ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಯವೊನೆ ಮೆವೆಂಗ್ ಕಾಂಗ್ ಈ ಕುರಿತು ಪ್ರತಿಕ್ರಿಯಿಸಿ, ಸಂಘರ್ಷದಲ್ಲಿರುವ ಎಲ್ಲಾ ಪಕ್ಷಗಳು ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಜಪಾನ್ ಸರಕಾರ ಈ ಬೆಳವಣಿಗೆಯನ್ನು 'ಸಕಾರಾತ್ಮಕ ನಡೆ' ಎಂದು ಅಭಿಪ್ರಾಯಪಟ್ಟಿದೆ. ಟೋಕಿಯೊದಲ್ಲಿ ಮಾತನಾಡಿದ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಮಿನೋರು ಕಿಹರಾ, "ಈ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಅಂತಿಮ ಒಪ್ಪಂದಕ್ಕಾಗಿ ಕಾಯುತ್ತಿದ್ದೇವೆ" ಎಂದು ಹೇಳಿದ್ದಾರೆ.

