HEALTH TIPS

Ebola ಮತ್ತು ಸಂಘರ್ಷದ ದುರಂತ ಅಂಚಿನಲ್ಲಿ ಕಾಂಗೊ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಜಿನೇವಾ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)ದಲ್ಲಿ ನಡೆಯುತ್ತಿರುವ ಸಂಘರ್ಷವು ಮಾರಣಾಂತಿಕ ಎಬೋಲಾ ವೈರಲ್ ಕಾಯಿಲೆಯ ಉಲ್ಬಣವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

'ಪೂರ್ವ DRC ಈಗ ರೋಗ ಮತ್ತು ಸಂಘರ್ಷದ ದುರಂತ ಘರ್ಷಣೆಯನ್ನು ಎದುರಿಸುತ್ತಿದ್ದು, ಇಟುರಿ ಪ್ರಾಂತದಲ್ಲಿ ಎಬೋಲಾ ಉಲ್ಬಣವನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ' ಎಂದು ಘೆಬ್ರಯೇಸಸ್ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇ ಮಧ್ಯಭಾಗದಿಂದ DRCಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ 10 ದೃಢಪಡಿಸಿದ ಎಬೋಲಾ ಸಾವುಗಳು ಮತ್ತು 220 ಶಂಕಿತ ಸಾವುಗಳನ್ನು ದಾಖಲಿಸಿದೆ. ಮೇ 15ರಿಂದ 900 ಶಂಕಿತ ಪ್ರಕರಣಗಳನ್ನೂ ದಾಖಲಿಸಲಾಗಿದೆ. DRCಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಎಬೋಲಾದ ಬುಂಡಿಬುಗ್ಯೊ ವೈರಸ್ ಚಿಕಿತ್ಸೆಗೆ ಯಾವುದೇ ಅನುಮೋದಿತ ಲಸಿಕೆ ಅಥವಾ ಚಿಕಿತ್ಸೆಯಿಲ್ಲ. ಸೂಕ್ತ ನಿಯಂತ್ರಣ ಕ್ರಮಗಳಿಂದ ಈ ಎಬೋಲಾ ಪ್ರಸರಣವನ್ನು ನಿಲ್ಲಿಸಬಹುದು ಎಂದು ಘೆಬ್ರಯೇಸಸ್ ಹೇಳಿದ್ದಾರೆ.

ಆದರೆ ಹಲವು ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಯಿಂದ ಜರ್ಝರಿತಗೊಂಡಿರುವ ಪೂರ್ವ DRCಯಲ್ಲಿ ಅಭದ್ರತೆಯು ಎಬೋಲಾ ಪ್ರಸರಣ ತಡೆಯುವಲ್ಲಿ ಬಹುದೊಡ್ಡ ತೊಡಕಾಗಿದೆ. ಇಟುರಿ ಪ್ರಾಂತದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಸೇವೆಗಳು ದಶಕಗಳಿಂದ ಸ್ಥಗಿತಗೊಂಡಿವೆ. 'ಅಂತರ್ಯುದ್ಧವು ಸಾಮೂಹಿಕ ಸ್ಥಳಾಂತರವನ್ನು ಅನಿವಾರ್ಯಗೊಳಿಸಿದೆ. ಕಿಕ್ಕಿರಿದ ಶಿಬಿರಗಳಲ್ಲಿ ಸಾಂಕ್ರಾಮಿಕ ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತದೆ. ಆರೋಗ್ಯ ವ್ಯವಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಸೋಂಕಿತರನ್ನು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚುವ ಕಾರ್ಯವನ್ನು ಕಠಿಣಗೊಳಿಸಿದೆ. ಬಾಂಬ್‌ಗಳು ಬೀಳುತ್ತಿರುವಾಗ ಸಮುದಾಯದ ವಿಶ್ವಾಸ ನಿರ್ಮಾಣ ಅಥವಾ ಅಸ್ವಸ್ಥರನ್ನು ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

'ಈ ಉಲ್ಬಣವನ್ನು ಹತ್ತಿಕ್ಕಲು, ವೈದ್ಯಕೀಯ ತಂಡಗಳ ಸುರಕ್ಷಿತ ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಯುದ್ಧನಿರತ ಪಕ್ಷಗಳು ತಕ್ಷಣ ಯುದ್ಧವಿರಾಮಕ್ಕೆ ಸಮ್ಮತಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನುಕುಲದ ಉಳಿವಿಗೆ ಆದ್ಯತೆ ನೀಡಬೇಕು' ಎಂದು ಘೆಬ್ರಯೇಸಸ್ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries