ ಅಸಮಾಧಾನ; ಮಾಧ್ಯಮಗಳ ವಿರುದ್ಧ ವಾಗ್ದಾಳಿ

ವಾಷಿಂಗ್ಟನ್: ಇರಾನ್‌ ನ ಪರಮಾಣು ತಾಣಗಳ ಮೇಲೆ ಕಳೆದ ವರ್ಷ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಸಂಬಂಧಿಸಿದ ವರದಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಪ್ರಮುಖ ಮಾಧ್ಯಮಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

'ಟ್ರೂತ್ ಸೋಶಿಯಲ್'ನಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷ ನಡೆದ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ಮೂಲಕ ಇರಾನ್‌ ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.

"ಆ ದಾಳಿಯ ಹಾನಿಯನ್ನು ಸರಿಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಸಿಎನ್‌ಎನ್ ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಮೆರಿಕದ ವಿಮಾನದ ಪೈಲಟ್ ಗಳ ಸಾಧನೆಯನ್ನು ಸರಿಯಾಗಿ ಗುರುತಿಸಿಲ್ಲ ಎಂದು ಆರೋಪಿಸಿದ ಟ್ರಂಪ್, "ನಕಲಿ ಸುದ್ದಿ ಮಾಧ್ಯಮಗಳು ನಮ್ಮ ಪೈಲಟ್‌ಗಳ ಸಾಧನೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಗೆಲ್ಲುತ್ತಿದೆ ಎಂದು ಅವರು ಹೇಳಿದ್ದರು. ಆದರೆ ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ವರದಿಗಳು ಅಮೆರಿಕ ಹಿನ್ನಡೆಯಲ್ಲಿದೆ ಎಂಬ ಭಾವನೆ ಮೂಡಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಈ ವರದಿಗಳು ಶತ್ರುಗಳಿಗೂ ತಲುಪುತ್ತಿವೆ. ಅಮೆರಿಕ ವಿರೋಧಿ ನಕಲಿ ಸುದ್ದಿ ಮಾಧ್ಯಮಗಳು ಇರಾನ್ ಗೆಲುವು ಸಾಧಿಸಬೇಕೆಂದು ಬಯಸುತ್ತಿವೆ. ಆದರೆ ಅದು ಸಾಧ್ಯವಾಗುವುದಿಲ್ಲ; ನಾನು ಉಸ್ತುವಾರಿಯಲ್ಲಿದ್ದೇನೆ" ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries