ಟೆಹರಾನ್: ಗಲ್ಫ್ ಪ್ರದೇಶದ ದೇಶಗಳು ಇನ್ನು ಮುಂದೆ ಅಮೆರಿಕದ ಸೇನಾ ನೆಲೆಗಳಿಗೆ ಗುರಾಣಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಗಡಿಯಾರದ ಮುಳ್ಳುಗಳು ಹಿಂದಕ್ಕೆ ತಿರುಗುವುದಿಲ್ಲ ಮತ್ತು ಈ ಪ್ರದೇಶದ ರಾಷ್ಟ್ರಗಳು ಮತ್ತು ಭೂಮಿಗಳು ಇನ್ನು ಮುಂದೆ ಅಮೆರಿಕದ ನೆಲೆಗಳಿಗೆ ಗುರಾಣಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.
ಗಲ್ಫ್ ಪ್ರದೇಶಗಳು ಇನ್ನು ಮುಂದೆ ಅಮೆರಿಕಕ್ಕೆ ಸುರಕ್ಷಿತ ಧಾಮವಾಗಿರುವುದಿಲ್ಲ. ಅಮೆರಿಕವು ಈ ಪ್ರದೇಶದಲ್ಲಿ ಸ್ಥಿರವಾಗಿ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಮತ್ತು ಪ್ರತೀ ದಿನ ಅದರ ಪ್ರತಿಷ್ಠೆ, ಸ್ಥಾನಮಾನ ಕುಸಿಯುತ್ತಿದೆ ಎಂದು ಮೊಜ್ತಬಾ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

