HEALTH TIPS

ಕೂಟಮಹಾಜಗತ್ತು ಮಂಗಲ್ಪಾಡಿ ಅಂಗಸಂಸ್ಥೆ, ಯುವ ವೇದಿಕೆಯ ಯುವಶಕ್ತಿ ಸಂಭ್ರಮ

ಉಪ್ಪಳ: ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ0ಸ್ಥೆಯ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ಐಲ ಶ್ರೀ ದುರ್ಗಾ ಪರಮೇಶ್ವರಿ ಕಲಾ ಭವನದಲ್ಲಿ ನಡೆಯಿತು. ಬೆಳಗ್ಗೆ ವೇದಮೂರ್ತಿ ಅಶೋಕ ನಾವಡರ ಪೌರೋಹಿತ್ಯದಲ್ಲಿ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊ0ಡಿತು. ಬಳಿಕ ಪುಟಾಣಿಗಳ ರಾಧಾ ಕೃಷ್ಣ ವೇಷ, ಕಲಶ ಹಿಡಿದ ಮಹಿಳೆಯರು ಹಾಗೂ ಸಮಾಜ ಬಾಂಧವರ ಮೆರವಣಿಗೆಯಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಯುವ ವೇದಿಕೆಯ ಸದಸ್ಯರ ಸ್ವಾಗತ ಗೀತೆ ಹಾಗೂ ಮಹಿಳಾ ವೇದಿಕೆಯ ಸದಸ್ಯರಿಂದ ತಿರುವಾದಿರ ನೃತ್ಯ ನಡೆಯಿತು. ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ0ಸ್ಥೆಯ ಅಧ್ಯಕ್ಷ ಡಾ.ಗಿರಿಧರ ರಾವ್ ಮಾಣಿಹಿತ್ಲುರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮ ಐಲ ಶಂಕರನಾರಾಯಣ ಮಯ್ಯ, ಅನಂತ ಮಯ್ಯರ ವೇದಘೋಷದೊಂದಿಗೆ ಆರಂಭವಾಯಿತು. ಮಂಗಲ್ಪಾಡಿ ಅಂಗಸ0ಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ತುಂಗ ಪ್ರಾಸ್ತಾವಿಕವಾಗಿ ಮಾತನಾಡಿಡಿ ಸ್ವಾಗತಿಸಿದರು.


ಕೂಟ ಮಹಾ ಜಗತ್ತು ಸಾಲಿಗ್ರಾಮದ ಕೇಂದ್ರಾಧ್ಯಕ್ಷ ಪ್ರಕಾಶ ಕಾರಂತ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕೇತರ ಅಂಗಸಂಸ್ಥೆಯ ಪ್ರತಿನಿಧಿ, ಕೇಂದ್ರ ಆಡಳಿತ ಸಮಿತಿ ಸಭೆಯ ಕೋಶಾಧಿಕಾರಿ ಮರಿಕಾಪು ಲಕ್ಷ್ಮೀನಾರಾಯಣ ಹೊಳ್ಳ, ಎಚ್.ಸತೀಶ ಹಂದೆ, ಅಕ್ಷತಾ ಗಿರೀಶ್ ಐತಾಳ್, ಕೇಂದ್ರದ ಉಪಾಧ್ಯಕ್ಷ ಸದಾಶಿವ ಐತಾಳ, ಎಂ ಶ್ರೀಧರ ರಾವ್, ಟಿ.ಡಿ.ಸದಾಶಿವ ರಾವ್, ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಹೊಳ್ಳ ಪೆರಿಂಗಡಿ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಮಯ್ಯ ಶುಭ ಹಾರೈಸಿದರು. ಡಾ.ರಾಘವೇಂದ್ರ ಹೊಳ್ಳ ದಿಕ್ಸೂಚಿ ಭಾಷಣ ಮಾಡಿದರು. ಕೂಟ ಮಹಾ ಜಗತ್ತಿನ ಹಿರಿಯ ಮಾರ್ಗದರ್ಶಕರಾಗಿರುವ ಡಾ.ಕೆ.ಪಿ.ಹೊಳ್ಳ ತಮ್ಮ ಅನುಭವವನ್ನು ಹಂಚಿಕೊ0ಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries