ಕಾಸರಗೋಡು: ದೇಶಮಂಗಲದ ಪವಿತ್ರ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರ ಮಹಾಕಾರ್ಯದ ಅಂಗವಾಗಿ, ಜೀರ್ಣೋದ್ಧಾರದ ಸಮಗ್ರ ಮಾಹಿತಿ, ಯೋಜನೆಗಳು ಹಾಗೂ ಭಕ್ತಾದಿಗಳ ಸಹಭಾಗಿತ್ವದ ವಿವರಗಳನ್ನು ಒಳಗೊಂಡ ವಿಜ್ಞಾಪನಾ ಪತ್ರಿಕೆಯ ಬಿಡುಗಡೆ ಸಮಾರಂಭ ಜೂನ್ 14ರಂದು ಭಾನುವಾರ ಸಂಜೆ 4.00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿವರ್ಯರು, ಪರಮ ಸಂರಕ್ಷಕರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ದಿವ್ಯ ಸಾನ್ನಿಧ್ಯದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು.ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ರವೀಂದ್ರ ಆಳ್ವ, ಕೋಟೆಕುಂಜ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಪುಣ್ಯಕಾರ್ಯಕ್ಕಾಗಿ ಭಕ್ತಾದಿಗಳಿಂದ ಮುಷ್ಟಿಕಾಣಿಕೆ ಸಮರ್ಪಣೆ, ದೇಣಿಗೆ ವಾಗ್ದಾನ ಹಾಗೂ ವಿವಿಧ ರೀತಿಯ ಸೇವಾ ಸಮರ್ಪಣೆ ನಡೆಯಲಿವೆ.



