ಬದಿಯಡ್ಕ: ಇತ್ತೀಚೆಗೆ ಅಗಲಿದ ಕೆ.ಎಂ.ವೆಂಕಟೇಶ್ವರ ಭಟ್ ಮತ್ತು ಕೆ.ರಾಮ ಉರುಳಿತ್ತಡ್ಕ ಇವರ ಗೌರವಾರ್ಥ ನುಡಿನಮನ ಕಾರ್ಯಕ್ರಮ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಭಾನುವಾರ ಜರಗಿತು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣ ಭಟ್ ಎಡನೀರು ಮಾತನಾಡಿದರು. ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಾಹಿತಿ ವಿ.ಬಿ.ಕುಳಮರ್ವ ನುಡಿನಮನದಲ್ಲಿ ಕುಂಟಿಕಾನ ಮಠದ ದೈವನರ್ತಕ ರಾಮ ಕೆ. ಹಾಗೂ ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಕುಟುಂಬದ ವೆಂಕಟೇಶ್ವರ ಭಟ್ಟರು ಒಂದು ದಿನದ ಅಂತರದಲ್ಲಿ ನಮ್ಮೆಲ್ಲರನ್ನು ಬಿಟ್ಟು ಹೋಗಿರುವುದು ತುಂಬಾ ದುಃಖದ ವಿಚಾರವಾಗಿದೆ. ಅವರಿಬ್ಬರ ಸೇವೆಯೂ ಅನನ್ಯವಾಗಿದೆ. ಶ್ರೀ ಕ್ಷೇತ್ರದ ಪ್ರಭಾವ ಎಲ್ಲೆಡೆ ಹರಡುವಲ್ಲಿ ಅವರ ಸೇವೆ ಸದಾ ಸ್ಮರಣೀಯವಾಗಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಕೆ.ಎಂ.ಶಂಕರನಾರಾಯಣ ಭಟ್, ನಿವೃತ್ತ ಅಧ್ಯಾಪಕ ಕೆ.ಎಂ.ಶ್ಯಾಮ ಭಟ್, ನಿವೃತ್ತ ಅಧ್ಯಾಪಕ ಶ್ಯಾಮಪ್ರಸಾದ ಕುಳಮರ್ವ, ಸರಳಿ ಮಹೇಶ, ಶ್ಯಾಮಕುಮಾರ ಕೆ.ಎಂ. ಮೊದಲಾದವರು ಮಾತನಾಡಿದರು.

.jpg)
