ಬದಿಯಡ್ಕ: ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ಜೋರಾಗುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಭೇಟಿಯಾಗಲು ವಿವಿಧ ಕಡೆಗಳಿಗೆ ತೆರಳುತ್ತಿದ್ದಾರೆ. ಕಾಸರಗೋಡು ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಬದಿಯಡ್ಕದ ಪೆರಡಾಲ ಎಸ್.ಟಿ. ಕೊರಗ ಉನ್ನತಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಅವರು ಮಾತನಾಡಿ ಕಾಡಿನಿಂದ ಸಿಗುವ ಸೀಮಿತ ವನಸಂಪನ್ಮೂಲಗಳನ್ನು ಬಳಸಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಅದರಿಂದ ಬರುವ ಅತ್ಯಲ್ಪ ಆದಾಯದಿಂದ ಜೀವನ ನಡೆಸುವವರೇ ಈ ಉನ್ನತಿಯ ಬಹುತೇಕ ಜನರು. ಗೌರವಾನ್ವಿತ ಪ್ರಧಾನಮಂತ್ರಿ ಮೋದಿ ಜೀ ಅಧಿಕಾರಕ್ಕೆ ಬಂದ ನಂತರ, ಯುವಕ-ಯುವತಿಯರಿಗೆ ಉದ್ಯಮಶೀಲತೆ ಮತ್ತು ಉದ್ಯೋಗ ತರಬೇತಿ ನೀಡುವ ಮೂಲಕ ಹಾಗೂ ಕಾಲನಿಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಮುಂಡೋಳುಮೂಲೆ, ಮಹೇಶ್ ವಳಕ್ಕುಂಜ, ಅಶ್ವಿನಿ ಕೆ.ಎಂ., ಸುಕುಮಾರ ಕುದ್ರೆಪ್ಪಾಡಿ, ಕಾರ್ಯಕರ್ತರು ಪಾಲ್ಗೊಂಡಿದ್ದರು.

.jpg)
.jpg)
.jpg)
