HEALTH TIPS

10,000 ರೂ. ಮೇಲ್ಪಟ್ಟ ಆನ್‌ ಲೈನ್ ವರ್ಗಾವಣೆಗೆ 1 ಗಂಟೆ ವಿಳಂಬ; RBI ಪ್ರಸ್ತಾವಕ್ಕೆ ಬ್ಯಾಂಕ್‌ ಗಳ ವಿರೋಧ

ನವದೆಹಲಿ: 10,000 ರೂ.ಗಿಂತ ಹೆಚ್ಚಿನ ಮೊತ್ತದ ಆನ್‌ಲೈನ್ ವಹಿವಾಟುಗಳನ್ನು ಒಂದು ಗಂಟೆ ವಿಳಂಬಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಪ್ರಸ್ತಾವಕ್ಕೆ ಬ್ಯಾಂಕ್‌ ಗಳು ಆಕ್ಷೇಪ ವ್ಯಕ್ತಪಡಿಸಿವೆ.

ಪ್ರಸ್ತಾಪಿತ 1 ಗಂಟೆಯ ವಿಳಂಬ ಸ್ವೀಕಾರಾರ್ಹವಾಗಿದ್ದರೂ, 10,000 ರೂ.ಗಳ ಮಿತಿಯನ್ನು ಕನಿಷ್ಠ 25,000 ರೂ.ಗೆ ಹೆಚ್ಚಿಸಬೇಕು ಎಂಬುದಾಗಿ ಹಲವು ಬ್ಯಾಂಕ್‌ ಗಳು RBIಯನ್ನು ಒತ್ತಾಯಿಸಿವೆ.

'ಬೆಳೆಯುತ್ತಿರುವ ಮತ್ತು ಮೌಲ್ಯಯುತ ಗ್ರಾಹಕರಿಗೆ 10,000 ರೂ. ಮಿತಿ ತುಂಬಾ ಕಡಿಮೆಯಾಗಿದೆ. RBI ಈ ಮಿತಿಯನ್ನು ಕನಿಷ್ಠ 25,000 ರೂ.ಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ಇದು ಯುಪಿಐ ವಹಿವಾಟುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಅಷ್ಟೇ ಅಲ್ಲದೆ, ತಂತ್ರಜ್ಞಾನದಲ್ಲಿ ಅಷ್ಟಾಗಿ ಮುಂದುವರಿಯದ ಕೆಲವು ಬ್ಯಾಂಕುಗಳಿಗೆ 'ಕಿಲ್ ಸ್ವಿಚ್‌' (ವಹಿವಾಟು ತಡೆಯುವ ವ್ಯವಸ್ಥೆ) ಜಾರಿಗೆ ತರುವುದು ಕಷ್ಟಕರವಾಗುತ್ತದೆ'' ಎಂದು ಸಾರ್ವಜನಿಕ ವಲಯದ ಬ್ಯಾಂಕೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅದೂ ಅಲ್ಲದೆ, ತೆರಿಗೆ ಪಾವತಿ ಮತ್ತು ತುರ್ತು ಸಂದರ್ಭಗಳ ವಹಿವಾಟುಗಳನ್ನು ಈ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದಾಗಿಯೂ ಬ್ಯಾಂಕ್‌ ಗಳು RBIಗೆ ಮನವಿ ಮಾಡಿವೆ.

ಕಳೆದ ತಿಂಗಳು, ಸೈಬರ್ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ RBI ನಾಲ್ಕು ಪ್ರಮುಖ ಉಪಕ್ರಮಗಳನ್ನು ಒಳಗೊಂಡ ಚರ್ಚಾ ಪತ್ರವೊಂದನ್ನು ಬಿಡುಗಡೆ ಮಾಡಿತ್ತು. ಅವುಗಳೆಂದರೆ: ದೊಡ್ಡ ಮೊತ್ತದ ವಹಿವಾಟುಗಳಿಗೆ ಹಣ ಕಳುಹಿಸುವಾಗ ಹಣ ವಿಳಂಬವಾಗಿ ಜಮೆಯಾಗುವುದು; ದೊಡ್ಡ ಮೊತ್ತದ ವಹಿವಾಟುಗಳಿಗಾಗಿ ಹೆಚ್ಚುವರಿ ದೃಢೀಕರಣ ಹಂತವನ್ನು ಅಳವಡಿಸುವುದು; ಸಾಕಷ್ಟು ಪರಿಶೀಲನೆಗೆ ಒಳಪಟ್ಟ ಖಾತೆಗಳಿಗೆ ಮಾತ್ರ ದೊಡ್ಡ ಮೊತ್ತದ ಹಣ ಸ್ವೀಕಾರಕ್ಕೆ ಅನುಮೋದನೆ ನೀಡುವುದು; ಮತ್ತು ದೊಡ್ಡ ಮೊತ್ತದ ಡಿಜಿಟಲ್ ವಹಿವಾಟುಗಳಿಗೆ ಗ್ರಾಹಕ-ಪ್ರೇರಿತ ನಿಯಂತ್ರಣಗಳನ್ನು ಅನ್ವಯಿಸುವುದು.

25 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಹಣವನ್ನು ಸ್ವೀಕರಿಸಲು ಸಾಕಷ್ಟು ಪರಿಶೀಲನೆಗೆ ಒಳಪಟ್ಟಿರುವ ಖಾತೆಗಳಿಗೆ ಮಾತ್ರ ಅವಕಾಶ ನೀಡಬೇಕು ಎಂಬ RBI ಪ್ರಸ್ತಾವವು ಪ್ರಾಯೋಗಿಕವಲ್ಲ ಎಂದು ಪಾವತಿ ಉದ್ಯಮದ ವಲಯದವರು ಹೇಳುತ್ತಾರೆ. ವಂಚಕರು ಈ ನಿಯಂತ್ರಣದಿಂದ ನುಣುಚಿಕೊಳ್ಳಲು 25 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಹಣ ಸ್ವೀಕಾರಕ್ಕಾಗಿ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ತೆರೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

►ಡಿಜಿಟಲ್ ವಂಚನೆಯಲ್ಲಿ ಏರಿಕೆ

ಡಿಜಿಟಲ್ ವಂಚನೆ ಪ್ರಕರಣಗಳ ಸಂಖ್ಯೆಯು 2024ರಲ್ಲಿ 24 ಲಕ್ಷದಷ್ಟಿದ್ದು, 2025ರಲ್ಲಿ 28 ಲಕ್ಷಕ್ಕೆ ಏರಿಕೆಯಾಗಿದೆ. ಮೌಲ್ಯದ ದೃಷ್ಟಿಯಿಂದ ನೋಡುವುದಾದರೆ, ಡಿಜಿಟಲ್ ವಂಚನೆಯ ಮೊತ್ತವು 2024ರಲ್ಲಿದ್ದ 22,848 ಕೋಟಿ ರೂ.ಗಳಿಂದ 2025ರಲ್ಲಿ 22,931 ಕೋಟಿ ರೂ.ಗೆ ಹೆಚ್ಚಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries