HEALTH TIPS

ಕೇರಳದಲ್ಲಿ ಲವ್ ಜಿಹಾದ್; ಮಹಿಳಾ ಸುರಕ್ಷತೆ ಇಲ್ಲ, ನನಗೆ ಸಹಾಯವೂ ಲಭಿಸಿರಲಿಲ್ಲ- ಆರ್. ಶ್ರೀಲೇಖಾ

ತಿರುವನಂತಪುರಂ: ವಟ್ಟಿಯೂರ್ಕಾವು ಎನ್‍ಡಿಎ ಅಭ್ಯರ್ಥಿ ಮತ್ತು ಮಾಜಿ ಪೋಲೀಸ್ ಅಧಿಕಾರಿ ಆರ್. ಶ್ರೀಲೇಖಾ ವಿವಾದಾತ್ಮಕ ಭಾಷಣ ಮಾಡಿರುವುದಾಗಿ ದೂರಲಾಗಿದೆ. ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಆದರೆ ಪ್ರಸ್ತುತ ಸರ್ಕಾರ ಅದರ ಬಗ್ಗೆ ಕಣ್ಣು ಮುಚ್ಚಿಕೊಂಡಿದೆ ಎಂದು ಶ್ರೀಲೇಖಾ ಆರೋಪಿಸಿದರು. ಘೋರ ಅಪರಾಧಗಳು ನಡೆಯುತ್ತಿದ್ದರೂ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು. ಶಾಸ್ತಾಮಂಗಲದಲ್ಲಿ ಆಹ್ವಾನಿತ ಅತಿಥಿಗಳು ಮಾತ್ರ ಭಾಗವಹಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀಲೇಖಾ ಅವರು ವಿವಾದಾತ್ಮಕ ಭಾಷಣ ಮಾಡಿರುವರು ಎನ್ನಲಾಗಿದೆ. 


ಕಾರ್ಯಕ್ರಮದ ಸಮಯದಲ್ಲಿ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವಾಗ ಶ್ರೀಲೇಖಾ ಅವರು ಹೇಳಿಕೆಯನ್ನು ನೀಡಿದ್ದಾರೆ. ಪೆÇಲೀಸ್ ಅಧಿಕಾರಿಯಾಗಿದ್ದ ಅವರಿಗೆ ಕೆಟ್ಟ ಅನುಭವ ಉಂಟಾದಾಗಲೂ ಅವರಿಗೆ ಯಾವುದೇ ಸಹಾಯ ಲಭಿಸಿರಲಿಲ್ಲ. ಸಚಿವರ ಪತ್ನಿಗೆ ಕೆಟ್ಟ ಅನುಭವವಾದಾಗಲೂ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಕೇರಳದಲ್ಲಿ ಮಹಿಳೆಯರ ಸುರಕ್ಷತೆ ಇಲ್ಲದಿರುವುದಕ್ಕೆ ಇದೇ ಕಾರಣ ಎಂದು ಅವರು ಆರೋಪಿಸಿದರು.

ದೇವರಲ್ಲಿ ನಂಬಿಕೆ ಇಲ್ಲದ ಸರ್ಕಾರ, ದೇವರ ನಂಬಿಕೆಯನ್ನು ಮುಟ್ಟದ ಮಂತ್ರಿಗಳಿಂದ ಆಳಲ್ಪಡುವ ಸರ್ಕಾರ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದು ಶ್ರೀಲೇಖಾ ಹೇಳುತ್ತಾರೆ. ಪೋಲೀಸರಲ್ಲಿ ರಾಜಕೀಯ ಪ್ರಭಾವ ಇರುವುದರಿಂದ ಮಾತ್ರ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಅವರು ಹೇಳಿದರು.

ಕೇರಳದಲ್ಲಿ ಮಹಿಳೆಯರು ಉತ್ತಮವಾಗಲು ಬಯಸಿದರೆ, ಕೇರಳದ ಸರ್ಕಾರ ಬದಲಾಗಬೇಕು. ಕೇರಳದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶ್ರೀಲೇಖಾ ಅಭಿಪ್ರಾಯಪಟ್ಟರು. ಎನ್‍ಡಿಎ ಅಧಿಕಾರಕ್ಕೆ ಬಂದರೆ, ಕಾನೂನುಗಳು ಮತ್ತು ಪೋಲೀಸರು ಅದಕ್ಕೆ ತಕ್ಕಂತೆ ಬದಲಾಗುತ್ತಾರೆ ಮತ್ತು ಸಮಾಜದಲ್ಲಿ ನ್ಯಾಯವನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿಕೊಂಡರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries