HEALTH TIPS

ಕಬ್ಬಿನ ಗದ್ದೆಯಲ್ಲೂ ಬಿಡದ ಶೋಷಣೆ: ಕೂಲಿಗಾಗಿ ಗರ್ಭಕೋಶವನ್ನೇ ತೆಗೆಯುವ ಮಹಿಳೆಯರು

ಮಹಾರಾಷ್ಟ್ರ: ಮುಟ್ಟಿನ ಸಹಜ ದೇಹಭಾದೆಯಿಂದ ಪಾರಾಗಲು ರಜೆ ಮಾಡಿದರೆ ಕೂಲಿ ಕೊಡದಿರುವುದು ಮಾತ್ರವಲ್ಲ, ದಂಡವನ್ನೂ ವಿಧಿಸುವ ದೌರ್ಜನ್ಯ ಇಂದಿಗೂ ಇರುವುದು ಹಾಗೂ ಅದರಿಂದ ಪಾರಾಗಲು ಮಹಾರಾಷ್ಟ್ರದ ಕಡುಬಡತನದ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಆಘಾತಕಾರಿ ಬೆಳವಣಿಗೆಯು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸುದ್ದಿಯಾಗುತ್ತಿರುವುದು ದೇಶವ್ಯಾಪಿ ಚರ್ಚೆಯಾಗುತ್ತಿದೆ.

ದಶಕಗಳಿಂದ ಅಲ್ಲಲ್ಲಿ ವರದಿಯಾಗುತ್ತಿದ್ದ ಈ ವಿಷಯವು ಈಗ ಮಹಿಳೆಯರ ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳು, ಕೂಲಿ ಕಾರ್ಮಿಕರ ಶೋಷಣೆಯ ‌ಬಗ್ಗೆ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟಿದೆ. ಇತ್ತೀಚಿನ ವರದಿಗಳು ಈ ಕುರಿತು ಹೊಸ ಮಾಹಿತಿಗಳನ್ನು ಹೊರಹಾಕಿವೆ.

ಮುಟ್ಟಾದವರಿಗೆ ಕೆಲಸವಿಲ್ಲ:

ಕೆಲಸಕ್ಕಾಗಿ ಮಹಿಳೆಯರು ತಮ್ಮ ಗರ್ಭಕೋಶವನ್ನೇ ಕಿತ್ತೆಸೆಯಲು ಹೊರಟಿರಲು ಬಹುಮುಖ್ಯ ಕಾರಣ ಬದುಕು .

ಮುಟ್ಟಿನ ದಿನಗಳಲ್ಲಿ ಹೆಂಗಸರು ಕೆಲಸಕ್ಕೆ ಗೈರಾಗುತ್ತಾರೆ. ಇದರಿಂದ ಕೆಲಸ ಕುಂಠಿತಗೊಳ್ಳುತ್ತದೆ ಎಂದು ನೆಪವೊಡ್ಡಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಗುತ್ತಿಗೆದಾರರು ಹಿಂಜರಿಯುತ್ತಾರೆ. ಇದೇ ಮಹಿಳೆಯರನ್ನು ಗರ್ಭಕೋಶ ರಹಿತರನ್ನಾಗಿ ಮಾಡಲು ಪ್ರೇರಪಿಸಿದೆ ಎಂದು ವರದಿಗಳು ಬಹಿರಂಗಪಡಿಸಿವೆ.

ಅಲ್ಲದೇ, ಶಸ್ತ್ರಚಿಕಿತ್ಸೆಯು ಮುಟ್ಟಿನ ನೋವಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಮಹಿಳೆಯರಿಗೆ ನಂಬಿಸಲಾಗುತ್ತಿದೆ ಎಂದು ಅದು ತಿಳಿಸಿದೆ.

ಇತ್ತೀಚೆಗೆ ಪ್ರಕಟವಾದ ಮಾಹಿತಿ ಪ್ರಕಾರ, 2024ರ ಕಟಾವು ಹಂಗಾಮಿಗೆ ಮೊದಲು 843 ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಅದರಲ್ಲಿ 477 ಮಹಿಳೆಯರು 30 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ.

ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ 13,000 ಕ್ಕೂ ಹೆಚ್ಚು ಮಹಿಳೆಯರು ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದಿದೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ 14 ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.

ಶೋಷಣೆಯ ವೇತನ ಪದ್ಧತಿ

ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಾಮಾನ್ಯವಾಗಿ ವಲಸೆ ಕಾರ್ಮಿಕ ತಂಡಗಳ ಭಾಗವಾಗಿ ಕೆಲಸ ಮಾಡುತ್ತಾರೆ. ಅವರು ಹೆಚ್ಚಾಗಿ ಗುತ್ತಿಗೆದಾರರ ಅಡಿಯಲ್ಲಿ 'ಜೋಡಿ'ಗಳಾಗಿ (ಗಂಡ ಮತ್ತು ಹೆಂಡತಿ ಅಥವಾ ಇಬ್ಬರು ಕಾರ್ಮಿಕರು) ನೇಮಕಗೊಳ್ಳುತ್ತಾರೆ.

  • ಕಾರ್ಮಿಕರಿಗೆ ಅವರು ಕತ್ತರಿಸುವ ಕಬ್ಬಿನ ಪ್ರಮಾಣದ (ಪ್ರತಿ ಟನ್ ಕಬ್ಬಿಗೆ ಇಂತಿಷ್ಟು ಎಂದು) ಆಧಾರದ ಮೇಲೆ ಕೂಲಿ ನೀಡಲಾಗುತ್ತದೆ.

  • ಕೆಲಸಕ್ಕೆ ಗೈರುಹಾಜರಾದರೆ, ಕೇವಲ ಒಂದು ದಿನವಾದರೂ ದಿನಕ್ಕೆ ₹500 ರಿಂದ ₹1,000ವರೆಗೆ ದಂಡ ವಿಧಿಸಬಹುದು. ಈ ದಂಡದ ಮೊತ್ತವು ಹಲವು ಬಾರಿ ಅವರ ದೈನಂದಿನ ಕೂಲಿಗಿಂತಲೂ ಹೆಚ್ಚಾಗಿರುತ್ತದೆ.

  • ಮುಟ್ಟು, ಗರ್ಭಧಾರಣೆ ಅಥವಾ ಅನಾರೋಗ್ಯವು ಅವರ ಆದಾಯದ ಸ್ಥಿರತೆಯ ಮೇಲೆ ನೇರವಾದ ಮತ್ತು ಗಂಭೀರವಾದ ಪರಿಣಾಮ ಬೀರುತ್ತದೆ.

ಮೂಲಭೂತ ಸೌಕರ್ಯಗಳ ಕೊರತೆ

  • ಕಬ್ಬಿನ ಗದ್ದೆಗಳಲ್ಲಿ ಶೌಚಾಲಯಗಳು ಇಲ್ಲ ಮತ್ತು ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ

  • ತೀವ್ರವಾದ ಬಿಸಿಲಿನಲ್ಲಿ ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ಕೆಲಸ.

  • ಮುಟ್ಟಿನ ದಿನಗಳಲ್ಲಿ ರಜೆ ತೆಗೆದುಕೊಳ್ಳುವ ಹಾಗಿಲ್ಲ.

ಶಸ್ತ್ರಚಿಕಿತ್ಸೆಗೆ ಕಾರಣವೇನು?

ಎಲ್ಲ ಮಹಿಳೆಯುರು ಬಲವಂತದಿಂದ ಗರ್ಭಾಕೋಶ ತೆಗೆಯುವ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಕೆಲವೊಬ್ಬರು ಒತ್ತಾಯದಿಂದ ಚಿಕಿತ್ಸೆಗೆ ಒಳಗಾದರೆ, ಹಲವರು ಸಾಲ ಮತ್ತು ತಪ್ಪು ಮಾಹಿತಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದಿದ್ದಾರೆ.

  • ರಜೆ ತಪ್ಪಿಸಲು: ಮುಟ್ಟಿನ ಸಮಯದಲ್ಲಿ ಕೆಲಸಕ್ಕೆ ಗೈರುಹಾಜರಾಗುವ ಮಹಿಳಾ ಕಾರ್ಮಿಕರಿಗೆ ದಂಡ ವಿಧಿಸಲಾಗುತ್ತದೆ. ಇದರಿಂದ ಪಾರಾಗಲು ಈ ನಿರ್ಧಾರ ಮಾಡುತ್ತಾರೆ.

  • ಮುಟ್ಟಿನ ಆರೋಗ್ಯದ ಬಗ್ಗೆ ಅರಿವಿನ ಕೊರತೆ: ಅನೇಕ ಮಹಿಳೆಯರಿಗೆ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಯ ಪರ್ಯಾಯ ಮಾರ್ಗಗಳ ಬಗ್ಗೆ ಅಥವಾ ಅದರಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ.

  • ಸಾಲದ ಹೊರೆ: ಸಾಲದ ಸುಳಿಯಲ್ಲಿ ಸಿಲುಕಿರುವ ಮಹಿಳೆಯರು ಮುಟ್ಟ ಅನ್ನು ಒಂದು ಸಮಸ್ಯೆಯಾಗಿ ನೋಡುತ್ತಾರೆ. ಪದೇ ಪದೇ ಮುಟ್ಟಾಗುದರಿಂದ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಭಾವಿಸುವ ಅವರು, ಒಂದು ಬಾರಿ ಚಿಕಿತ್ಸೆಗೆ ಒಳಗಾದರೆ ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಭಾವಿಸುತ್ತಾರೆ.

  • ಖಾಸಗಿ ಆಸ್ಪತ್ರೆಗಳಿಂದ ಒತ್ತಡ: ಕೆಲವು ಖಾಸಗಿ ಕ್ಲಿನಿಕ್‌ಗಳು ಅನಗತ್ಯವಾಗಿ ಗರ್ಭಾಶಯ ತೆಗೆಯುವ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಿವೆ ಎಂಬ ಆರೋಪವೂ ಇವೆ.

ಅರಿವಿನ ಕೊರತೆ ಮತ್ತು ಅಸಹಾಯಕತೆ

ಇಂತಹ ವಿಷಯಗಳಲ್ಲಿ ಮಹಿಳೆಯರಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದ್ದು, ಇದರ ಲಾಭವನ್ನು ಖಾಸಗಿ ಆಸ್ಪತ್ರೆಗಳು ಮಾಡಿಕೊಳ್ಳುತ್ತಿವೆ ಎಂದು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಗರ್ಭಾಶಯ ತೆಗೆಯುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂಬ ಸುಳ್ಳುಗಳನ್ನು ಹೇಳಿ ಮಹಿಳೆಯರು ಚಿಕಿತ್ಸೆಗೆ ಒಳಗಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ನೀರುಗುಳ್ಳೆ ಅಂತಹ ಸಣ್ಣ ಸಮಸ್ಯೆಗಳಿಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಲ್ಲಿ, ಪದೇ ಪದೇ ಕಾಡುವ ಅನಾರೋಗ್ಯದ ಭಯ, ಕೂಲಿ ನಷ್ಟ ಮತ್ತು ಸಾಮಾಜಿಕ ಒತ್ತಡವು ಇಂತಹ ಮನಸ್ಥಿತಿಯನ್ನು ಸೃಷ್ಟಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ಅನೇಕ ಮಹಿಳೆಯರು ವೈದ್ಯಕೀಯ ಸಲಹೆಯನ್ನು ಪ್ರಶ್ನಿಸಲು ಸಾಧ್ಯವಾಗದಂತಹ ಅಸಹಾಯಕ ಸ್ಥಿತಿಗೆ ತಲುಪುತ್ತಾರೆ ಎಂದು ಹೇಳಿದ್ದಾರೆ.

ಆರೋಗ್ಯ ಸಮಸ್ಯೆ:

ಗರ್ಭಕೋಶ ತೆಗೆಯುವ ಚಿಕಿತ್ಸೆಯಿಂದ ಹಲವು ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತಿದೆ. ಈ ಚಿಕಿತ್ಸೆ ಒಳಗಾಗುವವರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರಾಗಿದ್ದು, ಗರ್ಭಕೋಶ ತೆಗೆಯುವ ಮುನ್ನ ಮತ್ತು ನಂತರ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ಮಾಡಬೇಕೆಂಬ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಅಲ್ಲದೇ ಹೆಚ್ಚಿನ ಮಹಿಳೆಯರು ಚಿಕಿತ್ಸೆ ನಂತರ ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳುವುರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಲಾಗಿದೆ.

  • ಹಾರ್ಮೋನ್ ಅಸಮತೋಲನ

  • ಮೂಳೆ ಸವಕಳಿಯ ಅಪಾಯ ಹೆಚ್ಚಾಗುವುದು

  • ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು

  • ಆತಂಕ, ಖಿನ್ನತೆ ಮತ್ತು ಭಾವನಾತ್ಮಕ ಒತ್ತಡ ಸೇರಿದಂತೆ ಮಾನಸಿಕ ಆರೋಗ್ಯ ಮೇಲೆ ಪರಿಣಾಮ

  • ಒಟ್ಟಾರೆ ಜೀವನದ ಗುಣಮಟ್ಟ ಕುಸಿಯುವುದು

ಸರ್ಕಾರದ ಕ್ರಮವೇನು

ಹಲವು ದಶಕಗಳಿಂದ ಈ ಬಗ್ಗೆ ವರದಿಗಳು ಬರುತ್ತಿದ್ದರು ಮಹಾರಾಷ್ಟ್ರದ ಯಾವ ಸರ್ಕಾರಗಳು ಇದರ ಬಗ್ಗೆ ಗಂಭೀರ ಕ್ರಮಗಳೇನು ತೆಗೆದುಕೊಂಡಿಲ್ಲ. ಇತ್ತೀಚೆಗೆ ಈ ವಿಚಾರವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದಂತೆ ತನಿಖಾ ಸಮಿತಿಯನ್ನು ಪುನರ್‌ ರಚಿಸಿದೆ.

  • ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗಳ ಪ್ರಮಾಣ ಹೆಚ್ಚಿರುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವುದು.

  • ಅನಗತ್ಯ ಶಸ್ತ್ರಚಿಕಿತ್ಸಾ ವಿಧಾನಗಳ ಕುರಿತು ತನಿಖೆ ನಡೆಸುವುದು.

  • ಕಬ್ಬು ಕತ್ತರಿಸುವ ಕಾರ್ಮಿಕ ಪದ್ಧತಿಯಲ್ಲಿ ಗುತ್ತಿಗೆದಾರರ ಕಾರ್ಯವೈಖರಿಯನ್ನು ಪರಿಶೀಲಿಸುವುದು.

  • ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries