HEALTH TIPS

ಪರಿಸರ ಸ್ನೇಹಿ ಚುನಾವಣೆ: ಗಮನ ಸೆಳೆದ ಕಟ್ಟಿಕ್ಕುನ್ನು ಶಾಲೆಯ ಹಸಿರು ಬೂತ್

ಕೊಟ್ಟಾಯಂ: ವಿಧಾನಸಭಾ ಚುನಾವಣೆಗೆ ರಾಜ್ಯದ ಎಲ್ಲೆಡೆ ಹಸಿರು ಮಾನದಂಡದಡಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೊಟ್ಟಾಯಂ ಜಿಲ್ಲೆಯ ಎಲ್ಲಾ ಮತಗಟ್ಟೆಗಳು ನೈಜ ಹಸಿರು ಬೂತ್‍ಗಳಾಗಿ ಕಾರ್ಯನಿರ್ವಹಿಸಿದವು. ಜಿಲ್ಲಾಡಳಿತ, ಸ್ವಚ್ಛತಾ ಮಿಷನ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಹಸಿರು ಕ್ರಿಯಾಸೇನೆ ಸದಸ್ಯರು ಮತ್ತು ಅಧಿಕಾರಿಗಳ ಸಹಾಯದಿಂದ ಹಸಿರು ಬೂತ್‍ಗಳನ್ನು ಸಿದ್ಧಪಡಿಸಲಾಯಿತು. ತ್ಯಾಜ್ಯವನ್ನು ಬೇರ್ಪಡಿಸಲು ಮತ್ತು ಸಂಗ್ರಹಿಸಲು ಎಲ್ಲಾ ಬೂತ್‍ಗಳಲ್ಲಿ ಡಬ್ಬಿಗಳನ್ನು ಜೋಡಿಸಲಾಗಿತ್ತು. 


ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ನೀರಿನ ಕಿಯೋಸ್ಕ್‍ಗಳನ್ನು ಸ್ಥಾಪಿಸಲಾಗಿತ್ತು. ಬೂತ್‍ಗಳಲ್ಲಿ ಕಾಗದದ ತಟ್ಟೆಗಳು ಮತ್ತು ಕಾಗದದ ಗ್ಲಾಸ್‍ಗಳನ್ನು ಬಳಸಲಾಗಿದೆ. ಬೂತ್‍ಗಳನ್ನು ಹುಲ್ಲು, ತಾಳೆ ಎಲೆಗಳು, ಬಿದಿರು ಮತ್ತು ಚಾಪೆಗಳಂತಹ ಪ್ರಕೃತಿ ಸ್ನೇಹಿ ವಸ್ತುಗಳಿಂದ ಅಲಂಕರಿಸಲಾಗಿತ್ತು. ಹಸಿರು ಕ್ರಿಯಾಸೇನೆಯ ಸೇವೆಗಳನ್ನು ಖಾತ್ರಿಪಡಿಸಲಾಯಿತು. ಬೂತ್‍ಗಳಲ್ಲಿನ ಸಾವಯವ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳ ಮೂಲಕ ಸಂಸ್ಕರಿಸಲಾಗುತ್ತದೆ ಮತ್ತು ಅಜೈವಿಕ ತ್ಯಾಜ್ಯವನ್ನು ಅಧಿಕೃತ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries