ಈ ಕಾರಣದಿಂದ ಸಂಗ್ರಾಮ್ ಅವರು ಯುಕೆ(ಯುನೈಟೆಡ್ ಕಿಂಗ್‌ಡಮ್) ಗೆ ಮರಳಲು ಸಾಧ್ಯವಾಗಲಿಲ್ಲ. ಕೇಸು, ಕೋರ್ಟು ಅಂತ ಅವರು 4 ತಿಂಗಳು ಭಾರತದಲ್ಲೇ ಇರಬೇಕಾಗಿ ಬಂತು.
ಮೇ 5 ರಂದು, ನ್ಯಾಯಮೂರ್ತಿ ಅಶ್ವಿನ್ ಡಿ ಭೋಬೆ ಅವರ ಏಕಸದಸ್ಯ ಪೀಠವು ಸಂಗ್ರಾಮ್ ಅವರಿಗೆ ಯುಕೆಗೆ ಹಿಂದಿರುಗಲು ಅನುಮತಿ ನೀಡಿತು. ಸಂಗ್ರಾಮ್ ಅವರು ತನಿಖಾ ಸಂಸ್ಥೆಗೆ ಅಗತ್ಯವಿರುವಾಗ ಹಾಜರಾಗುವುದಾಗಿ ಭರವಸೆ ನೀಡಿದ ನಂತರ "ಮೇ 11 ರಂದು ಅಥವಾ ಅದಕ್ಕೂ ಮೊದಲು" ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ (LOC) ಅನ್ನು ತಿದ್ದುಪಡಿ ಮಾಡುವಂತೆ ಪೀಠ ಮುಂಬೈ ಪೊಲೀಸರಿಗೆ ನಿರ್ದೇಶಿಸಿತ್ತು.
ಪತ್ನಿ , ಇಬ್ಬರು ಮಕ್ಕಳನ್ನು ಹೊಂದಿರುವ ಸಂಗ್ರಾಮ್ ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ (NHS)ಯಲ್ಲಿ ಅರಿವಳಿಕೆ ತಜ್ಞರಾಗಿದ್ದಾರೆ. ಯುಕೆಯಲ್ಲಿರುವ ಅವರ ಸಂಸ್ಥೆ ಕೆಲಸಕ್ಕೆ ಹಾಜರಾಗುವಂತೆ ಪದೇಪದೇ ನೋಟಿಸ್ ಕಳುಹಿಸುತ್ತಿತ್ತು. ಆದರೆ ಭಾರತದಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇನ್ನೇನು ಕೆಲಸ ಹೋಗುವ ಮಟ್ಟದ ಪರಿಸ್ಥಿತಿಯನ್ನು ಎದುರಿಸಿದ್ದರು ಪಾಟೀಲ್.
ನಾನು ಕೆಲಸಕ್ಕೆ ಗೈರುಹಾಜರಾಗಿದ್ದ ಕಾರಣ ನನ್ನ ಉದ್ಯೋಗದಾತರು ನನಗೆ ಹಲವು ನೋಟಿಸ್‌ಗಳನ್ನು ನೀಡಿದ್ದರು. ಒಂದು ಫೇಸ್‌ಬುಕ್ ಪೋಸ್ಟ್ ನಿಮ್ಮನ್ನು ಇಲ್ಲಿ 4 ತಿಂಗಳು ಬಂಧನದಲ್ಲಿಡುತ್ತದೆ ಎಂಬುದನ್ನು ಅವರಿಗೆ ಅರ್ಥಮಾಡಿಸುವುದು ಕಷ್ಟಕರವಾಗಿತ್ತು ಎಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ಜತೆಗೆ ಮಾತನಾಡಿದ ಪಾಟೀಲ್ ಹೇಳಿದ್ದಾರೆ. ಈ ನಾಲ್ಕು ತಿಂಗಳಲ್ಲಿ ನನ್ನ ಸಂಬಳ ನಷ್ಟವಾಯಿತು. ಕಾನೂನು ಹೋರಾಟಕ್ಕಾಗಿ ಖರ್ಚಾಗಿದ್ದು ಸುಮಾರು 50 ಲಕ್ಷ ರೂಪಾಯಿ ಎಂದು ಅವರು ಹೇಳಿದ್ದಾರೆ.
ಪಾಟೀಲ್ ಅವರ ಹುಟ್ಟೂರು ಜಲಗಾಂವ್. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅವರು ಜಲಗಾಂವ್‌ನಿಂದ ಮುಂಬೈಗೆ ಪತ್ನಿಯೊಂದಿಗೆ ಬಂದಿದ್ದರು. ಸೋಮವಾರದೊಳಗೆ ಅವರು ಹೊರಡುವಂತೆ ಮಾಡಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು. ನನ್ನ ಪತ್ನಿ ರವಿವಾರಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದಳು, ಆ ಸಮಯದಲ್ಲಿ ನಮಗೆ ಹೋಗಲು ಅವಕಾಶ ಸಿಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಅದಾಗಿಲ್ಲ, ಆಕೆ ನನ್ನೊಡನೆ ಇದ್ದು ಮಂಗಳವಾರ ಹೊರಡುವ ಯೋಜನೆ ಮಾಡಿದೆವು.
ಸಾಮಾಜಿಕ ಮಾಧ್ಯಮದಲ್ಲಿ 12 ಪದಗಳ ವಾಕ್ಯ ಪೋಸ್ಟ್ ಮಾಡಿದ್ದಕ್ಕೆ ಎಫ್‌ಐಆರ್ ಮತ್ತು ಲುಕ್ ಔಟ್ ಸುತ್ತೋಲೆ ಹೊರಡಿಸುವುದಾ ? ನಾನು ನನ್ನ ಕುಟುಂಬದಿಂದ ಬಹಳ ಸಮಯ ದೂರವಿದ್ದ ಕಾರಣ ಅವರು ಚಿಂತಿತರಾಗಿದ್ದರು. ನಾನು ನಾನು ನನ್ನ ಕೆಲಸವನ್ನು ಬಹುತೇಕ ಕಳೆದುಕೊಳ್ಳುವ ಸಾಧ್ಯತೆ ಇತ್ತು" ಎಂದು ಪಾಟೀಲ್ ಹೇಳಿದ್ದಾರೆ.
ಎಲ್‌ಒಸಿಗೆ ಕಾರಣವಾದ ಎಫ್‌ಐಆರ್ ಅನ್ನು 2025 ಡಿಸೆಂಬರ್ 18 ರಂದು ಬಿಜೆಪಿ ಮಹಾರಾಷ್ಟ್ರ ಘಟಕದ ಸಾಮಾಜಿಕ ಮಾಧ್ಯಮ ಸಂಯೋಜಕ ನಿಖಿಲ್ ಭಮ್ರೆ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಎರಡು ಪೋಸ್ಟ್‌ಗಳನ್ನು ಉಲ್ಲೇಖಿಸಿದೆ.ಒಂದು ಅಂತರರಾಷ್ಟ್ರೀಯ ಹಗರಣದಲ್ಲಿ ನಾಯಕರೊಬ್ಬರು ಭಾಗಿಯಾಗಿರುವುದರ ಬಗ್ಗೆ ಮೌನ ಯಾಕೆ ಎಂಬುದು. ಇನ್ನೊಂದು ಶೆಹರ್ ವಿಕಾಸ್ ಅಘಾಡಿ ಎಂಬ ಖಾತೆ ನಾಯಕನಿಗೆ ಕೆಲವು ಜನರೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದಾಗಿದೆ. ಶೆಹರ್ ವಿಕಾಸ್ ಅಘಾಡಿ ಎಂಬುದು ಫೇಸ್ ಬುಕ್ ಪೇಜ್ ಆಗಿದ್ದು, ಇದರ ಜತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಪಾಟೀಲ್ ಹೇಳಿಕೊಂಡಿದ್ದಾರೆ.
ಒಂದು ಪೋಸ್ಟ್ ನಿಂದ ಇಷ್ಟೆಲ್ಲಾ ಅನುಭವಿಸಿದ್ದಾಯ್ತು, ಈ ಪೋಸ್ಟ್ ಹಾಕಿದ್ದಕ್ಕೆ ವಿಷಾದವಿದೆಯೇ ಎಂದು ಕೇಳಿದಾಗ ಪಾಟೀಲ್ ಹೀಗೆ ಉತ್ತರಿಸಿದ್ದಾರೆ. " ವಿಷಾದವಿಲ್ಲ, ಆ ಪೋಸ್ಟ್ ಅಪರಾಧವೇನೂ ಅಲ್ಲ. ಆ ಪೋಸ್ಟ್‌ಗೆ ಅನ್ವಯಿಸಲಾದ ವಿಭಾಗವು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ 353 (2) ಆಗಿದ್ದು, ಇದು ವಿವಿಧ ಧಾರ್ಮಿಕ, ಜನಾಂಗೀಯ, ಸಾಮಾಜಿಕ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಪೋಸ್ಟ್‌ಗಳನ್ನು ಹಾಕುವ ಬಗ್ಗೆ ವ್ಯವಹರಿಸುತ್ತದೆ. ಇದು ನನ್ನ ಪೋಸ್ಟ್‌ಗೆ ಅನ್ವಯಿಸುವುದಿಲ್ಲ. ನನ್ನ ಪೋಸ್ಟ್ ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ, ನನ್ನ ಪೋಸ್ಟ್‌ನಲ್ಲಿ ಯಾವುದೇ ದ್ವೇಷ ಭಾಷಣವಿಲ್ಲ."
"ನಾನು ಹಂಚಿಕೊಂಡ ವಿಷಯದಿಂದ ಯಾರಿಗಾದರೂ ನೋವಾಗಿದ್ದರೆ ನನಗೆ ನಿಜವಾಗಿಯೂ ವಿಷಾದವಿದೆ. ಆದರೆ ನಾವು ಕೆಟ್ಟ ಅಭಿರುಚಿ ಮತ್ತು ಕಾನೂನುಬಾಹಿರ ಚಟುವಟಿಕೆಯ ನಡುವೆ ವ್ಯತ್ಯಾಸವನ್ನು ಗುರುತಿಸಬೇಕು. ನೀವು ಅದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಬಹುದು ಆದರೆ ನೀವು ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಅಂತಾರೆ ಪಾಟೀಲ್ .
2015 ರವರೆಗೆ ಜಲಗಾಂವ್‌ನಲ್ಲಿ ಬಡ ಜನರಿಗಾಗಿ ಕೆಲಸ ಮಾಡಿದ ನಂತರ, ಪಾಟೀಲ್ ಯುಕೆಗೆ ತೆರಳಿದ್ದರು. ಅವರ ಮಕ್ಕಳು ಅಲ್ಲಿಯೇ ಹುಟ್ಟಿ ಬೆಳೆದದ್ದು ಪಾಟೀಲ್ ಅವರು ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಅವರು ಯುಕೆ ಪೌರತ್ವವನ್ನು ಪಡೆದಿದ್ದಾರೆ.
ನಿರ್ದಿಷ್ಟ ಪೋಸ್ಟ್ ಬಗ್ಗೆ ಮಾತಾಡಿದ ಪಾಟೀಲ್, "ನಾನು ಸಾಮಾಜಿಕ ಮಾಧ್ಯಮದಲ್ಲಿ ನನ್ನ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೆ. ಕೋವಿಡ್ ಸಮಯದಲ್ಲಿ, ಸಾಂಕ್ರಾಮಿಕ ರೋಗವನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನನ್ನ ಕೆಲವು ಪೋಸ್ಟ್‌ಗಳು ವೈರಲ್ ಆದಾಗ ನನ್ನ ಅನುಯಾಯಿಗಳ ಸಂಖ್ಯೆ ಹೆಚ್ಚಾಯಿತು. ನಾನು ಬಹಿರಂಗವಾಗಿ ಪ್ರಶ್ನೆಗಳನ್ನು ಎತ್ತುತ್ತಿರುವ ಕಾರಣ ನನ್ನನ್ನು ಗುರಿಯಾಗಿಸಬಹುದು ಎಂದು ನನ್ನ ಆಪ್ತರು ಎಚ್ಚರಿಸಿದ್ದರು. ನನ್ನನ್ನು ಟ್ರೋಲ್ ಮಾಡಲಾಗಿತ್ತು. ಆದ್ದರಿಂದ, ನನ್ನ ಪೋಸ್ಟ್‌ಗಳಿಗೆ ನಾನು ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂಬ ಕಲ್ಪನೆ ನನಗಿದ್ದರೂ, ಫೇಸ್‌ಬುಕ್‌ನಲ್ಲಿನ ಈ ಒಂದು ವಾಕ್ಯವು ಎಫ್‌ಐಆರ್ ಮತ್ತು 4 ತಿಂಗಳ ಎಲ್‌ಒಸಿಗೆ ಕಾರಣವಾಗಬಹುದು ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ.
ಮೊದಲು ಬಂಧಿಸಲ್ಪಟ್ಟ ಆ ರಾತ್ರಿಯ ಬಗ್ಗೆ ಪಾಟೀಲ್ ಹೀಗಂತಾರೆ- "ಜನವರಿ 10 ರಂದು ಬೆಳಗಿನ ಜಾವ 2.30 ರ ಸುಮಾರಿಗೆ ನಾನು ನನ್ನ ಹೆಂಡತಿಯೊಂದಿಗೆ ನಗರಕ್ಕೆ ಬಂದಿದ್ದೆ. ನಮ್ಮನ್ನು ಮನೆಗೆ ಕರೆದೊಯ್ಯಲು ಒಂದು ಕಾರು ಹೊರಗೆ ಕಾಯುತ್ತಿತ್ತು. ನನ್ನ ವಿರುದ್ಧ ಪ್ರಕರಣವಿದ್ದು, ಪೊಲೀಸರು ಶೀಘ್ರದಲ್ಲೇ ಬರಲಿದ್ದಾರೆ ಎಂದು ವಲಸೆ ಅಧಿಕಾರಿಗಳು ಕಾಯುವಂತೆ ನನಗೆ ಹೇಳಿದರು. ನನ್ನ ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಲ್ಲಿ ಏನೋ ದೊಡ್ಡ ತಪ್ಪಾಗಿರಬೇಕು ಎಂದು ನಾನು ಭಾವಿಸಿದೆ, ಅದಕ್ಕಾಗಿ ಅವರು ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಪ್ರಜೆಯನ್ನು ತಡೆದು LOC ನೀಡಿರಬೇಕು. ಹಾಗಾಗಿ, ಅದು ಏನಾಗಿರಬಹುದು ಎಂದು ನಾನು ಯೋಚಿಸುತ್ತಿದ್ದೆ. ಆದರೆ ಪೊಲೀಸರು ನನ್ನನ್ನು ಅಪರಾಧ ಶಾಖೆಯ ಘಟಕಕ್ಕೆ ಕರೆದೊಯ್ದು ಪೋಸ್ಟ್ ತೋರಿಸಿದ ನಂತರ, ನಾನು ಶಾಕ್ ಆದೆ. ಸಂಜೆ 6 ಗಂಟೆಯವರೆಗೆ ನನ್ನನ್ನು ಅಲ್ಲಿಯೇ ಕೂರಿಸಿ ನಂತರ ವಿಚಾರಣೆಗೆ ಒಳಪಡಿಸಲಾಯಿತು. "
ಜನವರಿ 19 ರಂದು ನಾನು ಹೊರಡಬೇಕಿತ್ತು. ಜನವರಿ 16 ರಂದು ವಿಚಾರಣೆಗೆ ಕರೆಸಲಾಯಿತು. ಅವರ ಪ್ರಶ್ನೆಗಳಿಗೆ ಉತ್ತರಿಸಿದ ನಂತರ LOC ಅನ್ನು ತೆಗೆದುಹಾಕಲಾಗುತ್ತದೆ ಎಂದು ತಿಳಿಸಲಾಯಿತು. ಜನವರಿ 19 ರಂದು ನಾನು ಯುಕೆಗೆ ಪ್ರಯಾಣಿಸಲು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದಾಗ, ಎಲ್‌ಒಸಿ ಇನ್ನೂ ಜಾರಿಯಲ್ಲಿದೆ ಎಂದು ಅವರಿಗೆ ತಿಳಿಸಲಾಯಿತು, ಇದರಿಂದಾಗಿ ಅವರು ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ.
ಇದು ದೀರ್ಘ ಹೋರಾಟವಾಗಲಿದೆ ಎಂದು ನನಗೆ ಅರಿವಾಯಿತು. ಜನವರಿ 21 ರಂದು ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ,ನನಗೆ ಹೋಗಲು ಅನುಮತಿ ಸಿಕ್ಕಿತು.
"ನನ್ನನ್ನು ಕೊನೆಯ ಬಾರಿಗೆ ವಿಚಾರಣೆಗೆ ಒಳಪಡಿಸಿದ್ದು 2026 ಜನವರಿ 21ರಂದು. ನಾನು ಪೊಲೀಸ್ ಇಲಾಖೆಗೆ ಸುಮಾರು 15 ಬಾರಿ ಇಮೇಲ್ ಮಾಡಿದ್ದೇನೆ. ನೀವು ನನ್ನನ್ನು ಇಲ್ಲಿಯೇ ಇರಿಸಿಕೊಂಡಿದ್ದರೆ, ವಿಚಾರಣೆ ಮಾಡಿ, ನಿಮ್ಮ ಪ್ರಶ್ನೆಯನ್ನು ಮುಗಿಸಿ. ನೀವು ಫೇಸ್‌ಬುಕ್, ಮೆಟಾದಿಂದ ಏನಾದರೂ ತಿಳಿದುಕೊಂಡಿದ್ದರೆ... ಅದರ ಬಗ್ಗೆ ನನ್ನನ್ನು ವಿಚಾರಣೆ ಮಾಡಿ. ನೀವು ಸಂವಹನ ನಡೆಸಲು ಹೋಗದಿದ್ದರೆ, ನನ್ನನ್ನು ಹೋಗಲು ಬಿಡಿ. ಏಕೆಂದರೆ ನಾನು NHS ನಲ್ಲಿ ಪೂರ್ಣ ಸಮಯದ ಸಲಹೆಗಾರ. ಇಷ್ಟೆಲ್ಲಾ ಮಾಡಿದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಈ ಅನುಭವದಿಂದ ಇನ್ಮುಂದೆ ನೀವು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಕೇಳಿದಾಗ, "ನನ್ನ ಎಲ್ಲಾ ಖಾತೆಗಳು ಇನ್ನೂ ಸಕ್ರಿಯವಾಗಿವೆ. ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ಮತ್ತು ನಾನು ಇಲ್ಲಿ ಪ್ರವಾಸಿ ವೀಸಾದಲ್ಲಿರುವುದರಿಂದ ನಾನು ಅವುಗಳಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ನಾನು ರಾಜಕೀಯ ಅಥವಾ ಇತರ ಯಾವುದೇ ವಿಷಯಗಳ ಬಗ್ಗೆ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದೇನೆ ಏಕೆಂದರೆ ಒಬ್ಬ ಪ್ರವಾಸಿಯಾಗಿ, ಸರಿಯಾದ ನಾಗರಿಕನಿಗೆ ಇರುವ ಎಲ್ಲಾ ಸವಲತ್ತುಗಳು ನನಗಿಲ್ಲದಿರಬಹುದು. ಆದರೆ ನಾನು ಭವಿಷ್ಯದಲ್ಲಿ ಪೋಸ್ಟ್ ಮಾಡಬಾರದು ಮತ್ತು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದಿದ್ದಾರೆ.
ಪಾಟೀಲ್ ಮಂಗಳವಾರ ಬೆಳಿಗ್ಗೆ ವಿಮಾನ ಹತ್ತಿದ್ದಾರೆ. ಅವರನ್ನು ಸ್ವಲ್ಪ ಸಮಯದವರೆಗೆ ತಡೆದು ನಿಲ್ಲಿಸಿ ವಲಸೆ ಅಧಿಕಾರಿಗಳು ವ್ಯವಸ್ಥೆಯಲ್ಲಿ ಕೆಲವು ವಿಷಯಗಳನ್ನು ದೃಢಪಡಿಸಿದರು. ನಂತರ ಅವರು ಹೋಗಲು ಅವಕಾಶ ನೀಡಿದರು. ಮಂಗಳವಾರ ರಾತ್ರಿಯ ಹೊತ್ತಿಗೆ ಅವರು ಯುಕೆಯಲ್ಲಿರುವ ತಮ್ಮ ಮನೆ ಸೇರಿದ್ದಾರೆ.

