HEALTH TIPS

'ಫಿಫಾ' ವಿಶ್ವಕಪ್-ಘೋಷಣಾ ಮೆರವಣಿಗೆಗೆ ಕಾಸರಗೋಡಿನಲ್ಲಿ ಭವ್ಯ ಸ್ವಾಗತ- ಕಾಸರಗೋಡು ಪ್ರೆಸ್‍ಕ್ಲಬ್ ಆತಿಥ್ಯದಲ್ಲಿ ಕಾರ್ಯಕ್ರಮ

ಕಾಸರಗೋಡು: 'ಫಿಫಾ' ವಿಶ್ವಕಪ್‍ಗೆ ಸಂಬಂಧಿಸಿದಂತೆ, 'ಕ್ರೀಡೆಯನ್ನು ವ್ಯಸನಕಾರಿಯಾಗಿಸಿ' ಎಂಬ ಘೋಷಣೆಯೊದಿಗೆ ಆಲ್ ಕೇರಳ ಸ್ಪೋಟ್ರ್ಸ್ ಗೂಡ್ಸ್ ಡೀಲರ್ಸ್ ಅಸೋಸಿಯೇಷನ್ ಮತ್ತು ಕೇರಳಂ ಪ್ರೆಸ್ ವರ್ಕರ್ಸ್ ಯೂನಿಯನ್ ಸಹಕಾರದೊಂದಿಗೆ ವಿಶ್ವಕಪ್ ಘೋಷಣಾ ಮೆರವಣಿಗೆಗೆ ಕಾಸರಗೋಡಿನಲ್ಲಿ ಸೋಮವಾರ ಭವ್ಯ ಸ್ವಾಗತ ನೀಡಲಾಯಿತು. 


ಕಾಸರಗೋಡು ಪ್ರೆಸ್ ಕ್ಲಬ್ ವಠಾರದಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಪೆನಾಲ್ಟಿ ಶೂಟೌಟ್ ನಡೆಸುವ ಮೂಲಕ ಮೆರವಣಿಗೆಗೆ ಸ್ವಾಗತ ನೀಡಿದರು. ಈ ಸಂದರ್ಭ  ಮಾಧ್ಯಮ ಸಿಬ್ಬಂದಿಗಾಗಿ ಆಯೋಜಿಸಲಾದ ಶೂಟೌಟ್ ಪಂದ್ಯವನ್ನು ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು.  ಆಲ್ ಕೇರಳ ಸ್ಪೋಟ್ರ್ಸ್ ಗೂಡ್ಸ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ವಿಶ್ವ ಕಪ್‍ನ ಮಾದರಿಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.    ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಶೂಟೌಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಪತ್ರಕರ್ತರು ತಮ್ಮ ನೆಚ್ಚಿನ ಆಟಗಾರರ ಮುಖಗಳನ್ನು ಹೊಂದಿರುವ ವಿವಿಧ ದೇಶಗಳ ರಾಷ್ಟ್ರಧ್ವಜ ಮತ್ತು ಜೆರ್ಸಿಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳ ರ್ಯಾಲಿ ಮತ್ತು ಸಾರ್ವಜನಿಕರಿಗಾಗಿ ಶೂಟೌಟ್ ಸ್ಪರ್ಧೆಗಳನ್ನು ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಮಂಗಳವಾರ ಕಣ್ಣೂರು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಜೂ. 11 ರಂದು ಕೋಯಿಕ್ಕೋಡ್, 12 ರಂದು ಮಲಪ್ಪುರಂ ಮತ್ತು 13 ರಂದು ಪಾಲಕ್ಕಾಡ್‍ನಲ್ಲಿ ಪ್ರವಾಸ ಕೈಗೊಳ್ಳಲಿದೆ. 13 ರಂದು ತ್ರಿಶೂರ್ ಜಿಲ್ಲೆಯಲ್ಲಿ ಪ್ರವಾಸದ ನಂತರ, ಎರ್ನಾಕುಲಂ ಪೋರ್ಟ್ ಕೊಚ್ಚಿಯಲ್ಲಿ ಸಂಪನ್ನಗೊಳ್ಳಲಿದೆ.

ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಪ್ರೆಎಸ್‍ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ವಹಿಸಿದ್ದರು. ಕ್ರೀಡಾ ಸಾಮಗ್ರಿಗಳ ವ್ಯಾಪಾರಿಗಳ ಸಂಘದ ರಾಜ್ಯ ಕೋಶಾಧಿಕಾರಿ ಅಬ್ದುಲ್ ಸಮದ್, ಜಿಲ್ಲಾಧ್ಯಕ್ಷ ನಾಸರ್, ಕಾರ್ಯದರ್ಶಿ ಅನ್ಸಾರಿ, ಜಿಲ್ಲಾ ಸಮಿತಿ ಸದಸ್ಯ ಅಜ್ಸಲ್ ಮೊದಲಾದವರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries