ಕಾಸರಗೋಡು: ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಜೂ. 21ರಂದು ಮಲಬಾರ್ ಪ್ರದೇಶಕ್ಕೆ ಮೂರು ವಿಶೇಷ ರೈಲುಗಳು ಸಂಚಾರ ನಡೆಸಲಿದೆ. ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಎರಡು ಮೆಮು ಮತ್ತು ಒಂದು ಪ್ಯಾಸೆಂಜರ್ ರೈಲು ಸಂಚಾರ ನಡೆಸಲಿದೆ. ರೈಲ್ವೆ ಕೌಂಟರ್ಗಳು, ಎಟಿವಿಎಂ ಯಂತ್ರಗಳು ಮತ್ತು ರೈಲ್ ಒನ್ ಅಪ್ಲಿಕೇಶನ್ ಮೂಲಕ ಟಿಕೆಟ್ಗಳನ್ನು ಖರೀದಿಸಬಹುದು. ನೀಟ್ ಪರೀಕ್ಷಾ ಸಮಯ ಭಾನುವಾರ ಮಧ್ಯಾಹ್ನ 2 ರಿಂದ ಸಂಜೆ 5.20 ರವರೆಗೆ ಇರಲಿದ್ದು, ಕಾಸರಗೋಡಿನಿಂದ ಸಂಜೆ 5.56 ಕ್ಕೆ ಮಂಗಳೂರು-ಕಣ್ಣೂರು ಪ್ಯಾಸೆಂಜರ್ (56704) ಅನ್ನು ಆಶ್ರಯಿಸಬಹುದಾಗಿದೆ.
ಪಾಲಕ್ಕಾಡ್-ಕೋಝಿಕೋಡ್ ಅನ್ ರಿಸವ್ರ್ಡ್ ಮೆಮು (06131) ಭಾನುವಾರ ಬೆಳಗ್ಗೆ 5.50ಕ್ಕೆ ಪಾಲಕ್ಕಾಡ್ನಿಂದ ಹೊರಟು 11.30ಕ್ಕೆ ಕಾಸರಗೋಡು ತಲುಪಲಿದೆ. ಒಟ್ಟಪಾಲಂ-6.15, ಶೋರನೂರು-6.35, ಪಟ್ಟಾಂಬಿ-6.54, ಕುಟ್ಟಿಪ್ಪುರಂ-7.13, ತಿರೂರ್-7.27, ಪರಪ್ಪನಂಗಡಿ-7.41, ಕೋಝಿಕ್ಕೋಡ್-8.19, ಕೊಯಿಲಾಂಡಿ-8.37, ವಡಕರ-8.54, ತಲಶ್ಶೇರಿ 9.17, ಕನ್ಣೂರು-9.55, ಪಯ್ಯನ್ನೂರು-10.17, ಚೆರುವತ್ತೂರು-10.44, ಕಾಞಂಗಾಡು-10.59, ಕಾಸರಗೋಡು-11.30 ತಲುಪಲಿದೆ.
ಕಣ್ಣೂರು-ತ್ರಿಶೂರ್ ಕಾಯ್ದಿರಿಸದ ಮೆಮು ವಿಶೇಷ ರೈಲು(06132)ಜೂ. 21ರ ಭಾನುವಾರ ಸಂಜೆ 6.15 ಕ್ಕೆ ಕಣ್ಣೂರಿನಿಂದ ಹೊರಡಲಿದೆ. ರಾತ್ರಿ 11.45ಕ್ಕೆ ತ್ರಿಶೂರ್ ತಲುಪಲಿದೆ. ತಲಶ್ಶೇರಿ-6.37, ವಡಕರ-6.58, ಕೊಯಿಲಾಂಡಿ-7.45, ಫಾರೋಕ್-8.04, ಪರಪ್ಪನಂಗಡಿ-8.21, ತಾನೂರ್-8.30, ತಿರೂರು-8.39, ಕುಟ್ಟಿಪ್ಪುರಂ-8.53, ಪಟ್ಟಾಂಬಿ-9.14, ಶೋರನೂರು-10.10, ವಡಕ್ಕಂಚೇರಿ-11.18, ಮುಳಂಕುನ್ನತ್ತುಕಾವು-11.29, ತ್ರಿಶೂರ್-11.45ಕ್ಕೆ ತಲುಪುವುದು.
ಕಣ್ಣೂರು-ಕೋಯಿಕ್ಕೋಡ್ ಅನ್ ರಿಸರ್ವ್ಡ್ ಪ್ಯಾಸೆಂಜರ್ ವಿಶೇಷ ರೈಲು(06133) ಜೂ. 21ರ ಭಾನುವಾರ ರಾತ್ರಿ 8.30 ಕ್ಕೆ ಕಣ್ಣೂರಿನಿಂದ ಹೊರಡಲಿದ್ದು, 10.20ಕ್ಕೆ ಕೋಯಿಕ್ಕೋಡ್ ತಲುಪಲಿದೆ.


