HEALTH TIPS

ಬಿರುಗಾಳಿಯಲ್ಲಿ ಹಾರಿಹೋದ ವ್ಯಕ್ತಿ: ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಲಖನೌ: ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಬೀಳುತ್ತಿದ್ದು, ಸುಮಾರು 89 ಮಂದಿ ಮೃತಪಟ್ಟಿದ್ದಾರೆ. ಬರೇಲಿ ಜಿಲ್ಲೆಯಲ್ಲಿ ನಡೆದ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಳಿಯ ವೇಗಕ್ಕೆ ವ್ಯಕ್ತಿಯೊಬ್ಬ ಟಿನ್ ಶೀಟ್ ಸಮೇತ ಹತ್ತಾರು ಅಡಿ ಎತ್ತರಕ್ಕೆ ಹಾರಿಹೋಗಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಕಾಣಿಸುವಂತೆ, ವ್ಯಕ್ತಿಯೊಬ್ಬ ಟಿನ್ ಶೀಟ್ ಹಿಡಿದುಕೊಂಡೇ ಗಾಳಿಯಲ್ಲಿ ತೇಲುತ್ತಾ ಎತ್ತರಕ್ಕೆ ಹೋಗುತ್ತಾರೆ. ಸ್ವಲ್ಪ ದೂರ ಸಾಗಿದ ಬಳಿಕ ಶೀಟ್‌ನಿಂದ ಬೇರ್ಪಟ್ಟು ಗಾಳಿಯಲ್ಲೇ ಪಲ್ಟಿ ಹೊಡೆಯುತ್ತಾ ಕೆಳಕ್ಕೆ ಬೀಳುತ್ತಾರೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬರೇಲಿ ನಿವಾಸಿ ನನ್ಹೇ ಮಿಯಾನ್ ಎಂಬುವರು ಬಿರುಗಾಳಿಗೆ ಶೀಟ್ ಹಾರಿಹೋಗದಂತೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ, ಗಾಳಿಯ ರಭಸಕ್ಕೆ ಟಿನ್ ಶೀಟ್ ಬುಡಸಮೇತ ಕಿತ್ತುಬಂದಿದ್ದು, ಅದನ್ನು ಹಿಡಿದಿದ್ದ ನನ್ಹೇ ಮಿಯಾನ್ ಕೂಡ ಗಾಳಿಯಲ್ಲಿ ಮೇಲಕ್ಕೆ ಹಾರಿದ್ದಾರೆ.

ವರದಿಗಳ ಪ್ರಕಾರ, ಈ ಘಟನೆಯಲ್ಲಿ ನನ್ಹೇ ಮಿಯಾನ್ ಅವರ ಕೈಕಾಲುಗಳು ಮುರಿದಿದ್ದು, ಬೆನ್ನು ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿವೆ. ಸದ್ಯ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿರುಗಾಳಿಯ ಅಬ್ಬರಕ್ಕೆ ಬರೇಲಿ ಜಿಲ್ಲೆಯೊಂದರಲ್ಲೇ ಗೋಡೆ ಕುಸಿತದಂತಹ ಘಟನೆಗಳಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಈ ಚಂಡಮಾರುತದಂತಹ ಹವಾಮಾನವು ಭಾರಿ ಅವಾಂತರ ಸೃಷ್ಟಿಸಿದೆ.

ಬಿರುಗಾಳಿ ಸಹಿತ ಮಳೆಗೆ 89 ಮಂದಿ ಸಾವು

ಉತ್ತರ ಪ್ರದೇಶದಾದ್ಯಂತ ಬುಧವಾರ ಸಂಭವಿಸಿದ ಭೀಕರ ಬಿರುಗಾಳಿ, ಸಿಡಿಲು ಮತ್ತು ಆಲಿಕಲ್ಲು ಮಳೆಗೆ ಕನಿಷ್ಠ 89 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಿಪತ್ತು ಪರಿಹಾರ ವಿಭಾಗ ಗುರುವಾರ ತಿಳಿಸಿದೆ. 'ಮೇ 13ರಂದು ರಾಜ್ಯದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ 114 ಜಾನುವಾರುಗಳು ಸೇರಿದಂತೆ ಒಟ್ಟು 89 ಮಂದಿ ಮೃತಪಟ್ಟಿದ್ದಾರೆ. 53 ಮಂದಿ ಗಾಯಗೊಂಡಿದ್ದು, ಅಲ್ಲದೆ 87 ಮನೆಗಳು ಜಖಂಗೊಂಡಿರುವ ಬಗ್ಗೆ ವರದಿಗಳು ಬಂದಿವೆ' ಎಂದು ಪರಿಹಾರ ಕಮಿಷನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.


बरेली में एक शख़्स आंधी में टीन शेड पकड़े खड़े थे और टीन सहित उड़ गए… यहाँ शहर में आंधी बारिश का इतना पता नहीं चलता लेकिन गांव देहात में आंधी आफ़त की तरह आती है…
2.1K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries