HEALTH TIPS

ChatGPT ಸಲಹೆಯಿಂದ ಯುವಕ ಸಾವು; ಕ್ಯಾಲಿಫೋರ್ನಿಯದಲ್ಲಿ OpenAI ವಿರುದ್ಧ ಮೊಕದ್ದಮೆ ಹೂಡಿದ ಪೋಷಕರು

ಕ್ಯಾಲಿಫೋರ್ನಿಯ :ಕಳೆದ ವರ್ಷ ಆಕಸ್ಮಿಕವಾಗಿ ಔಷಧದ ಮಿತಿ ಮೀರಿದ ಸೇವನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಪೋಷಕರು ಕ್ಯಾಲಿಫೋರ್ನಿಯ ನ್ಯಾಯಾಲಯದಲ್ಲಿ OpenAI ಮತ್ತು ಅದರ ಸಂಸ್ಥಾಪಕ ಮತ್ತು ಸಿಇಒ ಸ್ಯಾಮ್ ಆಲ್ಟ್ಮನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. 


ಚಾಟ್ ಜಿಪಿಟಿ ಆ ವ್ಯಕ್ತಿಗೆ ಅಪಾಯಕಾರಿ ಮಾದಕ ದ್ರವ್ಯದ ಸಂಯೋಜನೆಯನ್ನು ತೆಗೆದುಕೊಳ್ಳಲು ಶಿಫಾರಸು ನೀಡಿತ್ತು ಎಂದು ಆರೋಪಿಸಲಾಗಿದೆ.

ಲೈಲಾ ಟರ್ನರ್ ಸ್ಕಾಟ್ ಮತ್ತು ಆಂಗಸ್ ಸ್ಕಾಟ್ ತಮ್ಮ 19 ವರ್ಷದ ಮಗ ಸ್ಯಾಮ್ ನೆಲ್ಸನ್ ವಿಭಿನ್ನ ಔಷಧಿಗಳನ್ನು ಸಂಯೋಜಿಸುವ ಬಗ್ಗೆ ಮಾರ್ಗದರ್ಶನಕ್ಕಾಗಿ ಚಾಟ್ ಬಾಟ್ ಬಳಸುತ್ತಿದ್ದರು ಎಂದು ಹೇಳಿದ್ದಾರೆ. ಮತ್ತೊಂದು ವಸ್ತುವನ್ನು ಸೇವಿಸುವ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಪ್ರಿಸ್ಕ್ರಿಪ್ಷನ್ನ ಔಷಧಿಯನ್ನು ತೆಗೆದುಕೊಳ್ಳಲು ChatGPT ಅವರನ್ನು ಪ್ರೋತ್ಸಾಹಿಸಿದೆ ಎಂದು ಪೋಷಕರು ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಆ ಔಷಧಿಗಳು ಮತ್ತು ಇತರ ಪದಾರ್ಥಗಳ ಸಂಯೋಜನೆಯ ಕಾರಣದಿಂದ 2025 ಮೇನಲ್ಲಿ ನೆಲ್ಸನ್ ಮೃತಪಟ್ಟಿದ್ದಾರೆ. ಮೊಕದ್ದಮೆಯಲ್ಲಿ ಹಣಕಾಸಿನ ಪರಿಹಾರ ಕೋರಲಾಗಿದೆ ಮತ್ತು ಓಪನ್‌ಎಐನ ಚಾಟ್ಜಿಪಿಟಿ ಹೆಲ್ತ್ ಬಿಡುಗಡೆಯನ್ನು ತಡೆಯುವಂತೆ ನ್ಯಾಯಾಲಯವನ್ನು ಒತ್ತಾಯಿಸಲಾಗಿದೆ. ಓಪನ್‌ಎಐನ ಚಾಟ್ಜಿಪಿಟಿ ಹೆಲ್ತ್ ಬಳಕೆದಾರರಿಗೆ ವೈದ್ಯಕೀಯ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮತ್ತು ವೈಯಕ್ತೀಕರಿಸಿದ ಆರೋಗ್ಯ ಸಲಹೆ ಪಡೆಯಲು ಅನುವು ಮಾಡಿಕೊಡುತ್ತದೆ.

ಪ್ರಸ್ತುತ ChatGPT ಬಳಕೆದಾರರು ಚಾಜ್ ಜಿಪಿಟಿ ಆರೋಗ್ಯವನ್ನು ಪ್ರವೇಶಿಸಲು ಕಾಯಬೇಕಿದೆ. ಜನವರಿಯಲ್ಲಿ OpenAI ಬಿಡುಗಡೆ ಮಾಡಿದ ವರದಿಯ ಪ್ರಕಾರ, ನಿತ್ಯವೂ ಒಟ್ಟು 40 ದಶಲಕ್ಷ ಬಳಕೆದಾರರು ಚಾಟ್ ಜಿಪಿಟಿ ಬಳಿ ಆರೋಗ್ಯ ಸೇವೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಚಾಟ್ ಜಿಪಿಟಿ ವಕ್ತಾರರ ಪ್ರಕಾರ ಮೃತ ಯುವಕ ಚಾಟ್ ಜಿಪಿಟಿಯ ಹಿಂದಿನ ಆವೃತ್ತಿಯ ಬಳಿ ಪ್ರಶ್ನೆಗಳನ್ನು ಕೇಳಿದ್ದ. ಅದು ಈಗ ಲಭ್ಯವಿಲ್ಲ. ಕಂಪನಿ ಚಾಟ್ ಜಿಪಿಟಿ ಸುರಕ್ಷತೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದೆ.

"ಚಾಟ್ ಜಿಪಿಟಿಯು ವೈದ್ಯಕೀಯ ಅಥವಾ ಮಾನಸಿಕ ಆರೋಗ್ಯ ಸೇವೆಗೆ ಪರ್ಯಾಯವಲ್ಲ. ಆದರೆ ಮಾನಸಿಕ ಆರೋಗ್ಯ ತಜ್ಞರಿಂದ ಸಲಹೆ ಪಡೆದು ಸೂಕ್ಷ್ಮ ಮತ್ತು ಗಂಭೀರ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಬಲಪಡಿಸುತ್ತಲೇ ಬಂದಿದ್ದೇವೆ. ಇಂದು ಸಂಕಷ್ಟಗಳನ್ನು ಗುರುತಿಸಲು, ಹಾನಿಕಾರಕ ವಿನಂತಿಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ಬಳಕೆದಾರರಿಗೆ ನೈಜ ಪ್ರಪಂಚದ ಸಹಾಯಕ್ಕೆ ಮಾರ್ಗದರ್ಶನ ನೀಡಲು ಚಾಟ್ ಜಿಪಿಟಿಯ ಸುರಕ್ಷತಾ ಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ" ಎಂದು ವಕ್ತಾರರು ಹೇಳಿದ್ದಾರೆ.

ಇದಕ್ಕೆ ಮೊದಲು ಮತ್ತೊಂದು ಕುಟುಂಬವೂ ಚಾಟ್ಜಿಪಿಟಿ ಮೇಲೆ ಮೊಕದ್ದಮೆ ಹೂಡಿತ್ತು. ಫ್ಲೋರಿಡಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕೊಲೆಯಾದ ವ್ಯಕ್ತಿಯ ಕುಟುಂಬವು ಓಪನ್‌ಎಐ ವಿರುದ್ಧ ಚಾಟ್ ಜಿಪಿಟಿ ಶೂಟರ್ಗೆ ದಾಳಿ ಯೋಜಿಸಲು ಸಹಾಯ ಮಾಡಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದ್ದಾರೆ. ಸ್ವಯಂಹಾನಿ, ಮಾನಸಿಕ ಅಸ್ವಸ್ಥತೆ ಮತ್ತು ಹಿಂಸಾಚಾರಕ್ಕೆ ಕೊಡುಗೆ ನೀಡುವ ಚಾಟ್ ಬಾಟ್ ಸಂವಹನಗಳನ್ನು ತಡೆಯುವಲ್ಲಿ ಕಂಪನಿಗಳು ವಿಫಲವಾಗಿವೆ ಎಂದು ಆರೋಪಿಸಿ ಜನರೇಟಿವ್ ಎಐ ಕಂಪನಿಗಳ ಮೇಲೆ ಮೊಕದ್ದಮೆಗಳು ಹೆಚ್ಚಾಗುತ್ತಿವೆ.

ಇದೀಗ ನೆಲ್ಸನ್ ಪೋಷಕರು ಸಲ್ಲಿಸಿದ ಮೊಕದ್ದಮೆಯಲ್ಲಿ, "ಮಾದಕ ವಸ್ತು ಬಳಕೆಯ ಕುರಿತು ಸಲಹೆ ಕೇಳಿದಾಗ ಚಾಟ್ ಜಿಪಿಟಿ ತಿರಸ್ಕರಿಸುತ್ತದೆ ಮತ್ತು ಸಹಾಯ ಮಾಡಲು ಸಾಧ್ಯವಿಲ್ಲ ಮತ್ತು ಅಪಾಯಗಳ ಎಚ್ಚರಿಕೆ ನೀಡಲಾಗುತ್ತದೆ ಎಂದು ಹೇಳುತ್ತಿದೆ. ಆದರೆ 2024ರಲ್ಲಿ ಕಂಪನಿ ಚಾಟ್ ಜಿಪಿಟಿ- 04 ಪ್ರಾರಂಭಿಸಿತು. ಅದು ನೆಲ್ಸನ್ಗೆ ಔಷಧಿ ಸಂವಹನ ಮತ್ತು ಡೋಸಿಂಗ್ ಬಗ್ಗೆ ವೈದ್ಯರನ್ನು ಅನುಕರಿಸುವ ಭಾಷೆಯಲ್ಲಿ ಮಾಹಿತಿ ನೀಡಲು ಪ್ರಾರಂಭಿಸಿತ್ತು" ಎಂದು ಆರೋಪಿಸಲಾಗಿದೆ.

"ಚಾಟ್ ಬಾಟ್ ನೆಲ್ಸನ್ಗೆ ಅಕ್ರಮ ವಸ್ತುಗಳನ್ನು ಹೇಗೆ ಪಡೆಯುವುದು ಎಂದು ಮಾಹಿತಿ ನೀಡಿದೆ. ಯಾವ ಔಷಧಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿತ್ತು. ಮೊಕದ್ದಮೆ ಪ್ರಕಾರ ನೆಲ್ಸನ್ ಹುಡುಕುತ್ತಿರುವ ಅನುಭವಗಳ ಆಧಾರದಲ್ಲಿ ಸಲಹೆ ನೀಡಲಾಗಿದೆ. ಈ ವಿವರಗಳು ಚಾಟ್ ಜಿಪಿಟಿ ಸ್ಮರಣೆಯಲ್ಲಿದೆ. ಹೀಗಾಗಿ ಹೆಚ್ಚು ವೈಯಕ್ತೀಕರಿಸಿದ ಶಿಫಾರಸು ನೀಡಿತ್ತು" ಎಂದು ಆರೋಪಿಸಲಾಗಿದೆ.

ಗೂಗಲ್ನಂತಹ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಓಪನ್‌ಎಐ ಚಾಟ್ ಜಿಪಿಟಿ- 04 ತರಾತುರಿಯಲ್ಲಿ ಅಗತ್ಯ ಸುರಕ್ಷತಾ ಪರೀಕ್ಷೆಯನ್ನು ಬಿಟ್ಟುಬಿಟ್ಟಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ದೋಷಪೂರಿತ ಉತ್ಪನ್ನವನ್ನು ವಿನ್ಯಾಸಗೊಳಿಸಿದ ಮತ್ತು ಅದರ ಅಪಾಯಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಲು ವಿಫಲವಾಗಿದೆ ಎಂದು ಮೊಕದ್ದಮೆ ಹೇಳಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries