HEALTH TIPS

ಕಾರ್ಯಕರ್ತರ, ದಾನಿಗಳ ಶ್ರಮಕ್ಕೆ ದೇವರ ಅನುಗ್ರಹ: ಪೆರಡಾಲದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬಿ.ವಸಂತ ಪೈ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ಜರಗಿದ್ದು, ದೃಢಕಲಶದಂದು ಅಪರಾಹ್ನ ಕಾರ್ಯಕರ್ತರ ಅಭಿನಂದನಾ ಸಭೆ ಜರಗಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪೆರಡಾಲದ ಆರಾಧ್ಯ ದೈವ, ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಜರಗಿದ ಮಹಾ ಬ್ರಹ್ಮಕಲಶೋತ್ಸವ ಮತ್ತು ಧಾರ್ಮಿಕ ಸಾಂಸ್ಕøತಿಕ ಉತ್ಸವಗಳು ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ. ಅದೊಂದು ಭಕ್ತಿ ಸಾಗರ, ನಮ್ಮೂರಿನ ಐಕ್ಯತೆಯ ಪ್ರತೀಕವಾಗಿತ್ತು. ಇಂದು ಈ ಇಡೀ ಮಹೋತ್ಸವವನ್ನು ಅತ್ಯಂತ ವೈಭವದಿಂದ, ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಗೊಳಿಸಿದ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಯಾವಾಗ ಭಕ್ತಿ ಮತ್ತು ಸೇವಾ ಮನೋಭಾವ ಒಂದಾಗುತ್ತದೆಯೋ, ಅಲ್ಲಿ ದೈವ ಸಂಕಲ್ಪಗಳು ಸಾಕಾರಗೊಳ್ಳುತ್ತವೆ ಎಂದರು. 


ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಗೌರವಾಧ್ಯಕ್ಷ ಜಯದೇವ ಖಂಡಿಗೆ, ಮೊಕ್ತೇಸರ ಸೀತಾರಾಮ ನವಕಾನ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಶಿವಶಕ್ತಿ ಪೆರಡಾಲದ ಅಧ್ಯಕ್ಷ, ಸಮಿತಿಯ ಜೊತೆ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಲೆಕ್ಕಪರಿಶೋಧಕ ಕುಞ್ಞಣ್ಣ, ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಲೆಕ್ಕ ಪರಿಶೋಧಕ ಸತೀಶ್ ಕುಮಾರ್ ಪುದ್ಯೋಡು, ಉಪಾಧ್ಯಕ್ಷ ಮಾಜಿ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ ಪೆರಡಾಲಗುತ್ತು, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಜೊತೆಕಾರ್ಯದರ್ಶಿ ಗಣೇಶಪ್ರಸಾದ ಕಡಪ್ಪು, ಶಿವಶಕ್ತಿ ಪೆರಡಾಲದ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳೊಂದಿಗೆ ಪೆರಡಾಲದ ಇತಿಹಾಸದಲ್ಲೇ ಅತ್ಯಂತ ಶಿಸ್ತುಬದ್ಧ ವ್ಯವಸ್ಥೆಯನ್ನು ನಿರ್ಮಿಸಿದ ಸ್ವಯಂಸೇವಕರ ತಾಳ್ಮೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಹಗಲಿರುಳು ಎನ್ನದೆ ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿಟ್ಟು, ಭಕ್ತರಿಗೆ ದೈವಿಕ ಅನು`Àೂತಿ ನೀಡುವಲ್ಲಿ ನಿಮ್ಮ ಪಾತ್ರ ಹಿರಿದು ಎಂದು ಸ್ವಾಗತಿಸಿದರು. ಮಾತೃಸಮಿತಿ ಅಧ್ಯಕ್ಷೆ ವಿನಯ ಜೆ.ರೈ, ನಾಟಿವೈದ್ಯ ಶ್ರೀರಾಮ ಪಟ್ಟಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಜೊತೆಕಾರ್ಯದರ್ಶಿ ಉದಯಶಂಕರ ಪಿ.ಎಸ್.ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries