HEALTH TIPS

ಪಂಚರಾಜ್ಯಗಳ ಚುನಾವಣೆ: ಹಿಂದಿನ ಸಮೀಕ್ಷೆಗಳಲ್ಲಿ ಸತ್ಯವಾಗಿದ್ದೆಷ್ಟು?

ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಇಂದು (ಬುಧವಾರ) ಸಂಜೆ ಪ್ರಕಟಗೊಳ್ಳಲಿದೆ. ಕಳೆದ ಕೆಲ ಚುನಾವಣೆಗಳಿಂದ ಮತ ಎಣಿಕೆಯ ದಿನಕ್ಕಿಂತ ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚು ಚರ್ಚೆಗೊಳಗಾಗುವುದರಿಂದ ವರ್ಷದಿಂದ ವರ್ಷಕ್ಕೆ ಸಮೀಕ್ಷೆ ನಡೆಸುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ವಿಧಾಸಭೆಗಳಿಗೆ ಕೊನೆಯ ಹಂತದ ಮತದಾನ ಇಂದು (ಬುಧವಾರ) ನಡೆಯಲಿದೆ. ಸಂಜೆ 6.30ರ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ವಿವಿಧ ಸಂಸ್ಥೆಗಳು ಪ್ರಕಟಿಸಲಿವೆ. ಇವುಗಳಲ್ಲಿ ಯಾವುದು ವಾಸ್ತವಕ್ಕೆ ಹತ್ತಿರವಾಗಿರಲಿದೆ ಎಂಬುದಕ್ಕೆ ಮೇ 4ರಂದು ನಡೆಯುವ ಮತ ಎಣಿಕೆಯ ಪ್ರಕ್ರಿಯೆ ಮೂಲಕವೇ ಉತ್ತರ ಸಿಗಲಿದೆ. ಹೀಗಿದ್ದರೂ ಮತಗಟ್ಟೆ ಸಮೀಕ್ಷೆಗೆ ಭಾರೀ ಬೇಡಿಕೆ ಇದೆ.

ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಇಂದು (ಏ. 29)ರಂದು ನಡೆಯುತ್ತಿದೆ. 142 ಕ್ಷೇತ್ರಗಳಿಗೆ ಮತದಾರರು ತಮ್ಮ ಪ್ರತಿನಿಧಿಯ ಆಯ್ಕೆಯಲ್ಲಿ ತೊಡಗಿದ್ದಾರೆ. ಮೊದಲ ಹಂತದ ಚುನಾವಣೆ ನಡೆದಿದ್ದರೂ ಮುಂದಿನ ಹಂತದ ಮತದಾನದ ಮೇಲೆ ಪ್ರಭಾವ ಉಂಟಾಗದಂತೆ ಅದರ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಹೀಗಾಗಿ ಕರ್ನಾಟದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಸಮೀಕ್ಷೆಗಳೂ ಇಂದೇ ಪ್ರಕಟವಾಗುವ ಸಾಧ್ಯತೆವಳಿವೆ.

ಚುನಾವಣೋತ್ತರ ಸಮೀಕ್ಷೆ ಎಂದರೇನು?

ಮತದಾನದ ಮಾದರಿಯನ್ನು ಅಳೆಯುವ ವಿಧಾನವನ್ನು ಆಧರಿಸಿ ಚುನಾವಣೋತ್ತರ ಸಮೀಕ್ಷೆ ನಡೆಸಲಾಗುತ್ತದೆ. ಮತಗಟ್ಟೆಗಳ ಬಳಿ ಮತದಾರರನ್ನು ಮಾತನಾಡಿಸಿ ಅವರಿಗೆ ಒಂದಷ್ಟು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವ ಮೂಲಕ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಮಾದರಿಯನ್ನು ಸಂಖ್ಯಾಶಾಸ್ತ್ರದ ವಿಧಾನಗಳ ಮೂಲಕ ಸಂಸ್ಕರಿಸಿ ಸೆಫಾಲಜಿಸ್ಟ್‌ಗಳು ಸಮೀಕ್ಷೆಯನ್ನು ಬಿಡುಗಡೆ ಮಾಡುತ್ತಾರೆ.

ಮಾದರಿ ಸಂಗ್ರಹ: ಈ ಪ್ರಕ್ರಿಯೆಯಲ್ಲಿ ಚುನಾವಣಾ ಏಜೆಂಟರು ಸಮೀಕ್ಷೆಗೆ ಮತಗಟ್ಟೆಗಳನ್ನು ಆಯ್ಕೆ ಮಾಡುತ್ತಾರೆ. ಎಲ್ಲಾ ಸ್ಥರಗಳ ಮತದಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ನಗರ, ಗ್ರಾಮ, ವಿವಿಧ ವಯೋಮಾನ, ಆರ್ಥಿಕ ಸ್ಥಿತಿ ಮತ್ತು ಸಮುದಾಯಗಳ ಜನರು ಇರುವಂತೆ ಎಚ್ಚರ ವಹಿಸುತ್ತಾರೆ.

ಅವರು ಯಾರಿಗೆ ಮತ ನೀಡಿದರು. ವಯಸ್ಸು, ಪ್ರದೇಶ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಸಂಗ್ರಹಿಸುತ್ತಾರೆ. ಇವುಗಳನ್ನು ಆಧರಿಸಿ ಸಂಸ್ಕರಿಸುತ್ತಾರೆ. ಮತಗಳ ಹಂಚಿಕೆಯನ್ನು ಗಮನಿಸುತ್ತಾರೆ. ಜಾತಿ, ಪ್ರದೇಶ, ಲಿಂಗ ಮತ್ತು ಹಿಂದಿನ ಚುನಾವಣೆಗಳಲ್ಲಿ ಮತದಾರರ ನಿರ್ಧಾರಗಳನ್ನು ಅಳೆದು ತೂಗಿ ಸಮೀಕ್ಷೆ ಸಿದ್ಧಪಡಿಸುತ್ತಾರೆ.

ವಯಸ್ಸು ಮತ್ತು ಮತ ಚಲಾವಣೆ ಕುರಿತು ಕೆಲವೊಂದು ಮೂಲ ಪ್ರಶ್ನೆಗಳಿಗೆ ಉತ್ತರಿಸಬಯಸುವವರಿಂದ ಮಾಹಿತಿ ಸಂಗ್ರಹಿಸುತ್ತಾರೆ. ಇಲ್ಲಿ ಸಂಗ್ರಹವಾದ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದರಲ್ಲಿ ಕ್ಷೇತ್ರ, ಅಲ್ಲಿನ ಮತದಾರರು ಇತರ ಅಂಶಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ವಯಸ್ಸಿನ ಆಧಾರದಲ್ಲಿ ಸಂಗ್ರಹಿಸಿದ ಮಾಹಿತಿಗೆ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇದನ್ನು ಆಧರಿಸಿ, ಯಾವ ಪಕ್ಷಕ್ಕೆ ಗೆಲುವು ಸಿಗಬಹುದು ಎಂಬುದನ್ನು ಪರಿಣಿತ ಸೆಫಾಲಜಿಸ್ಟ್‌ಗಳು ಲೆಕ್ಕ ಹಾಕುತ್ತಾರೆ.

ಇಷ್ಟಿದ್ದರೂ ಎಲ್ಲಾ ಸಮೀಕ್ಷೆಗಳು ವಾಸ್ತವ ಫಲಿತಾಂಶಕ್ಕೆ ಹತ್ತಿರವಾಗಿರದು. ಹಿಂದಿನ ಚುನಾವಣೆಗಳ ಕೆಲ ಸಮೀಕ್ಷೆಗಳನ್ನು ಗಮನಿಸಿದರೆ ಒಂದಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಬಹುತೇಕ ಸಮೀಕ್ಷೆಗಳು ಎಡವಿದ ಉದಾಹರಣೆಗಳೂ ಇವೆ. ಇದಕ್ಕೆ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಚುನಾವಣೆಗಳ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳನ್ನು ಇಲ್ಲಿ ಸ್ಮರಿಸಬಹುದು.

2021ರಲ್ಲಿ ಚುನಾವಣೋತ್ತರ ಸಮೀಕ್ಷೆ ಎಷ್ಟು ನಿಜವಾಗಿದ್ದವು?

ಪಶ್ಚಿಮ ಬಂಗಾಳವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ 2021ರ ಚುನಾವಣೆಯ ಮತಗಟ್ಟೆ ಸಮೀಕ್ಷೆಗೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸ ಇದ್ದುದು ಕಂಡುಬಂದಿತ್ತು.

ಆಕ್ಸಿಸ್‌ ನಡೆಸಿದ ಸಮೀಕ್ಷೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ 130ರಿಂದ 156 ಸೀಟುಗಳು ಲಭ್ಯವಾಗಲಿವೆ ಎಂದು ಹೇಳಿತ್ತು. ಬಿಜೆಪಿಗೆ 134ರಿಂದ 160 ಸೀಟುಗಳು ಲಭ್ಯವಾಗಲಿವೆ ಎಂದು ಹೇಳಿತ್ತು.

ಜನ್‌ ಕಿ ಬಾತ್‌ ಸಮೀಕ್ಷೆ: ಬಿಜೆಪಿಗೆ 162- 185 ಸೀಟುಗಳು ಹಾಗೂ ಟಿಎಂಸಿಗೆ 104-121 ಸೀಟುಗಳು

ಎಬಿಪಿ-ಸಿವೋಟರ್‌: ಬಿಜೆಪಿಗೆ 109-121 ಹಾಗೂ ಟಿಎಂಸಿಗೆ 152-164 ಸೀಟುಗಳು

2021ರಲ್ಲಿ ಮತ ಎಣಿಕೆ ಪೂರ್ಣಗೊಂಡ ನಂತರ 294 ಸೀಟುಗಳ ಪಶ್ಚಿಮ ಬಂಗಾಳ ವಿಧಾನಸಭೆಗೆ ತೃಣಮೂಲ ಕಾಂಗ್ರೆಸ್‌ನ 215 ಸದಸ್ಯರನ್ನು ಮತದಾರರು ಆಯ್ಕೆ ಮಾಡಿದ್ದರು. ಬಿಜೆಪಿ 77 ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು.

ತಮಿಳುನಾಡಿನಲ್ಲಿ 2021ರ ಚುನಾವಣಾ ಲೆಕ್ಕಾಚಾರ

2021ರಲ್ಲಿ ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯಿತು. 234 ಕ್ಷೇತ್ರಗಳ ವಿಧಾನಸಭೆಯಲ್ಲಿ 2021ರಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 159 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ವಿರೋಧ ಪಕ್ಷವಾದ ಎಐಎಡಿಎಂಕೆೆ ನೇತೃತ್ವದ ಮೈತ್ರಿಕೂಟವು 75 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು.

ಫಲಿತಾಂಶಕ್ಕೂ ಮುನ್ನ ವಿವಿಧ ಸಂಸ್ಥೆಗಳು ಪ್ರಕಟಿಸಿದ್ದ ಚುಣಾವಣೋತ್ತರ ಸಮೀಕ್ಷೆ ಹೀಗಿತ್ತು...

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ: ಡಿಎಂಕೆ 175-195 ಕ್ಷೇತ್ರಗಳು; ಎಐಎಡಿಎಂಕೆ ಮೈತ್ರಿಕೂಟಕ್ಕೆ 38-54 ಕ್ಷೇತ್ರಗಳು

ಟುಡೇಸ್ ಚಾಣಕ್ಯ: ಡಿಎಂಕೆಗೆ 164-186 ಕ್ಷೇತ್ರಗಳು: ಎಐಎಡಿಎಂಕೆೆಗೆ 46-68 ಕ್ಷೇತ್ರಗಳು

ಜನ್‌ ಕಿ ಬಾತ್‌, ಸಿಎನ್‌ಎಕ್ಸ್‌: ಡಿಎಂಕೆ 160-170 ಕ್ಷೇತ್ರಗಳು ಹಾಗೂ ಎಐಎಡಿಎಂಕೆೆ ಮೈತ್ರಿಕೂಟಕ್ಕೆ 56-68 ಕ್ಷೇತ್ರಗಳು ಲಭ್ಯವಾಗಲಿವೆ ಎಂದಿತ್ತು.

ಕೇರಳ: 2021ರ ಚುನಾವಣೋತ್ತರ ಸಮೀಕ್ಷೆ ಹೀಗಿತ್ತು...

ಕೇರಳ ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎಡಪಕ್ಷ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟವು 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ 140 ಸದಸ್ಯರಿರುವ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಿತು. ಸಿಪಿಐ(ಎಂ) 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಕೇರಳದಲ್ಲಿ ಪ್ರತಿ ಚುನಾವಣೆಯಲ್ಲೂ ಮತದಾರರು ಒಂದೇ ಪಕ್ಷವನ್ನು ಆರಿಸದ ಒಂದು ಪದ್ಧತಿಗೆ 2021ರ ಚುನಾವಣೆ

ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಮರಳುವುದಾಗಿ ಭವಿಷ್ಯ ನುಡಿದಿದ್ದವು.

ಸಿವೋಟರ್ಸ್ ಸಮೀಕ್ಷೆ ಪ್ರಕಾರ ಎಡಪಕ್ಷಗಳ ಒಕ್ಕೂಟಕ್ಕೆ 71ರಿಂದ 77 ಸೀಟುಗಳು, ಯುಡಿಎಫ್‌ ಮೈತ್ರಿಕೂಟಕ್ಕೆ 62ರಿಂದ 68 ಹಾಗೂ ಎನ್‌ಡಿಎ ಮೈತ್ರಿಕೂಟ 2 ಕ್ಷೇತ್ರಗಳನ್ನು ಗೆಲ್ಲಲಿವೆ ಎಂದಿತ್ತು.

ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಎಲ್‌ಡಿಎಫ್‌ಗೆ 72ರಿಂದ 80; ಯುಡಿಎಫ್‌ಗೆ 58ರಿಂದ 64 ಹಾಗೂ ಎನ್‌ಡಿಎಗೆ 1ರಿಂದ 5 ಸೀಟುಗಳು ಲಭ್ಯವಾಗುತ್ತವೆ ಎಂದಿತ್ತು.

ಆಕ್ಸಿಸ್ ಮೈ ಇಂಡಿಯಾ ಕೂಡಾ 2021ರ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಜಯ ಎಂದೇ ಹೇಳಿತ್ತು. ಅದರ ಪ್ರಕಾರ 104ರಿಂದ 120 ಸೀಟುಗಳು ಬರಬಹುದು ಎಂದು ಅಂದಾಜಿಸಿತ್ತು. ಯಿಡಿಎಫ್ ಮೈತ್ರಿಕೂಟಕ್ಕೆ 20ರಿಂದ 36 ಸೀಟುಗಳು ಲಭ್ಯವಾಗುವ ಹಾಗೂ ಎನ್‌ಡಿಎಗೆ 2 ಸೀಟುಗಳ ನಿರೀಕ್ಷೆ ಎಂದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries