HEALTH TIPS

ಉತ್ತರ ಪ್ರದೇಶ ಸಂಪುಟ ವಿಸ್ತರಣೆ: ಯೋಗಿ ಸರ್ಕಾರಕ್ಕೆ ಆರು ಹೊಸ ಸಚಿವರ ಸೇರ್ಪಡೆ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು, ಈ ಪೈಕಿ ಇಬ್ಬರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಿದ್ದರೆ, ನಾಲ್ವರಿಗೆ ರಾಜ್ಯ ಸಚಿವರ ಸ್ಮಾನಮಾನ ನೀಡಲಾಗಿದೆ. ಇದಲ್ಲದೇ ಇಬ್ಬರು ರಾಜ್ಯ ಸಚಿವರಿಗೆ ಸ್ವತಂತ್ರ ಖಾತೆ ನೀಡಲಾಗಿದೆ.

ಜನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇಂದ್ರ ಚೌಧರಿ ಹಾಗೂ ಎಸ್.ಪಿ ಮನೋಜ್‌ ಪಾಂಡೆ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ನಡುವೆ, ಈ ಹಿಂದೆ ರಾಜ್ಯ ಸಚಿವರಾಗಿದ್ದ ಅಜಿತ್ ಪಾಲ್ ಸಿಂಗ್ ಮತ್ತು ಸೋಮೇಂದ್ರ ತೋಮರ್ ಅವರಿಗೆ ಬಡ್ತಿ ನೀಡಲಾಗಿದ್ದು, ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರಾಗಿ ಜವಾಬ್ದಾರಿ ನೀಡಲಾಗಿದೆ.

ಕೃಷ್ಣ ಪಾಸ್ವಾನ್‌, ಸುರೇಂದ್ರತ ದಿಲೆರ್, ಹಂಸರಾಜ್‌ ವಿಶ್ವಕರ್ಮ ಹಾಗೂ ಕೈಲಾಶ್‌ ರಜಪೂತ್ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವರಾದ ಅಜಿತ್‌ ಪಾಲ್‌ ಸಿಂಗ್ ಮತ್ತು ಸೋಮೇಂದ್ರ ತೋಮರ್‌ ಅವರಿಗೆ ಸ್ವತಂತ್ರ ಖಾತೆಗಳನ್ನು ನೀಡಲಾಗಿದೆ.

2024ರ ಮಾರ್ಚ್‌ನಲ್ಲಿ ಯೋಗಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ನಡೆದಿತ್ತು. ಆಗ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್, ಆರ್‌ಎಲ್‌ಡಿಯ ಅನಿಲ್ ಕುಮಾರ್, ಸುನಿಲ್ ಕುಮಾರ್ ಶರ್ಮಾ ಮತ್ತು ದಾರಾ ಸಿಂಗ್ ಚೌಹಾಣ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries