ಆಮದು ಔಷಧಿಗಳ ಕನಿಷ್ಠ ದಾಸ್ತಾನು ಅವಧಿ ಮಾರ್ಪಾಡುಗೊಳಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರಸ್ತಾವನೆಯನ್ನು ಮಾಡಿದೆ.
ಹಾಲಿ ನಿಯಮದ ಪ್ರಕಾರ, ಆಮದು ಔಷದಿಗಳ ಕನಿಷ್ಠ ದಾಸ್ತಾನು ಅವಧಿಯು ಶೇ.60ರಷ್ಟು ಬಳಕೆಯೋಗ್ಯ ಅವಧಿಯನ್ನು ಹೊಂದಿರಬೇಕೆಂಬ ನಿಯಮವನ್ನು ಬದಲಾಯಿಸಲಾಗಿದ್ದು, ಇದೀಗ ಆಮದು ಔಷಧಿಗಳು ಕನಿಷ್ಠ 12 ತಿಂಗಳುಗಳ ದಾಸ್ತಾನು (ಶೆಲ್ಫ್ ಲೈಫ್) ಅವಧಿಯನ್ನು ಹೊಂದಿರಬೇಕೆಂದು ಕಡ್ಡಾಯ ಮಾಡಲಾಗಿದೆ.
1945ರ ಡ್ರಗ್ಸ್ ಕಾನೂನುಗಳ ಕಾನೂನು 31ಕ್ಕೆ ಮಾಡಲಾದ ಈ ಕರಡು ತಿದ್ದುಪಡಿಯು ದೇಶದ ಫಾರ್ಮಾಸ್ಯೂಟಿಕಲ್ ವಲಯದಲ್ಲಿ ವ್ಯವಹಾರಗಳನ್ನು ಸುಲಲಿತಗೊಳಿಸುವುದನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ಪ್ರಸಕ್ತ 1945ರ ಔಷಧಿ ಹಾಗೂ ಪ್ರಸಾಧನ ಸಾಮಾಗ್ರಿಗಳ ನಿಯಮಾವಳಿಗಳ ಪ್ರಕಾರ, ಬಳಕೆಯೋಗ್ಯ ದಾಸ್ತಾನು ಅವಧಿಯು ಶೇ.60ಕ್ಕಿಂತ ಕಡಿಮೆ ಇರುವ ಯಾವುದೇ ಆಮದು ಔಷಧಿಯನ್ನು ಭಾರತದಲ್ಲಿ ಮಾಡುವಂತಿಲ್ಲ.

