HEALTH TIPS

ಬಾಂಗ್ಲಾ ಪ್ರಧಾನಿ ಭೇಟಿಯಾದ ಭಾರತದ ರಾಯಭಾರಿ

ಢಾಕಾ: ಬಾಂಗ್ಲಾದೇಶದ ಪ್ರಧಾನಿ ತಾರಿಖ್ ರೆಹಮಾನ್ ಅವರನ್ನು ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರು ಸೋಮವಾರ ಭೇಟಿಯಾದರು.

ಬಾಂಗ್ಲಾದೇಶದ ಜೊತೆಗಿನ ಸಂಬಂಧವನ್ನು ಮರುಸ್ಥಾಪನೆಗೆ ಭಾರತ ಎದುರು ನೋಡುತ್ತಿದೆ ಎಂದು ಈ ವೇಳೆ ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಬಿಎನ್‌ಪಿ ಗೆಲುವಿನ ಮೂಲಕ ತಾರೀಖ್ ಅವರು ಪ್ರಧಾನಿ ಹುದ್ದೆಗೇರಿದ್ದರು.

ಆನಂತರ ಭಾರತ ಮತ್ತು ಬಾಂಗ್ಲಾ ನಡುವೆ ಪರಸ್ಪರ ಸಂಬಂಧ ಸುಧಾರಣೆ ಪ್ರಯತ್ನಗಳು ನಡೆದಿವೆ. ಅದರ ಭಾಗವಾಗಿ ವರ್ಮಾ ಮತ್ತು ತಾರೀಖ್ ಅವರ ನಡುವೆ ಸಭೆ ನಡೆದಿದೆ.

ಮುಹಮ್ಮದ್ ಯೂನುಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಸಂಬಂಧ ಹದಗೆಟ್ಟಿತ್ತು.

ವರ್ಮಾ ಮತ್ತು ರಹಮಾನ್ ಅವರ ಭೇಟಿ ವೇಳೆ 'ಎರಡೂ ರಾಷ್ಟ್ರಗಳ ಅಭಿವೃದ್ಧಿ ಆದ್ಯತೆ ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚೆ ನಡೆದಿದೆ' ಎಂದು ಭಾರತದ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ತಿಳಿಸಿದೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲಿಲುರ್‌ ರೆಹಮಾನ್ ಅವರು ಮಂಗಳವಾರ ಭಾರತಕ್ಕೆ ಭೇಟಿ ನೀಡಲಿದ್ದು ಅದಕ್ಕೂ ಮುನ್ನ ಈ ಸಭೆ ನಡೆದಿದೆ. ಭಾರತ ಭೇಟಿ ವೇಳೆ ಅವರು ವಿದೇಶಾಂಗ ಸಚಿವ ಎಸ್‌.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಬಾಲ್‌, ಸಚಿವರಾದ ಪೀಯೂಷ್ ಗೋಯಲ್, ಹರ್ದೀಪ್‌ಸಿಂಗ್‌ ಪುರಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries