ಬದಿಯಡ್ಕ: ರೋಟರಿ ಇಂಟರ್ ನ್ಯಾಶನಲ್ ಬದಿಯಡ್ಕ ಹಾಗೂ ಚಿತ್ತಿರಪಿಲ್ಲಿ ಫೌಂಡೇಶನ್ ವತಿಯಿಂದ ಬಡಜನತೆಗೆ ನಿರ್ಮಿಸಿಕೊಡುವ ಕನಸಿನ ಮನೆ ಯೋಜನೆಯ ಕೀಲಿಕೈ
ಹಸ್ತಾಂತರ ಬದಿಯಡ್ಕ ಸಮೀಪದ ಕೆಡೆಂಜಿಯಲ್ಲಿ ಜರಗಿತು. ಫಲಾನುಭವಿ ಶೋಭಾ ಕೆಡೆಂಜಿ ಅವರಿಗೆ ರೋಟರಿ ಇಂಟರ್‍ನೇಶನಲ್ ಬದಿಯಡ್ಕ ಇದರ ಅಧ್ಯಕ್ಷ ಕೇಶವ ಪಾಟಾಳಿ ನೂತನ ಮನೆಯ ಕೀಲಿಕೈ ಹಸ್ತಾಂತರಿಸಿ ಉದ್ಘಾಟಿಸಿದರು. ಸಂತೋಷ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಅಮ್ಮಣ್ಣಾಯ, ಜಗನ್ನಾಥ ರೈ ಕೊರೆಕ್ಕಾನ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ಆಳ್ವ ವಂದಿಸಿದರು.

.jpg)
