HEALTH TIPS

ಪ್ರಧಾನಿ ಮೋದಿಗೆ ಪತ್ರ ಬರೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರು; ಪತ್ರದಲ್ಲೇನಿದೆ?

 ನವದೆಹಲಿ: ಏರ್ ಇಂಡಿಯಾ ವಿಮಾನ ಂI-171 ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು, ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) ದತ್ತಾಂಶವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.


ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಪ್ರಯಾಣಿಕರು ಮತ್ತು ಘಟನೆ ನಡೆದ ಪ್ರದೇಶದಲ್ಲಿದ್ದ 19 ಮಂದಿ ಸೇರಿ ಒಟ್ಟು 260 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆ.

ಕಳೆದ ವರ್ಷ ಜೂನ್ 12ರಂದು ಅಹಮದಾಬಾದ್‌ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೋಯಿಂಗ್ 787-8 ಡ್ರೀಮ್‌ಲೈನರ್ ಪತನಗೊಂಡಿದ್ದು, ಘಟನೆಯ ನಿಜವಾದ ಕಾರಣ ತಿಳಿದುಕೊಳ್ಳಲು ಬ್ಲಾಕ್‌ ಬಾಕ್ಸ್‌ಗೆ ದತ್ತಾಂಶಕ್ಕೆ ಪ್ರವೇಶ ಅತ್ಯಂತ ಅಗತ್ಯ ಎಂದು ಕುಟುಂಬಸ್ಥರು ಪತ್ರದಲ್ಲಿ ತಿಳಿಸಿದ್ದಾರೆ.

"ಈ ಅಪಘಾತಕ್ಕೆ ಕಾರಣವೇನು? ತಾಂತ್ರಿಕ ದೋಷ ಇದೆಯೇ? ಎಂಬುದರ ಕುರಿತು ಸತ್ಯ ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಸಾರ್ವಜನಿಕವಾಗಿ ದತ್ತಾಂಶ ಬಿಡುಗಡೆ ಸಾಧ್ಯವಿಲ್ಲದಿದ್ದರೆ ಕನಿಷ್ಠ ಸಂತ್ರಸ್ತ ಕುಟುಂಬಗಳೊಂದಿಗೆ ಹಂಚಿಕೊಳ್ಳಬೇಕು," ಎಂದು ಅವರು ಆಗ್ರಹಿಸಿದ್ದಾರೆ.

ಪತ್ರವನ್ನು ಪ್ರಧಾನಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದರ ಪ್ರತಿಗಳನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ವಿಮಾನ ಅಪಘಾತ ತನಿಖಾ ಬ್ಯೂರೋ (ಂಂIಃ) ಮಹಾನಿರ್ದೇಶಕ ಜಿ.ವಿ.ಜಿ. ಯುಗಂಧರ್ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಆಉಅಂ) ಮಹಾನಿರ್ದೇಶಕ ಫೈಝ್ ಅಹ್ಮದ್ ಕಿದ್ವಾಯ್ ಅವರಿಗೆ ಕಳುಹಿಸಲಾಗುತ್ತಿದೆ.

ಶನಿವಾರ ನಡೆದ ಸಭೆಯಲ್ಲಿ ಸುಮಾರು 25 ಮಂದಿ ಕುಟುಂಬಸ್ಥರು ನೇರವಾಗಿ ಭಾಗವಹಿಸಿದ್ದು, 30 ಕ್ಕೂ ಹೆಚ್ಚು ಮಂದಿ ಆನ್‌ ಲೈನ್ ಮೂಲಕ ಪಾಲ್ಗೊಂಡಿದ್ದರು. ಈ ವೇಳೆ ತನಿಖೆಯ ವೇಗ ಹಾಗೂ ಅಧಿಕಾರಿಗಳು ಮತ್ತು ಏರ್ ಇಂಡಿಯಾ ಹಾಗೂ ಟಾಟಾ ಗುಂಪಿನ ಸಂವಹನದ ಕೊರತೆ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಯಿತು.

ತಾಯಿ, ಸಹೋದರ ಮತ್ತು ಮಗಳನ್ನು ಅಗಲಿರುವ ಖೇಡಾದ ರೊಮಿನ್ ವೋರಾ ಎಂಬವರು,

ದೂರವಾಣಿ ಕರೆಗಳಿಗೆ ಪ್ರತಿಕ್ರಿಯೆ ಸಿಗುತ್ತಿಲ್ಲ; ಸಂವಹನ ಬಹುತೇಕ ಇಮೇಲ್‌ ಗೆ ಮಾತ್ರ ಸೀಮಿತವಾಗಿದೆ ಎಂದು ದೂರಿದರು. ಹಳ್ಳಿಗಳಲ್ಲಿರುವ ಅನೇಕ ಜನರಿಗೆ ಇಮೇಲ್ ಬಳಸುವುದು ತಿಳಿದಿಲ್ಲ. ಹಾಗಾಗಿ ವಿಶೇಷ ಸಹಾಯವಾಣಿ ಸಂಖ್ಯೆ ಒದಗಿಸುವಂತೆ ಒತ್ತಾಯಿಸಿದರು.

ಮೃತರ ಡಿಜಿಟಲ್ ವಸ್ತುಗಳನ್ನು ಯಾವಾಗ ಹಿಂತಿರುಗಿಸಲಾಗುತ್ತದೆ ಎಂಬ ಪ್ರಶ್ನೆಯನ್ನೂ ಕುಟುಂಬಸ್ಥರು ಎತ್ತಿದ್ದು, ಅಧಿಕಾರಿಗಳು ಗೌರವಯುತವಾಗಿ ನೇರ ಸಂಪರ್ಕ ಸಾಧಿಸಬೇಕೆಂದು ಒತ್ತಿ ಹೇಳಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಒಬ್ಬ ಕುಟುಂಬ ಸದಸ್ಯರು, "ಈ ದುರಂತದ ಸುತ್ತಲಿನ ಸತ್ಯ ಮತ್ತು ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಬ್ಲಾಕ್‌ ಬಾಕ್ಸ್‌ ದತ್ತಾಂಶ ಬಿಡುಗಡೆ ಅತ್ಯಗತ್ಯ," ಎಂದರು.

ದುರಂತದಲ್ಲಿ ತಂದೆಯನ್ನು ಕಳೆದುಕೊಂಡಿರುವ 24 ವರ್ಷದ ನಿಲೇಶ್‌ ಪುರೋಹಿತ್‌ ಎಂಬವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, 'ನಮ್ಮ ಮನೆಯಲ್ಲಿ ಶೂನ್ಯ ಆವರಿಸಿದೆ. ಯಾವ ಪರಿಹಾರದ ಹಣದಿಂದಲೂ ಅದನ್ನು ತುಂಬಿಕೊಡಲು ಸಾಧ್ಯವಿಲ್ಲ. ನಮಗೆ ಬೇಕಾಗಿರುವುದು ಅಂದು ಏನಾಯಿತು ಎಂಬುದಷ್ಟೇ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮೃತರಿಗೆ ಸಂಬಂಧಿಸಿದ ವಸ್ತುಗಳನ್ನು ಮರಳಿ ಪಡೆಯಲು ಕುಟುಂಬದವರಿಗೆ ಅನುಕೂಲವಾಗಲೆಂದು ಏರ್‌ ಇಂಡಿಯಾ ಇತ್ತೀಚೆಗೆ ವೆಬ್‌ಸೈಟ್‌ ರೂಪಿಸಿದೆ. ಆದರೆ, ಅದರಲ್ಲಿರುವ ಗೊಂದಲಗಳ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಅಪಘಾತದ ತನಿಖೆಯನ್ನು ಂಂIಃ ನಡೆಸುತ್ತಿದೆ. ಘಟನೆ ನಂತರ ಕೆಲವೇ ದಿನಗಳಲ್ಲಿ ಅಗಿಖ ಮತ್ತು ಈಆಖ ಅನ್ನು ಅವಶೇಷಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಹೊಸದಿಲ್ಲಿಯ ಪ್ರಯೋಗಾಲಯಕ್ಕೆ ಸಾಗಿಸಿ ವಿಶ್ಲೇಷಣೆ ನಡೆಸಲಾಗಿದೆ.

ಜೂನ್ ಅಂತ್ಯದ ವೇಳೆಗೆ ದತ್ತಾಂಶ ಹೊರತೆಗೆದು ಪ್ರಾಥಮಿಕ ಹಂತ ಪೂರ್ಣಗೊಂಡಿದ್ದು, ತಜ್ಞರು ಕಾಕ್‌ ಪಿಟ್ ಸಂಭಾಷಣೆ ಹಾಗೂ ಹಾರಾಟದ ನಿಯತಾಂಕಗಳನ್ನು ಪರಿಶೀಲಿಸಿ ಅಂತಿಮ ಕ್ಷಣಗಳ ಪುನರ್‌ನಿರ್ಮಾಣದಲ್ಲಿ ತೊಡಗಿದ್ದಾರೆ.

ಜುಲೈನಲ್ಲಿ ಪ್ರಕಟವಾದ ಪ್ರಾಥಮಿಕ ವರದಿ ಪ್ರಕಾರ, ಟೇಕ್‌ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್‌ ಗಳು 'ರನ್' ಸ್ಥಾನದಿಂದ 'ಕಟ್‌ಆ ಫ್' ಸ್ಥಾನಕ್ಕೆ ಸ್ಥಳಾಂತರವಾದ ಪರಿಣಾಮ ಎರಡೂ ಎಂಜಿನ್‌ ಗಳು ಒತ್ತಡ ಕಳೆದುಕೊಂಡಿದ್ದು, ಸಂಪೂರ್ಣ ವಿದ್ಯುತ್ ನಷ್ಟ ಸಂಭವಿಸಿದೆ ಎಂದು ಂಂIಃ ತಿಳಿಸಿದೆ.

ಆದರೆ ಸ್ವಿಚ್‌ಗಳು ಹೇಗೆ ಸ್ಥಳಾಂತರವಾದವು ಎಂಬುದರ ಕುರಿತು ಸ್ಪಷ್ಟ ಕಾರಣ ನೀಡಲಾಗಿಲ್ಲ. ತನಿಖಾಧಿಕಾರಿಗಳು ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದು, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries