HEALTH TIPS

ಭಾರತದಲ್ಲಿ 'ಏಕಾಂಗಿ' ಮಹಿಳೆಯರ ಸಂಖ್ಯೆ ಏರಿಕೆ: ಕೇರಳಕ್ಕೆ ಎರಡನೇ ಸ್ಥಾನ

 ನವದೆಹಲಿ: ಪತಿಯ ಸಾವು, ವಿಚ್ಛೇದನ ಮೊದಲಾದ ಕಾರಣಗಳಿಂದ ಹೆಚ್ಚಿನ ಮಹಿಳೆಯರು ಉಳಿದ ಜೀವನವನ್ನು ಏಕಾಂಗಿಯಾಗಿ ಬದುಕುವ ಪ್ರವೃತ್ತಿ ಭಾರತದಲ್ಲಿ ಹೆಚ್ಚುತ್ತಿದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿಯೇ ಇಂತಹವರ ಸಂಖ್ಯೆ ಹೆಚ್ಚುತ್ತಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಈ ರಾಜ್ಯಗಳ ಜನರಿದ್ದಾರೆ ಎಂದು ಇತ್ತೀಚೆಗಿನ 'ಮಾದರಿ ನೋಂದಣಿ ಸಮೀಕ್ಷೆ'ಯಿಂದ (ಎಸ್‌ಆರ್‌ಎಸ್‌) ಗೊತ್ತಾಗಿದೆ.


ಎಸ್‌ಆರ್‌ಎಸ್‌ ಸಾಂಖ್ಯಿಕ ವರದಿ 2024ರ ಪ್ರಕಾರ, ತಮಿಳುನಾಡಿನಲ್ಲಿ ವಿಚ್ಛೇದಿತರಾದವರು ಅಥವಾ ವಿಧವೆಯರ ಸಂಖ್ಯೆ ಇಡೀ ದೇಶದಲ್ಲಿಯೇ ಗರಿಷ್ಠವಾಗಿದ್ದು, ಶೇಕಡ 11.6ರಷ್ಟಿದೆ. ನಂತರದ ಸ್ಥಾನದಲ್ಲಿ ಕೇರಳ (ಶೇ 10.4) ಹಾಗೂ ಕರ್ನಾಟಕ (ಶೇ 8.6) ಇವೆ.

ಬಾಲಕಿಯರ ಮದುವೆ ಹೆಚ್ಚಳ: ದೇಶದಲ್ಲಿ ಶೇಕಡ 2.1ರಷ್ಟು ಬಾಲಕಿಯರು ಕಾನೂನು ನಿಗದಿಪಡಿಸಿದ್ದಕ್ಕಿಂತ ವಯಸ್ಸಿಗಿಂತಲೂ ಮೊದಲೇ ಮದುವೆಯಾಗುತ್ತಿದ್ದಾರೆ.

ಉಳಿದಂತೆ 18ರಿಂದ 20ನೇ ವಯಸ್ಸಿಗೆ ಶೇಕಡ 24.5ರಷ್ಟು ತರುಣಿಯರು ವಿವಾಹ ಆಗುತ್ತಿದ್ದು, 21ರ ನಂತರ ವಿವಾಹವಾಗುತ್ತಿರುವವರ ಸಂಖ್ಯೆ ಶೇ 73.5ರಷ್ಟಿದೆ.

ಗ್ರಾಮೀಣ ಭಾಗದಲ್ಲಿ ಈ ಪ್ರಮಾಣವು ಕ್ರಮವಾಗಿ ಶೇ 2.4, ಶೇ 27.4 ಹಾಗೂ ಶೇ 70.2ರಷ್ಟಿದೆ. ನಗರ ಭಾಗದಲ್ಲಿ ಶೇ 1.1, ಶೇ 16.6 ಹಾಗೂ ಶೇ 82.2ರಷ್ಟಿದೆ.

2024ರಲ್ಲಿ ದೇಶದಾದ್ಯಂತ ಯುವತಿಯರ ಮದುವೆಯ ಸರಾಸರಿ ವಯಸ್ಸು 23.1ರಷ್ಟಿದೆ. ಗ್ರಾಮೀಣ ಭಾಗದಲ್ಲಿ ಸರಾಸರಿ ವಯಸ್ಸು 22.6ರಷ್ಟಿದ್ದರೆ, ನಗರ ಭಾಗದಲ್ಲಿ 24.4ರಷ್ಟಿದೆ.

ಕರ್ನಾಟಕದಲ್ಲಿ ಯುವತಿಯರ ಮದುವೆಯ ಸರಾಸರಿ ವಯಸ್ಸು 24.8 ವರ್ಷ ಇದ್ದರೆ, ಕೇರಳದಲ್ಲಿ 25.1 ವರ್ಷ ಇದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries