HEALTH TIPS

ಕನ್ನೆಪ್ಪಾಡಿ ಅಂಗನವಾಡಿಯಲ್ಲಿ ಪಾಲಕರಿಗೆ ತಿಳುವಳಿಕಾ ತರಗತಿ

ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ನೀರ್ಚಾಲು 3ನೇ ವಾರ್ಡು ಕನ್ನೆಪ್ಪಾಡಿ ಅಂಗನವಾಡಿಯಲ್ಲಿ ಪಾಲಕರಿಗೆ ತಿಳುವಳಿಕಾ ತರಗತಿ ನಡೆಸಲಾಯಿತು. ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಉದ್ಘಾಟಿಸಿದರು. ಪೇರೆಂಟಿಗ್ ಅವೇರ್‍ನೆಸ್ ಕೌನ್ಸಿಲರ್ ಪ್ರೀತಿ ಎಡನೀರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪಾಲಕರೊಂದಿಗೆ ಸಂವಾದ ನಡೆಸಿದರು. ಶಾಲೆಗೆ ಹಾಗೂ ವಿವಿಧೆಡೆಗಳಿಗೆ ಮಕ್ಕಳನ್ನು ಕಳುಹಿಸಿಕೊಡುವಾಗ ನಾವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು. ಮೊಬೈಲ್ ಬಳಕೆಯಿಂದ ಮಕ್ಕಳು ದೂರವಿರಬೇಕಾದರೆ ಹೆತ್ತವರೂ ಕೆಲವೊಂದು ತ್ಯಾಗಕ್ಕೆ ತಯಾರಾಗಬೇಕು. ಇಂದಿನ ಕಾಲದಲ್ಲಿ ಹಿರಿಯರು ಮನೆಯಲ್ಲಿ ಮೊಬೈಲ್ ವೀಕ್ಷಿಸುತ್ತಾ ಕಾಲಕಳೆಯುತ್ತಿದ್ದು, ಮಕ್ಕಳನ್ನು ಆ ಚಟದಿಂದ ಹಿಂದೆ ಸರಿಯುವಂತೆ ಮಾಡಲು ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆತ್ತವರೇ ಅತಿ ಜಾಗರೂಕರಾಗಿ ಮುಂದುವರಿಯಬೇಕು ಎಂದರು. ಅಂಗನವಾಡಿ ಅಭಿವೃದ್ಧಿ ಸಮಿತಿಯ ಸದಸ್ಯ ದೇವದಾಸ್, ಶಿಕ್ಷಕಿ ಹೈಮಾವತಿ ಸ್ವಾಗತಿಸಿ, ಸಹಾಯಕಿ ಜಯಲಕ್ಷ್ಮಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries