ಅಹಮದಾಬಾದ್: ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಎರಡು ಸಿಂಹದ ಮರಿಗಳು ಹಾಗೂ ಮೂರು ಸಿಂಹಗಳು ಮೃತಪಟ್ಟಿವೆ. ಸಿಂಹದ ಮರಿಗಳು ಬೆಬೆಸಿಯಾ ವೈರಾಣು ಸೋಂಕಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅರಣ್ಯ ಸಚಿವರಾದ ಅರ್ಜುನ್ ಮೊದ್ವಾಡಿಯಾ ಈ ಕುರಿತು ಮಂಗಳವಾರ ಮಾಹಿತಿ ನೀಡಿದ್ದಾರೆ.
'ವೈರಾಣು ಸೋಂಕಿನಿಂದ ಎರಡು ಸಿಂಹದ ಮರಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಎರಡೂ ಮರಿಗಳು ಅರಣ್ಯದ ಬೇರೆ ಬೇರೆ ಪ್ರದೇಶದಲ್ಲಿ ಮೃತಪಟ್ಟಿದ್ದು, ಬೇರೆ ಪ್ರಾಣಿಗಳಿಗೆ ಸೋಂಕು ಹರಡಿರುವ ಸಾಧ್ಯತೆ ಇಲ್ಲ' ಎಂದಿದ್ದಾರೆ.
ಅಲ್ಲದೇ, 'ಇತರ ಮೂರು ಸಿಂಹಗಳ ಪೈಕಿ ಎರಡು ಸಿಂಹಗಳು ಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿದ್ದು, ಇನ್ನೊಂದು ಸಿಂಹ ಕಾದಾಟದಲ್ಲಿ ಮೃತಪಟ್ಟಿದೆ. ಇವು ಅಸಹಜ ಸಾವುಗಳಲ್ಲ ಹಾಗಾಗಿ ಚಿಂತಾಜನಕವಾದ ಪರಿಸ್ಥಿತಿ ಏನೂ ಇಲ್ಲ' ಎಂದೂ ಸಚಿವ ತಿಳಿಸಿದ್ದಾರೆ.

