HEALTH TIPS

42 ಸಂವತ್ಸರ ಪೂರೈಸಿದ ಕಾಸರಗೋಡು ಜಿಲ್ಲೆ-ನಾಳೆ 'ಬೀಚ್ ರನ್' ಕಾರ್ಯಕ್ರಮ

ಕಾಸರಗೋಡು: ಜಿಲ್ಲೆ ರಚನೆಯಾದ 42ನೇ ವಾರ್ಷಿಕೋತ್ಸವದ ಅಂಗವಾಗಿ, ಜಿಲ್ಲಾಡಳಿತ, ಕಲೆಕ್ಟರೇಟ್ ಅಕ್ಷರ ಗ್ರಂಥಾಲಯ ಮತ್ತು ಜಿಲ್ಲಾ ಮಾಹಿತಿ ಕಚೇರಿ ವತಿಯಿಮದ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. 


ಕಾಸರಗೋಡು ಜಿಲ್ಲೆ ಚನೆಯಾಗಿ ಮೇ 24ರಂದು 42 ವರ್ಷಗಳನ್ನು ಪೂರೈಸುತ್ತಿದ್ದು,  ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ) ನೇತೃತ್ವದಲ್ಲಿ ಮೇ 24 ರಂದು ನೆಲ್ಲಿಕುಂಜೆಯಲ್ಲಿ 'ಬೀಚ್ ರನ್' ನಡೆಯಲಿದೆ. ಕಾಸರಗೋಡು ಜಿಲ್ಲೆ ರಚನೆಯಾಗಿ 42 ಸಂವತ್ಸರ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ಮೇ 23 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಮಾವಿನ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಮಾಹಿತಿ ಕಚೇರಿಯ ಪಿಆರ್ ಚೇಂಬರ್‍ನಲ್ಲಿ ನಡೆಯಲಿರುವ ಸಮರಂಭದಲ್ಲಿ ಎಡಿಎಂ ಕೆ.ವಿ. ಶ್ರುತಿ ಅಧ್ಯಕ್ಷತೆ ವಹಿಸುವರು.  ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸಮಾರಂಭ ಉದ್ಘಾಟಿಸುವರು.

ಇಂದು ರಸಪ್ರಶ್ನೆ ಸ್ಪರ್ಧೆ:

ಕಾಸರಗೋಡು ಜಿಲ್ಲೆ ರಚನೆಯ 42ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಡಳಿತವು ಜಿಲ್ಲಾ ವಾರ್ತಾ ಕಚೇರಿಯ ಸಹಯೋಗದೊಂದಿಗೆ 'ಕಾಸರಗೋಡು @ 42' ಎಂಬ ವಿಷಯದ ಕುರಿತು ಉದ್ಯೋಗಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ. 

ಮೇ 23 ರಂದು ಮಧ್ಯಾಹ್ನ 1.15 ಕ್ಕೆ ಜಿಲ್ಲಾ ವಾರ್ತಾ ಕಚೇರಿಯ ಪಿಆರ್ ಚೇಂಬರ್‍ನಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ತಮ್ಮ ಹೆಸರು, ಹುದ್ದೆ, ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ prdcontest@gmal.com  ಗೆ ನೋಂದಾಯಿಸಿಕೊಳ್ಳಬೇಕು. ನೇರ ನೋಂದಣಿ ಸೌಲಭ್ಯವೂ ಇರಲಿದ್ದು, ಈ ಬಗ್ಗೆ ಮಾಹಿತಿಗಾಗಿ  ದೂರವಾಣಿ ಸಂಖ್ಯೆ(04994 255 145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries