ಕಾಸರಗೋಡು: ಜಿಲ್ಲೆಯಲ್ಲಿ ಪೆÇಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಹೊಸದುರ್ಗಕ್ಕೆ ಸಮೀಪದ ಮಡಿಕೈ ಚಾಳಿಕಡವಿನಲ್ಲಿ ವಾಸಿಸುವ ಪಿ.ಪಿ. ಸಿರಾಜ್ (38) ಹಾಗೂ ಹೊಸದುರ್ಗಕ್ಕೆ ಸಮೀಪದ ಬೇಳೂರು ಮೂರನೇ ಮೈಲ್ನ ಮುಂಡೋಟ್ ಹೌಸ್ನ ಉಣ್ಣಿಕೃಷ್ಣನ್ ಎನ್.ಕೆ. (33)ಬಂಧಿತರು. ಬಂಧಿತರಿಂದ ಒಟ್ಟು 5.212ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಕಾಞಂಗಾಡು ಪೇಟೆಯಲ್ಲಿ ಹೊಸದುರ್ಗ ಠಾಣೆ ಪೆÇಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಿ.ಪಿ ಸಇರಾಝ್ನನ್ನುಬಂಧಿಸಿ ಈತನ ವಶದಲ್ಲಿದ್ದ 3.200 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಲೆತ್ನಿಸಿದಾಗ ಈತನನ್ನು ಹಿಂಬಾಲಿಸಿ ಸೆರೆಹಿಡಿಯಲಾಗಿದೆ
ಇನ್ನೊಂದು ಪ್ರಕರಣದಲ್ಲಿ ಅಂಬಲತ್ತರ ಪೆÇಲೀಸರು ಮನೆಯೊಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಪಾಟಿನೊಳಗಿದ್ದ ಪುಸ್ತಕದ ಅಡಿ ಭಾಗದಲ್ಲಿ ಬಚ್ಚಿಟ್ಟಿದ್ದ 2.12 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ಉಣ್ಣಿಕೃಷ್ಣನ್ ಎನ್.ಕೆ. ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರುಕಾರ್ಯಾಚರಣೆ ನಡೆಸಿದ್ದಾರೆ.

