HEALTH TIPS

47 ವರ್ಷದ ಬಳಿಕ ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ; ಕಾರಣವೇನು?

8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷದ್ವೀಪವೂ ಒಂದಾಗಿದೆ. ಈ ಸುಂದರವಾದ ದ್ವೀಪ ಸಮೂಹದಲ್ಲಿ 47 ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ಮದ್ಯಪಾನ ಖರೀದಿ ಮತ್ತು ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. 

1979 ರಲ್ಲಿ, ಲಕ್ಷದ್ವೀಪದಲ್ಲಿ ಶೇ 97ರಷ್ಟು ಮುಸ್ಲಿಂಮರಿದ್ದರು.

ಹೀಗಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದೀಗ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು, ಹೊಸ ಅಬಕಾರಿ ನೀತಿಯನ್ನು ಜಾರಿಗೆ ‌ತರಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರವು ಜೂನ್ 5 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯಲ್ಲಿ ನಿಷೇಧದ ತೆರವಿನ ಮಾಹಿತಿಯನ್ನು ಹಂಚಿಕೊಂಡಿದೆ. ಅಧಿಕೃತವಾಗಿ ಎಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ದೊರೆಯಲಿದೆ ಎಂಬುದನ್ನು ತಿಳಿಸಲಾಗಿಲ್ಲ.

ಈ ಹೊಸ ನಿಯಮದ ಅಡಿಯಲ್ಲಿ ಮದ್ಯದ ಆಮದು, ರಫ್ತು, ಸಾಗಾಟ ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಸರ್ಕಾರಿ ಸ್ವಾಮ್ಯದ ನಿಗಮಗಳು ಮತ್ತು ಏಜೆನ್ಸಿಗಳು ಆಲ್ಕೋಹಾಲ್ ಉತ್ಪನ್ನಗಳನ್ನು ಆಮದು ಮತ್ತು ಮಾರಾಟ ಮಾಡಲು ಮುಕ್ತ ಅವಕಾಶ ಸಿಗಲಿದೆ.

ಮದ್ಯಕ್ಕೆ ದುಬಾರಿ ತೆರಿಗೆ

ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯ (IMFL) ಮತ್ತು ವಿದೇಶಗಳಿಂದ ಬರುವ ಮದ್ಯದ ಮೇಲೆ ಶೇ 400 ರಷ್ಟು ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ. ಬಿಯರ್ ಉತ್ಪನ್ನಗಳ ಮೇಲೆ ಶೇ 200 ರಷ್ಟು ಮತ್ತು ವೈನ್ ಉತ್ಪನ್ನಗಳ ಮೇಲೆ ಶೇ 80ರಷ್ಟು ಸುಂಕವನ್ನು ನಿಗದಿಪಡಿಸಲಾಗಿದೆ. ವಿದೇಶಿ ಮದ್ಯದ ಮೇಲೆ ಶೇ 25ರಷ್ಟು ಮೌಲ್ಯವರ್ಧಿತ ತೆರಿಗೆಯನ್ನೂ ವಿಧಿಸಲಾಗುತ್ತದೆ.

ಲಕ್ಷದೀಪದ ಆಡಳಿತಾಧಿಕಾರಿಗಳು ಮದ್ಯಪಾನದ ಖರೀದಿ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಲಕ್ಷದ್ವೀಪದ ಒಳಗೆ ಯಾವುದೇ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವ ಅಧಿಕಾರವನ್ನು ಹೊಂದಿರುತ್ತಾರೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಲಕ್ಷದ್ವೀಪದಲ್ಲಿ 36 ದ್ವೀಪಗಳಿವೆ. ಅವುಗಳಲ್ಲಿ ಅಗತ್ತಿ, ಅಮಿನಿ, ಆಂಡ್ರೊಟ್, ಬಿಟ್ರಾ, ಚೆಟ್ಲಾಟ್, ಕದ್ಮತ್, ಕಲ್ಪೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮಿನಿಕೋಯ್ ವಿಶೇಷ ದ್ವೀಪಗಳಾಗಿವೆ. ಇಲ್ಲಿಗೆ ಭೇಟಿ ನೀಡಲು ಪ್ರವಾಸಿಗರು ವಿಶೇಷ ಪರವಾನಗಿ ಪಡೆಯಬೇಕು. ಮಾತ್ರವಲ್ಲದೆ,ಅಗತ್ತಿ, ಬಂಗಾರಮ್ ಮತ್ತು ಕಡ್ಮತ್ ದ್ವೀಪಗಳಿಗೆ ವಿದೇಶಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಲಕ್ಷದ್ವೀಪದಲ್ಲಿ ಮದ್ಯ ನಿಷೇಧಿಸಿದ್ದು ಏಕೆ?

ಈ ದ್ವೀ‍ಪ ಸಮೂಹಗಳಲ್ಲಿ ಬಹುಪಾಲು ಮುಸ್ಲಿಂ ಸಮುದಾಯದವರಿದ್ದಾರೆ. ಇಸ್ಲಾಂನಲ್ಲಿ ಮದ್ಯ ಸೇವನೆಗೆ ನಿಷೇಧವಿದೆ. ಹೀಗಾಗಿ ಗುಜರಾತ್, ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳ ಜೊತೆಗೆ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿಯೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ಅಲ್ಲಿನ ರಾಜಕೀಯ ಪಕ್ಷಗಳು ಮತ್ತು ಸಮುದಾಯಗಳು ಮದ್ಯದ ಮೇಲಿರುವ ನಿಷೇಧವನ್ನು ತೆಗೆಯುವಂತೆ ಆಗಾಗ್ಗೆ ಪ್ರಸ್ತಾಪವನ್ನೂ ಸಲ್ಲಿಸಿದ್ದವು. ವಿನಾಯಿತಿಗಳ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಮದ್ಯ ಲಭ್ಯವಿತ್ತು.

ಮದ್ಯದ ನಿಯಮ ಬದಲಿಸಲು ಕಾರಣವೇನು?

ಇತ್ತೀಚೆಗೆ ಕೇಂದ್ರ ಸರ್ಕಾರವು ಲಕ್ಷದ್ವೀಪವನ್ನು ಬಹು ದೊಡ್ಡ ಪ್ರವಾಸೋದ್ಯಮ ತಾಣವಾಗಿ ಸ್ಥಾಪಿಸುವ ಚಿಂತನೆ ನಡೆಸಿದೆ. ಇದರ ಭಾಗವಾಗಿ ಮೊದಲನೇಯದು ಮದ್ಯದ ಮೇಲಿರುವ ನಿಷೇಧವನ್ನು ತೆರವುಗೊಳಿಸುವುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2024 ರ ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಅಲ್ಲಿಂದ ಲಕ್ಷದ್ವೀಪಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಇಂಡಿಯಾ ಟುಡೇ ದತ್ತಾಂಶದ ಪ್ರಕಾರ 2020ರಲ್ಲಿ ಸುಮಾರು 3,875 ಮಂದಿ ಪ್ರವಾಸಿಗರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಈ ಸಂಖ್ಯೆ 2024ರ ವೇಳೆಗೆ 68,328 ಕ್ಕೆ ಏರಿಕೆಯಾಗಿದೆ. ಸದ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರವು ಹೇಳಲಾಗುತ್ತಿದ್ದರೂ, ಸ್ಥಳೀಯ ನಿವಾಸಿಗಳು ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ ಎಂದು ವಿರೋಧಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries