HEALTH TIPS

"ನಮ್ಮ ಸಮಾಜವನ್ನು ನಾಶಪಡಿಸುತ್ತಿದ್ದಾರೆ": ನೆತನ್ಯಾಹು ವಿರುದ್ಧ ಇಸ್ರೇಲ್‌ನಲ್ಲಿ ಭಾರೀ ಪ್ರತಿಭಟನೆ

 ಟೆಲ್ ಅವೀವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರದ ವಿರುದ್ಧ ಶನಿವಾರ ರಾತ್ರಿ ಟೆಲ್ ಅವೀವ್‌ ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಫೇಲ್ ಪ್ನೀನಾ ಅವರು, ನೆತನ್ಯಾಹು ನಮ್ಮ ಸಮಾಜವನ್ನು ಒಳಗಿನಿಂದಲೇ ನಾಶಪಡಿಸುತ್ತಿದ್ದಾರೆ.


ಯುರೋಪಿಯನ್ ರಾಷ್ಟ್ರಗಳು ಹಾಗೂ ಅಮೆರಿಕದೊಂದಿಗೆ ಇಸ್ರೇಲ್‌ ನ ಸಂಬಂಧಗಳನ್ನು ಅವರು ದುರ್ಬಲಗೊಳಿಸುತ್ತಿದ್ದಾರೆ. ಈ ಕಾರಣದಿಂದಲೇ ತಾವು ಪ್ರತೀ ವಾರ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.

"ಅಕ್ಟೋಬರ್ 7ರಂದು ನಡೆದ ಘಟನೆಗಳು ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಈ ಸರಕಾರವು, ಮುಂದಿನ ಸರಕಾರವೂ ಸಮಗ್ರ ತನಿಖೆ ನಡೆಸಬೇಕು. ನಮಗೆ ಉತ್ತರ ಸಿಗಬೇಕು" ಎಂದು ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಲೀ ಹಾಫ್‌ಮನ್-ಅಗೀವ್ ಅವರು, "ಅಕ್ಟೋಬರ್ 7ರಂದು ಮತ್ತು ಅದರ ನಂತರ ನಡೆದ ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಬೆಂಬಲ ಸೂಚಿಸಲು ನಾನು ಇಲ್ಲಿ ಬಂದಿದ್ದೇನೆ," ಎಂದು ಹೇಳಿದರು.

ಇನ್ನೊಬ್ಬ ಪ್ರತಿಭಟನಾಕಾರ ಚೈಮ್ ಟ್ರಿವಾಕ್ಸ್ ಅವರು, ಲೆಬನಾನ್ ಹಾಗೂ ಇರಾನ್ ವಿರುದ್ಧ ಯುದ್ಧ ಆರಂಭಿಸುವಲ್ಲಿ ಇಸ್ರೇಲ್ ತಪ್ಪುಗಳನ್ನು ಮಾಡಿದೆ ಎಂದು ಟೀಕಿಸಿದರು. ನೆತನ್ಯಾಹು ದೇಶದ ಹಿತಕ್ಕಿಂತ ತಮ್ಮ ವೈಯಕ್ತಿಕ ಕಾರಣಗಳಿಗಾಗಿ, ವಿಶೇಷವಾಗಿ "ಜೈಲಿನಿಂದ ತಪ್ಪಿಸಿಕೊಳ್ಳಲು" ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries