HEALTH TIPS

ಇರಾಕ್‌ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ವಾಷಿಂಗ್ಟನ್/ಬಗ್ದಾದ್: ಇರಾಕ್‌ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‌ಇರಾಕ್‌ ನಿಂದ ವರದಿ ಮಾಡುತ್ತಿದ್ದ ವೇಳೆ ಕಿಟೆಲ್ಸನ್ ಅವರನ್ನು ಕೆಲವು ದಿನಗಳ ಹಿಂದೆ ಅಪಹರಿಸಲಾಗಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಇರಾಕ್‌ನ ಶಿಯಾ ಸಶಸ್ತ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ, ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡುವುದಾಗಿ ಮೊದಲು ಘೋಷಿಸಿತ್ತು. ಆದರೆ, ಅವರು ತಕ್ಷಣವೇ ಇರಾಕ್ ತೊರೆಯುವ ಷರತ್ತಿನ ಮೇಲೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ಈ ಘೋಷಣೆಯ ಕೆಲವೇ ಗಂಟೆಗಳ ಬಳಿಕ, ಕಿಟೆಲ್ಸನ್ ಬಿಡುಗಡೆಗೊಂಡಿರುವುದಾಗಿ ರೂಬಿಯೊ ಅಧಿಕೃತವಾಗಿ ಪ್ರಕಟಿಸಿದರು.

ಕಿಟಲ್ಸನ್ ಅವರ ಆರೋಗ್ಯ ಸ್ಥಿತಿ ಹಾಗೂ ಅವರು ಈಗಿರುವ ಸ್ಥಳದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.: ಇರಾಕ್‌ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇರಾಕ್‌ ನಿಂದ ವರದಿ ಮಾಡುತ್ತಿದ್ದ ವೇಳೆ ಕಿಟೆಲ್ಸನ್ ಅವರನ್ನು ಕೆಲವು ದಿನಗಳ ಹಿಂದೆ ಅಪಹರಿಸಲಾಗಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಇರಾಕ್‌ನ ಶಿಯಾ ಸಶಸ್ತ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ, ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡುವುದಾಗಿ ಮೊದಲು ಘೋಷಿಸಿತ್ತು. ಆದರೆ, ಅವರು ತಕ್ಷಣವೇ ಇರಾಕ್ ತೊರೆಯುವ ಷರತ್ತಿನ ಮೇಲೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ಈ ಘೋಷಣೆಯ ಕೆಲವೇ ಗಂಟೆಗಳ ಬಳಿಕ, ಕಿಟೆಲ್ಸನ್ ಬಿಡುಗಡೆಗೊಂಡಿರುವುದಾಗಿ ರೂಬಿಯೊ ಅಧಿಕೃತವಾಗಿ ಪ್ರಕಟಿಸಿದರು.

ಕಿಟಲ್ಸನ್ ಅವರ ಆರೋಗ್ಯ ಸ್ಥಿತಿ ಹಾಗೂ ಅವರು ಈಗಿರುವ ಸ್ಥಳದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries