HEALTH TIPS

ಮೊಬೈಲ್ ಫೋನ್ ಮಳೆಯಲ್ಲಿ ನೆನೆದಿದ್ಯಾ? ವಾಟರ್ ಫ್ರೂಪ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು!

 ಅಯ್ಯೋ, ಕೈ ತೊಳೆಯೋವಾಗ ಫೋನ್ (Phone) ಮೇಲೆ 2 ಹನಿ ನೀರು (Water) ಬಿತ್ತು... ಏನಾಗಲ್ಲ ಬಿಡಿ ಅಂತ ಸುಮ್ಮನಾದ್ರಾ? ಹುಷಾರ್! ನಿಮ್ಮ ವಾಟರ್‌ಪ್ರೂಫ್ ಅಂತ ಕೊಂಡ ₹1 ಲಕ್ಷದ ಐಫೋನ್ (iPhone), ಸ್ಯಾಮ್ಸಂಗ್ (Samsung) ಕೂಡ ಒಂದೇ ಹನಿಗೆ ICU ಸೇರಬಹುದು. IP68 ರೇಟಿಂಗ್ (IP68 Rating) ಇದೆ, 1.5 ಮೀಟರ್ ನೀರಲ್ಲಿ 30 ನಿಮಿಷ ಇಡಬಹುದು ಅಂತ ಕಂಪನಿ ಆಡ್‌ನಲ್ಲಿ ಹೇಳುತ್ತೆ. ಆದ್ರೆ ವಾರಂಟಿ ಕಾರ್ಡ್​ನಲ್ಲಿ ಸಣ್ಣ ಅಕ್ಷರದಲ್ಲಿ ವಾಟರ್​ ಡ್ಯಾಮೇಜ್​ = ವಾರಂಟ್​ ಇಲ್ಲ ಅಂತ ಬರೆದಿರುತ್ತೆ ಗೊತ್ತಾ? ಮಳೆ, ಬೆವರು, ಬಾತ್‌ರೂಮ್‌ನ ಹಬೆ, ಕೈ ಒದ್ದೆ - ಇಷ್ಟೇ ಸಾಕು ಫೋನ್‌ನ ಹಾರ್ಟ್ ಅಂತ ಕರೆಯೋ ಮದರ್‌ಬೋರ್ಡ್ ಶಾರ್ಟ್ ಸರ್ಕ್ಯೂಟ್ ಆಗೋಕೆ. ರಿಪೇರಿ ಬಿಲ್? ಕಡಿಮೆ ಅಂದ್ರು ₹8,000 ರಿಂದ ₹40,000! ಫೋನ್‌ಗೆ ಶತ್ರು ಅಂದ್ರೆ ನೀರು. ಅದ್ರಲ್ಲೂ ಫೋನ್‌ನ ಈ 5 ದುರ್ಬಲ ಜಾಗಕ್ಕೆ ನೀರು ಹೊಕ್ಕರೆ ಗೇಮ್ ಓವರ್. ಯಾವುವು ಆ 5 ಭಾಗ? ನೀರು ಬಿದ್ದ ತಕ್ಷಣ ಏನ್ ಮಾಡಬೇಕು? ಬನ್ನಿ, ಫೋನ್ ಉಳಿಸೋ ಟ್ರಿಕ್ಸ್ ನೋಡೋಣ. 


ಫೋನಿನ ಚಾರ್ಜಿಂಗ್ ಪೋರ್ಟ್ ಅತ್ಯಂತ ಸೂಕ್ಷ್ಮ ಭಾಗ. ಒಂದು ಹನಿ ನೀರು ಒಳಗೆ ಹೋದರೂ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಹೆಚ್ಚು. ಇದರಿಂದ ಫೋನ್ ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ. ಕೆಲವೊಮ್ಮೆ ಫೋನ್ ಸಂಪೂರ್ಣವಾಗಿ ಆಫ್ ಆಗಿ ಮತ್ತೆ ಆನ್ ಆಗದೇ ಇರಬಹುದು. ಹೀಗಾಗಿ ಮಳೆಯಲ್ಲಿ ಫೋನ್ ಬಳಸುವಾಗ, ಕೈ ಒದ್ದೆಯಾಗಿದ್ದಾಗ ಚಾರ್ಜಿಂಗ್ ಪೋರ್ಟ್‌ಗೆ ನೀರು ತಾಗದಂತೆ ವಿಶೇಷ ಕಾಳಜಿ ವಹಿಸಿ. ಒದ್ದೆಯಾದ ಫೋನನ್ನು ತಕ್ಷಣ ಚಾರ್ಜ್‌ಗೆ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ.

ಇದನ್ನೂ ಓದಿ: Second Hand Mobile: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುತ್ತಿದ್ದೀರಾ? ಮೋಸ ಹೋಗಬಾರದೆಂದರೆ ಈ 5 ವಿಷಯಗಳು ನಿಮ್ಮ ಗಮನದಲ್ಲಿರಲಿ!

ಫೋನಿನ ಸ್ಪೀಕರ್ ಮತ್ತು ಮೈಕ್‌ನಲ್ಲಿ ಸಣ್ಣ ರಂಧ್ರಗಳಿರುತ್ತವೆ. ಇವುಗಳಿಗೆ ನೀರು ಹೋದರೆ ಶಬ್ದ ಕಡಿಮೆಯಾಗುವುದು, ಕರ್ಕಶ ಶಬ್ದ ಬರುವುದು ಅಥವಾ ಸಂಪೂರ್ಣವಾಗಿ ಕೆಲಸ ನಿಲ್ಲಿಸುವುದು ಸಾಮಾನ್ಯ. ನೀರು ಹೋಗಿ ಒಣಗಿದ ನಂತರವೂ ಒಳಗಡೆ ತುಕ್ಕು ಹಿಡಿದು ಶಾಶ್ವತ ಹಾನಿಯಾಗಬಹುದು. ಹೆಡ್‌ಫೋನ್ ಜ್ಯಾಕ್ ಇರುವ ಫೋನ್‌ಗಳಲ್ಲಿ ನೀರು ಹೋದರೆ ಫೋನ್ ಯಾವಾಗಲೂ ಹೆಡ್‌ಫೋನ್ ಮೋಡ್‌ನಲ್ಲೇ ಇರುವ ಸಮಸ್ಯೆ ಬರುತ್ತದೆ. ಸ್ಪೀಕರ್‌ನಿಂದ ಶಬ್ದ ಬರುವುದೇ ನಿಲ್ಲುತ್ತದೆ.

ಸಿಮ್ ಕಾರ್ಡ್ ಹಾಕುವ ಟ್ರೇ ನೇರವಾಗಿ ಫೋನಿನ ಮದರ್‌ಬೋರ್ಡ್‌ಗೆ ಸಂಪರ್ಕ ಹೊಂದಿರುತ್ತದೆ. ಈ ಭಾಗಕ್ಕೆ ನೀರು ಹೋದರೆ ಶಾರ್ಟ್ ಸರ್ಕ್ಯೂಟ್ ಆಗಿ ಫೋನ್ ಸಂಪೂರ್ಣ ಹಾಳಾಗುವ ಅಪಾಯವಿದೆ. ಒಮ್ಮೆ ಮದರ್‌ಬೋರ್ಡ್ ಹಾಳಾದರೆ ರಿಪೇರಿ ವೆಚ್ಚ ತುಂಬಾ ದುಬಾರಿ. ಕೆಲವೊಮ್ಮೆ ಹೊಸ ಫೋನ್ ಕೊಳ್ಳುವುದೇ ಉತ್ತಮ ಎನ್ನುವ ಪರಿಸ್ಥಿತಿ ಬರುತ್ತದೆ. ಹೀಗಾಗಿ ಸಿಮ್ ಟ್ರೇ ಭಾಗವನ್ನು ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ.

IP68 ರೇಟಿಂಗ್ ಇದ್ದರೂ ಎಚ್ಚರ ಅಗತ್ಯ!

ಈಗಿನ ದುಬಾರಿ ಫೋನ್‌ಗಳು IP68 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಹೊಂದಿರುತ್ತವೆ. ಇದರರ್ಥ ನೀರಿನಿಂದ ಸ್ವಲ್ಪ ಮಟ್ಟಿನ ರಕ್ಷಣೆ ಇದೆ ಅಷ್ಟೇ. ಸಂಪೂರ್ಣ ಜಲನಿರೋಧಕ ಅಲ್ಲ. IP68 ಫೋನ್ ಕೂಡ ಒದ್ದೆಯಾಗಿರುವಾಗ ಚಾರ್ಜ್ ಮಾಡಿದರೆ ದೊಡ್ಡ ಅಪಘಾತ ಸಂಭವಿಸಬಹುದು. ನೀರು ಒಳಗೆ ಹೋಗಿದೆ ಎಂಬ ಅನುಮಾನ ಬಂದರೆ ಫೋನ್ ಸಂಪೂರ್ಣ ಒಣಗುವವರೆಗೆ ಬಳಸಬೇಡಿ. ಸಿಲಿಕಾ ಜೆಲ್ ಪ್ಯಾಕೆಟ್ ಜೊತೆ ಗಾಳಿಯಾಡುವ ಡಬ್ಬದಲ್ಲಿ ಇಟ್ಟು ಒಣಗಿಸಬಹುದು.

ಫೋನ್ ನೀರಿಗೆ ಬಿದ್ದರೆ ಅನೇಕರು ಅಕ್ಕಿಯ ಡಬ್ಬದಲ್ಲಿ ಹಾಕಿಡುವ ಸಲಹೆ ನೀಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಅಕ್ಕಿಯಲ್ಲಿರುವ ಧೂಳು ಮತ್ತು ಪಿಷ್ಟ ಫೋನಿನ ಒಳಗೆ ಸೇರಿ ಇನ್ನಷ್ಟು ಹಾನಿ ಮಾಡುತ್ತದೆ. ತೇವಾಂಶ ಹೀರಿಕೊಂಡ ಅಕ್ಕಿಯಿಂದ ಒಳಗಿನ ಭಾಗಗಳು ಬೇಗ ತುಕ್ಕು ಹಿಡಿಯುತ್ತವೆ. ಬದಲಾಗಿ ಮೈಕ್ರೋಫೈಬರ್ ಬಟ್ಟೆಯಿಂದ ಫೋನನ್ನು ಚೆನ್ನಾಗಿ ಒರೆಸಿ. ಫ್ಯಾನ್ ಗಾಳಿಗೆ ಅಥವಾ ಸಿಲಿಕಾ ಜೆಲ್ ಬಳಸಿ ಒಣಗಿಸಿ. ಹೇರ್ ಡ್ರೈಯರ್ ಅಥವಾ ಬಿಸಿಲಿನಲ್ಲಿ ಇಡುವ ತಪ್ಪು ಮಾಡಬೇಡಿ. ಅತಿಯಾದ ಶಾಖದಿಂದ ಫೋನಿನ ಆಂತರಿಕ ಭಾಗಗಳು ಕರಗಬಹುದು.

ಫೋನ್ ಒಣಗಿದೆ ಎಂದು ಖಚಿತವಾದ ನಂತರವೇ ಆನ್ ಮಾಡಿ ಅಥವಾ ಚಾರ್ಜ್ ಮಾಡಿ. ಮೊಬೈಲ್ ಫೋನಿನ ಘಟಕಗಳು ಬಹಳ ಸೂಕ್ಷ್ಮ. ಸ್ವಲ್ಪ ಕಾಳಜಿ ವಹಿಸಿದರೆ ನೀರಿನಿಂದ ಆಗುವ ಸಾವಿರಾರು ರೂಪಾಯಿ ನಷ್ಟವನ್ನು ತಪ್ಪಿಸಬಹುದು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries