HEALTH TIPS

ದೇಶಿ ನಿರ್ಮಿತ ಸೇನಾ ವಿಮಾನ 'ಸಿ-295' ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿ: ಐಎಎಫ್

 ನವದೆಹಲಿ: ಭಾರತದಲ್ಲಿಯೇ ತಯಾರಾದ ಮೊದಲ ಸಿ- 295 ಮಿಲಿಟರಿ ಸಾರಿಗೆ ವಿಮಾನವು ತನ್ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಬುಧವಾರ ತಿಳಿಸಿದೆ. 


ವಾಯುಪಡೆಯು, ಸುಮಾರು ₹21,935 ಕೋಟಿ ವೆಚ್ಚದಲ್ಲಿ ಒಟ್ಟು 56 'ಸಿ - 295' ವಿಮಾನಗಳನ್ನು ಖರೀದಿಸುತ್ತಿದೆ.

ಇವುಗಳ ಪೈಕಿ 40 ವಿಮಾನಗಳನ್ನು ಗುಜರಾತ್‌ನ ವಡೋದರಾದಲ್ಲಿರುವ ಉತ್ಪಾದನಾ ಘಟಕದಲ್ಲಿ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್' ಸಂಸ್ಥೆಯು 'ಏರ್‌ಬಸ್' ಕಂಪನಿಯ ಸಹಯೋಗದೊಂದಿಗೆ ತಯಾರಿಸಲಾಗುತ್ತದೆ.

ಈ ಯಶಸ್ಸಿಗೆ ಕಾರಣರಾದ ಇಡೀ ತಂಡಕ್ಕೆ ವಾಯುಪಡೆ ಅಭಿನಂದನೆ ಸಲ್ಲಿಸಿದೆ. ಈ ಸಾಧನೆಯು ಭಾರತದ ವಿಮಾನಯಾನ ತಂತ್ರಜ್ಞಾನದ ಬೆಳವಣಿಗೆಯನ್ನು ತೋರಿಸುತ್ತದೆ ಹಾಗೂ ಪ್ರಧಾನಿ ಮೋದಿ ಅವರ 'ಆತ್ಮನಿರ್ಭರ ಭಾರತ' ಯೋಜನೆ ಅಡಿಯಲ್ಲಿ ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ವಾಯುಪಡೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries