HEALTH TIPS

2025-26ರಲ್ಲಿ ಎಮಿರೇಟ್ಸ್ ವಾಯುಯಾನ ಸಂಸ್ಥೆಗೆ ದಾಖಲೆಯ ಲಾಭ

 ಅಬುದಾಭಿ: ಯುಎಇ ಮೂಲದ ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ ಎಮಿರೇಟ್ಸ್ ತನ್ನ ಇತಿಹಾಸದಲ್ಲೇ 2025-26ರ ಹಣಕಾಸು ವರ್ಷದಲ್ಲಿ ಅತ್ಯಧಿಕ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ಉದ್ಯೋಗಿಗಳಿಗೆ ಭಾರೀ ಮೊತ್ತದ ಬೋನಸ್ ಘೋಷಿಸಿದೆ.


ಎಮಿರೇಟ್ಸ್ ಸಂಸ್ಥೆಯ ಎಲ್ಲಾ 1.3 ಲಕ್ಷ ಉದ್ಯೋಗಿಗಳಿಗೆ ಅವರ 20 ವಾರಗಳ ವೇತನಕ್ಕೆ ಸಮಾನವಾದ ಬೋನಸ್ ನೀಡುವುದಾಗಿ ಅದು ತಿಳಿಸಿದೆ.

ಅಮೆರಿಕ-ಇಸ್ರೇಲ್-ಇರಾನ್ ಉದ್ವಿಗ್ನತೆಯು ಫೆಬ್ರುವರಿ-ಮಾರ್ಚ್ ಅವಧಿಯಲ್ಲಿ ವಾಯುಯಾನ ಕ್ಷೇತ್ರದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿತ್ತು. ಇಂತಹ ಸವಾಲಿನ ಸನ್ನಿವೇಶದಲ್ಲೂ ತನ್ನ ಉದ್ಯೋಗಿಗಳು ಎಮಿರೇಟ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿರುವುದಕ್ಕೆ ಕೃತಜ್ಞತೆಯಾಗಿ ಈ ಬೋನಸ್ ನೀಡುತ್ತಿರುವುದಾಗಿ ಸಂಸ್ಥೆ ಹೇಳಿದೆ.

'2026ರ ಮಾರ್ಚ್‌ನಲ್ಲಿ ಎದುರಾದ ಸವಾಲುಗಳು ಮರೆತುಹೋಗಬಹುದು. ಆದರೆ ನಿಮ್ಮ ಧೈರ್ಯ ಹಾಗೂ ಅಚಲವಾದ ಶಕ್ತಿಯನ್ನು ನಾವು ಮರೆಯಲಾರೆವು' ಎಂದು ಎಮಿರೇಟ್ಸ್ ಸಂಸ್ಥೆಯ ಚೇರ್‌ಮನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಖ್ತೂಮ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries