HEALTH TIPS

TCS ಮತಾಂತರ ಪ್ರಕರಣ: ನಾನು ತುಂಬು ಗರ್ಭಿಣಿ; ಜಾಮೀನು ಕೋರಿ ಕೋರ್ಟ್ ಮೊರೆ ಹೋದ ಪ್ರಮುಖ ಆರೋಪಿ ನಿದಾ ಖಾನ್..!

 ನವದೆಹಲಿ: Tata Consultancy Services ನಾಶಿಕ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್ ಇದೀಗ ತಾನು ತುಂಬು ಗರ್ಭಿಣಿ ಎಂದು ಹೇಳಿಕೊಂಡಿದ್ದು, ಮಾನವೀಯ ಮತ್ತು ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. 


ನಿದಾ ಖಾನ್ ಪರ ವಕೀಲರು ನ್ಯಾಯಾಲಯದ ಮುಂದೆ, ಆಕೆ ಗರ್ಭಿಣಿಯಾಗಿದ್ದು, ಆರೋಗ್ಯದ ದೃಷ್ಟಿಯಿಂದ ವಿಶೇಷ ಸೌಲಭ್ಯಗಳು ಅಗತ್ಯವಿದೆ ಎಂದು ವಾದಿಸಿದ್ದಾರೆ.

ಜೈಲು ಪರಿಸ್ಥಿತಿಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಸೂಕ್ತ ವೈದ್ಯಕೀಯ ಚಿಕಿತ್ಸೆ, ಆರೈಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಕೆಲವು ಸಂದರ್ಭಗಳಲ್ಲಿ ಗರ್ಭಿಣಿ ಕೈದಿಗಳಿಗೆ ಜಾಮೀನು ಅಥವಾ ತಾತ್ಕಾಲಿಕ ಸಡಿಲಿಕೆ ನೀಡುವ ಉದಾಹರಣೆಗಳನ್ನೂ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.

ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಒಟ್ಟು ಒಂಬತ್ತು ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರದ ದೂರುಗಳು ದಾಖಲಾಗಿವೆ.

ಎಂಟು ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಳೆದ ವಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು.

2022 ರಿಂದ 2026ರ ನಡುವೆ ಹಿರಿಯ ಸಹೋದ್ಯೋಗಿಗಳು ಮಹಿಳಾ ಉದ್ಯೋಗಿಗಳಿಗೆ ಮಾನಸಿಕ ಮತ್ತು ಲೈಂ*ಕ ಕಿರುಕುಳ ನೀಡಿದ್ದಾರೆ. ಆರೋಪಿಗಳಲ್ಲಿ ಒಬ್ಬ ಉದ್ಯೋಗಿಯೊಂದಿಗೆ ಮದುವೆಯಾಗುವ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.

Nida Khan
ಪುರುಷ ಉದ್ಯೋಗಿಯೊಬ್ಬರಿಗೆ ಬಲವಂತವಾಗಿ ನಮಾಜ್ ಮಾಡುವಂತೆ ಒತ್ತಾಯಿಸಿರುವುದು ಮತ್ತು ಅವರ ಧರ್ಮವನ್ನು ಅವಮಾನಿಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತರು ಈ ಬಗ್ಗೆ ಮಾನವ ಸಂಪನ್ಮೂಲ (HR) ವಿಭಾಗಕ್ಕೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದೆ ಆರೋಪಿಗಳಿಗೆ ಬೆಂಬಲ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ದಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮೋನ್, ಶಾರುಖ್ ಖುರೇಷಿ, ಶಾಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮತ್ತು ಹೆಚ್‌ಆರ್ ಮುಖ್ಯಸ್ಥೆ ಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಕಂಪನಿಯಿಂದ ಅಮಾನತುಗೊಳಿಸಲಾಗಿದೆ.

ಈ ಪ್ರಕರಣ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದಾಳೆ. ಇದೀಗ ನಾಸಿಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಅರ್ಜಿ ಸಲ್ಲಿಸಿದ್ದಾಳೆ.

ನ್ಯಾಯಾಲಯ ಸಾಮಾನ್ಯವಾಗಿ ಇಂತಹ ಮನವಿಗಳ ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಆದೇಶಿಸುತ್ತದೆ. ನಿದಾ ಖಾನ್ ನಿಜವಾಗಿಯೂ ಗರ್ಭಿಣಿಯಾಗಿರುವುದನ್ನು ದೃಢೀಕರಿಸಲು ಸರ್ಕಾರದ ಆಸ್ಪತ್ರೆಯಿಂದ ವೈದ್ಯಕೀಯ ವರದಿ ಪಡೆಯಲಾಗಬಹುದು.

ಈ ವರದಿ ಆಧರಿಸಿ, ಆಕೆಗೆ ವಿಶೇಷ ಸೌಲಭ್ಯಗಳು, ಆಸ್ಪತ್ರೆ ಚಿಕಿತ್ಸೆ ಅಥವಾ ಕಾನೂನುಬದ್ಧ ಸಡಿಲಿಕೆ ನೀಡಬೇಕೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.

ಇದೇ ವೇಳೆ, ಪ್ರಾಸಿಕ್ಯೂಷನ್ ಪಕ್ಷವು ಈ ಮನವಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯೂ ಇದೆ. ಆರೋಪಗಳ ಗಂಭೀರತೆ, ತನಿಖೆಯ ಹಂತ ಹಾಗೂ ಸಾಕ್ಷ್ಯಾಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಉಲ್ಲೇಖಿಸಿ, ಸಡಿಲಿಕೆ ನೀಡಬಾರದು ಎಂದು ವಾದಿಸಬಹುದು. ಆದ್ದರಿಂದ, ನ್ಯಾಯಾಲಯದ ತೀರ್ಪು ಈ ಎರಡೂ ಪಕ್ಷಗಳ ವಾದಗಳ ಮೇಲೆ ಅವಲಂಬಿತವಾಗಿರುತ್ತದೆ.ಈ ಬೆಳವಣಿಗೆ ಕಾನೂನು ಮತ್ತು ಮಾನವೀಯ ಅಂಶಗಳ ನಡುವಿನ ಸಮತೋಲನದ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ. ಒಂದು ಕಡೆ ಆರೋಪಗಳ ಗಂಭೀರತೆ ಇದ್ದರೆ, ಇನ್ನೊಂದು ಕಡೆ ಗರ್ಭಿಣಿ ಮಹಿಳೆಯ ಆರೋಗ್ಯ ಮತ್ತು ಹಕ್ಕುಗಳನ್ನೂ ಪರಿಗಣಿಸಬೇಕಾಗುತ್ತದೆ.

ಒಟ್ಟಾರೆ ನಿದಾ ಖಾನ್ ಅವರ ಜಾಮೀನು ಅರ್ಜಿಯ ಮೇಲೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ? ಆಕೆ ನಿಜವಾಗಿಯೂ ಗರ್ಭಿಣಿಯೇ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ತಂತ್ರವೇ? ಎಂಬುದು ಈಗ ಕುತೂಹಲ ಮೂಡಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries