ಅಗರ್ತಲ: ತ್ರಿಪುರಾ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ)ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರದ್ಯೋತ್ ದೇಬಬರ್ಮ ನೇತೃತ್ವದ ಟಿಪ್ರಾ ಮೋಥಾ ಪಕ್ಷ (ಟಿಎಂಪಿ) ಅಭೂತಪೂರ್ವ ಜಯ ಸಾಧಿಸಿದೆ ಎಂದು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ತಿಳಿಸಿದೆ.
ಟಿಪ್ರಾ ಮೋಥಾ ಪಕ್ಷವು 28 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಅದು ತಿಳಿಸಿದೆ.
ಸತತ ಎರಡನೇ ಬಾರಿ ಜಯ ಸಾಧಿಸಿರುವ ಈ ಪಕ್ಷವು 'ಗ್ರೇಟರ್ ಟಿಪ್ರಾಲ್ಯಾಂಡ್' ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದು, 2002ರಲ್ಲಿ ಮಾಜಿ ರಾಜಮನೆತನದ ವಂಶಸ್ಥರು ಇದನ್ನು ಸ್ಥಾಪಿಸಿದ್ದರು. ರಾಜ್ಯದ ಬುಡಕಟ್ಟು ಜನರ ಮೇಲೆ ಬಲವಾದ ಹಿಡಿತವನ್ನು ಮರುಸ್ಥಾಪಿಸಿದೆ.

