HEALTH TIPS

ಮೇ 1ರಿಂದ ಆನ್‌ ಲೈನ್ ಗೇಮಿಂಗ್‌ ಗೆ ಅಂಕುಶ

ನವದೆಹಲಿ: ಆನ್‌ ಲೈನ್ ಗೇಮಿಂಗ್‌ ಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು 2026ರ ಮೇ 1ರಿಂದ ನೂತನ ಶಾಸನಾತ್ಮಕ ಚೌಕಟ್ಟನ್ನು ಜಾರಿಗೊಳಿಸಲಿದೆ. ಆನ್‌ಲೈನ್ ಗೇಮಿಂಗ್ ಉತ್ತೇಜನ ಹಾಗೂ ನಿಯಂತ್ರಣ ಕಾಯ್ದೆ-2025ರಡಿ ಈ ನಿಯಮಗಳು ಜಾರಿಗೆ ಬರಲಿವೆ.

ಇ-ಸ್ಪೋರ್ಟ್‌ ಗಳ ಬೆಳವಣಿಗೆಗೆ ಉತ್ತೇಜನ ನೀಡುವ ಜೊತೆಗೆ ಅಪಾಯಕಾರಿಯಾದ ಹಣದ ಜೂಜಾಟವನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ನಿಯಮಾವಳಿಗಳ ಪ್ರಕಾರ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ "ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ" ಎಂಬ ಕೇಂದ್ರೀಯ ಸಂಸ್ಥೆ ಸ್ಥಾಪನೆಯಾಗಲಿದೆ. ದಿಲ್ಲಿಯಿಂದ ಕಾರ್ಯನಿರ್ವಹಿಸುವ ಈ ಸಂಸ್ಥೆ ಆನ್‌ಲೈನ್ ಗೇಮ್‌ ಗಳ ವರ್ಗೀಕರಣ, ದೂರುಗಳ ನಿರ್ವಹಣೆ ಹಾಗೂ ಹಣಕಾಸು ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಿದೆ.

ಆನ್‌ ಲೈನ್ ಗೇಮ್‌ ಗಳ ಸ್ಪಷ್ಟ ವರ್ಗೀಕರಣ:

ಯಾವುದೇ ಗೇಮ್ ಹಣದ ಜೂಜಾಟವೇ, ಅನುಮತಿಸಲ್ಪಟ್ಟ ಇ-ಸ್ಪೋರ್ಟ್‌ ಅಥವಾ ಸಾಮಾಜಿಕ ಆಟವೇ ಎಂಬುದನ್ನು ಈ ವ್ಯವಸ್ಥೆಯಡಿ ನಿರ್ಧರಿಸಲಾಗುವುದು. ಪ್ರವೇಶ ಶುಲ್ಕ, ಬಹುಮಾನಗಳ ಸ್ವರೂಪ ಮತ್ತು ಹಣ ಗಳಿಸುವ ವಿಧಾನಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಯಲಿದೆ. ಇಂತಹ ಪ್ರಕರಣಗಳನ್ನು 90 ದಿನಗಳೊಳಗೆ ನಿರ್ಧರಿಸುವ ನಿರೀಕ್ಷೆಯಿದೆ.

ಬಳಕೆದಾರರ ಸುರಕ್ಷತೆ:

ವಯೋ ದೃಢೀಕರಣ, ಪೋಷಕರ ನಿಯಂತ್ರಣ, ಸಮಯ ಮಿತಿ ಹಾಗೂ ವರದಿ ಸಾಧನಗಳನ್ನು ಕಡ್ಡಾಯಗೊಳಿಸಲಾಗುತ್ತದೆ.

ಎರಡು ಹಂತದ ದೂರು ವ್ಯವಸ್ಥೆ:

ಮೊದಲು ಗೇಮಿಂಗ್ ವೇದಿಕೆಗೆ ದೂರು ಸಲ್ಲಿಸಬಹುದು. ತೃಪ್ತಿಯಾಗದಿದ್ದರೆ ಪ್ರಾಧಿಕಾರಕ್ಕೆ, ನಂತರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮನವಿ ಮಾಡಬಹುದು. ಪ್ರತಿ ಹಂತದಲ್ಲಿ 30 ದಿನಗಳೊಳಗೆ ಪರಿಹಾರ ನಿರೀಕ್ಷಿಸಲಾಗಿದೆ.

ಕಟ್ಟುನಿಟ್ಟಿನ ಅನುಷ್ಠಾನ:

ನಿಯಮ ಉಲ್ಲಂಘಿಸಿದ ವೇದಿಕೆಗಳಿಗೆ ದಂಡ ವಿಧಿಸಲಾಗುತ್ತದೆ. ಪ್ರಕರಣಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries