ಕಾಸರಗೋಡು: ಭಾರತದ ಪ್ರಧಾನಿ, ವಿಶ್ವನಾಯಕ ನರೇಂದ್ರ ಮೋದಿ ಅವರು ಜೂನ್ 9ಕ್ಕೆ ರಾಷ್ಟ್ರದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ 12 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ ನಡೆಸಲಾಯಿತು.
ಪ್ರತಿ ತಿಂಗಳು ವಿಶೇಷ ಕಾರ್ತಿಕ ಪೂಜೆ, ವರ್ಷದಲ್ಲಿ ಭಜನೆ ಮತ್ತು ಕುಣಿತ ಭಜನೆ ಇತ್ಯಾದಿ ಕಾರ್ಯಕ್ರಮ ನಿರ್ವಹಿಸುತ್ತಿರುವ 'ಮೋದಿ ಫ್ಯಾನ್ಸ್ ಕಾಸರಗೋಡು" ನೇತೃತ್ವದಲ್ಲಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ವಿಶೇಷ ಪೂಜೆ ನೆರವೇರಿಸಿ ಮೋದಿಜಿಯವರು ದೇಶ ಸೇವೆ ಮಾಡಲು ಧೀರ್ಘ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಬಿ.ಜೆ.ಪಿ. ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಪ್ರಧಾನ ಕಾರ್ಯದರ್ಶಿ ಸುನಿಲ್.ಪಿ, ಉಪಾಧ್ಯಕ್ಷ ಪಿ.ರಮೇಶ್, ಕಾಸರಗೋಡು ಜಿಲ್ಲಾ ಸೆಲ್ ಕೋರ್ಡಿನೇಟರ್ ಕುಮಾರ ಕುದ್ರೆಪ್ಪಾಡಿ, ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್, ಹಿರಿಯ ಧಾರ್ಮಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಶ್ರೀಲತಾ ಟೀಚರ್, ವರಪ್ರಸಾದ್ ಕೋಟೆಕಣಿ, ಕಲ್ಮಾಡಿ ಸದಾಶಿವ ಆಚಾರ್ಯ, ಲಕ್ಷ್ಮೀಕಾಂತ, ನಮೋ ಫ್ಯಾನ್ಸಿನ ಪ್ರಮುಖರಾದ ಕಿಶೋರ್ ಕುಮಾರ್ ಎಸ್.ವಿ.ಟಿ, ರವಿ ಕೇಸರಿ, ಪುರಂದರ ಶೆಟ್ಟಿ, ಶಂಕರನಾರಾಯಣ ಹೊಳ್ಳ, ನವಿನ್ ಬಟ್ಟಂಬಾರೆ, ಸುಜಯ್, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ಪ್ರೆಮ್‍ಜಿತ್, ನಾಮದೇವ ಪೈ, ವಸಂತ್ ಕೆರೆಮನೆ, ವಿಜಯ ಶೆಟ್ಟಿ, ಶಾರದಾ ರಾವ್, ಸವಿತಾ ಕಿಶೋರ್, ಶ್ರೀದೇವಿ, ಸೌಮ್ಯ, ಲೀಲಾ, ಸವಿತಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಶ್ರೀ ವೆಂಕಟರಮಣ ಮಹಿಳಾ ಭಜನಾ ತಂಡದಿಂದ ಭಜನೆ ಸಂಕೀರ್ತನೆ ನಡೆಯಿತು.



