HEALTH TIPS

ಎಬೋಲಾ: ಜಾಗರೂಕರಾಗಿರಲು ಪೀಪಲ್ಸ್‌ ಹೆಲ್ತ್‌ ಆರ್ಗನೈಸೇಷನ್‌ ಇಂಡಿಯಾ ಸಲಹೆ

 ಮುಂಬೈ: ಭಾರತದಲ್ಲಿ ಶಂಕಿತ ಎಬೋಲಾ ಪ್ರಕರಣಗಳು ವರದಿಯಾದ ಕಾರಣ, ಜನರು ಜಾಗರೂಕರಾಗಿರುವಂತೆ ಪೀಪಲ್ಸ್‌ ಹೆಲ್ತ್‌ ಆರ್ಗನೈಸೇಷನ್‌ ಇಂಡಿಯಾ (ಪಿಎಚ್‌ಒ) ಸೂಚಿಸಿದೆ. ಅಲ್ಲದೇ ತಪ್ಪು ಮಾಹಿತಿ ಮತ್ತು ಅನಗತ್ಯ ಭೀತಿ ಸೃಷ್ಟಿಸದಂತೆಯೂ ಎಚ್ಚರಿಕೆ ನೀಡಿದೆ.


ಸಾರ್ವಜನಿಕ ಆರೋಗ್ಯದ ಶಿಷ್ಟಾಚಾರಗಳಿಗೆ ಅನುಗುಣವಾಗಿ ಶಂಕಿತ ಪ್ರಕರಣದ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಸದ್ಯ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಅಧಿಕೃತ ಆರೋಗ್ಯ ಸಂಸ್ಥೆಗಳ ಮಾಹಿತಿಯನ್ನು ಮಾತ್ರವೇ ಸಾರ್ವಜನಿಕರು ಅನುಸರಿಸಬೇಕು. ಧೃಡೀಕರಿಸಲ್ಪಡದ, ಭಯ ಮತ್ತು ಗೊಂದಲವನ್ನು ಸೃಷ್ಟಿಸುವ ವರದಿಗಳನ್ನು ಹರಡವುದನ್ನು ತಪ್ಪಿಸಬೇಕು ಎಂದು ಪಿಎಚ್‌ಒ ಹೇಳಿದೆ.

ಎಬೋಲಾ ಒಂದು ಗಂಭೀರ ಸಾಂಕ್ರಾಮಿಕ ರೋಗವಾಗಿದೆ. ಭಯದಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಾಗಿ ಸೋಂಕು ನಿಯಂತ್ರಣ ಕ್ರಮಗಳು, ಸಾರ್ವಜನಿಕರ ಸಹಕಾರ ಹಾಗೂ ಸನ್ನದ್ಧತೆಯಿಂದ ಸೋಂಕಿನ ವಿರುದ್ಧ ಹೋಡಾಬಹುದು ಎಂದು ಪಿಎಚ್‌ಒ ಪ್ರಧಾನ ಕಾರ್ಯದರ್ಶಿ ಡಾ. ಈಶ್ವರ್ ಗಿಲಾಡಾ ಅವರು ತಿಳಿಸಿದರು.

ಆಫ್ರಿಕನ್ ದೇಶಗಳಾದ ಉಗಾಂಡಾ, ಕಾಂಗೊಗಳಲ್ಲಿ ಎಬೋಲಾ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಈವರೆಗೆ ಈ ಸೋಂಕು ವರದಿಯಾಗಿಲ್ಲ.

ಹಠಾತ್‌ ಜ್ವರ, ತೀವ್ರ ಆಯಾಸ, ವಾಂತಿ, ಅತಿಸಾರ, ಹೊಟ್ಟೆನೋವು, ತಲೆ ಹಾಗೂ ಮೈಕೈ ನೋವು ಈ ಸೋಂಕಿನ ಲಕ್ಷಣವಾಗಿವೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries