HEALTH TIPS

ತಿರುವನಂತಪುರಂ ಕಾರ್ಪೋರೇಷನ್ ಘರ್ಷಣೆ: ಬಿಜೆಪಿ ಕೌನ್ಸಿಲರ್ ಗಳ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: ತಿರುವನಂತಪುರಂ ನಗರಸಭೆ ಕಚೇರಿಯ ಕೌನ್ಸಿಲ್ ಹಾಲ್‍ನಲ್ಲಿ ಯುಡಿಎಫ್-ಬಿಜೆಪಿ ಕೌನ್ಸಿಲರ್‍ಗಳ ನಡುವೆ ನಡೆದ ಘರ್ಷಣೆಯಲ್ಲಿ ಮ್ಯೂಸಿಯಂ ಪೋಲೀಸರು ನಾಲ್ವರು ಬಿಜೆಪಿ ಕೌನ್ಸಿಲರ್‍ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 


ಬಿಜೆಪಿ ಕೌನ್ಸಿಲರ್‍ಗಳಾದ ಚೆಂಪಝಂತಿ ಉದಯನ್, ಗಿರಿ, ರತೀಶ್ ಮತ್ತು ಪಪ್ಪನಂಕೋಡ್ ಸಾಜಿ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಯುಡಿಎಫ್ ಮಹಿಳಾ ಕೌನ್ಸಿಲರ್‍ಗಳಾದ ಶಿರ್ಲಿ. ಎಸ್ ಮತ್ತು ಅನಿತಾ ಅಲೆಕ್ಸ್ ಅವರ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆ ಸೋಮವಾರ, ಜೂನ್ 29, ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರ್ಪೋರೇಷನ್ ಕೌನ್ಸಿಲ್ ಹಾಲ್‍ನಲ್ಲಿ ನಡೆಯಿತು. ಕೌನ್ಸಿಲ್ ಸಭೆಯ ಹಾಜರಾತಿ ರಿಜಿಸ್ಟರ್‍ನಲ್ಲಿ ಸಹಿ ಹಾಕಲು ಮುಂದಾದ ದೂರುದಾರ ಶಿರ್ಲಿ ಮತ್ತು ಇತರ ಮಹಿಳಾ ಕೌನ್ಸಿಲರ್‍ಗಳನ್ನು ಆರೋಪಿಗಳು ತಡೆದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

ಮೊದಲ ಆರೋಪಿ ಚೆಂಪಝಂತಿ ಉದಯನ್ ದೂರುದಾರರಾದ ಶಿರ್ಲಿ, ಅನಿತಾ ಅಲೆಕ್ಸ್ ಮತ್ತು ಇತರ ಕೌನ್ಸಿಲರ್‍ಗಳಿಗೆ ತನ್ನ ಕೈಗಳಿಂದ ಹೊಡೆದು ಗಾಯಗೊಳಿಸಿದ್ದಾನೆ. ಎಫ್‍ಐಆರ್‍ನಲ್ಲಿ ಶಿರ್ಲಿಯ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದು ನೋವುಂಟುಮಾಡಿದ್ದಾನೆ ಎಂದು ಹೇಳಲಾಗಿದೆ.

ಬಿಜೆಪಿ ಕೌನ್ಸಿಲರ್‍ಗಳಾದ ಗಿರಿ, ರತೀಶ್ ಮತ್ತು ಪಪ್ಪನಂಕೋಡ್ ಸಾಜಿ ಮಹಿಳಾ ಕೌನ್ಸಿಲರ್‍ಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಥಳಿಸಲು ಪರಸ್ಪರ ಸಂಚು ರೂಪಿಸಿದರು.

ಯುಡಿಎಫ್ ಕೌನ್ಸಿಲರ್ ಶಿರ್ಲಿಯನ್ನು ಹಲ್ಲೆಯ ನಂತರ ಗಾಯಗಳೊಂದಿಗೆ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮ್ಯೂಸಿಯಂ ಪೆÇಲೀಸ್ ಅಧಿಕಾರಿಗಳು ಖುದ್ದಾಗಿ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರ್ಲಿಯವರ ಹೇಳಿಕೆಯನ್ನು ದಾಖಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ.

ಮ್ಯೂಸಿಯಂ ಪೆÇಲೀಸ್ ಠಾಣೆ ಸಬ್-ಇನ್ಸ್‍ಪೆಕ್ಟರ್ ಅನು ಎಸ್. ನಾಯರ್ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries