HEALTH TIPS

ಭಾರತ- ಚೀನಾ ಪರಸ್ಪರ ಹಿತಾಸಕ್ತಿ ಗೌರವಿಸುವುದು ಅನಿವಾರ್ಯ: ವಾಂಗ್ ಯಿ

ಬೀಜಿಂಗ್‌: ಪರಸ್ಪರರ ಪ್ರಮುಖ ಹಿತಾಸಕ್ತಿಗಳನ್ನು ಗೌರವಿಸುವುದು ಮತ್ತು ಉಭಯ ದೇಶಗಳ ನಡುವಿನ ಒಪ್ಪಂದವನ್ನು ಅನುಷ್ಠಾನಗೊಳಿಸುವುದು ಭಾರತ ಮತ್ತು ಚೀನಾಗೆ ಅನಿವಾರ್ಯವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. 

ಬ್ರಿಕ್ಸ್ ಎನ್‌ಎಸ್‌ಎ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ವಾಂಗ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಸೋಮವಾರ ಭೇಟಿ ಮಾಡಿದರು.

ವಾಂಗ್‌ ಮತ್ತು ಅಜಿತ್‌ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದರು.

'ಭಾರತವು ಚೀನಾದ ಪ್ರಮುಖ ನೆರೆಯ ರಾಷ್ಟ್ರವಾಗಿದ್ದು, ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಿವೆ. ಚೀನಾ ಮತ್ತು ಭಾರತ ಪ್ರತಿಸ್ಫರ್ಧಿಗಳಲ್ಲ. ಬದಲಾಗಿ ಪಾಲುದಾರರು ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಇಬ್ಬರ ನಡುವೆ ರೂಪಿಸಲಾಗಿರುವ ಕಾರ್ಯತಂತ್ರವು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ' ಎಂದು ವಾಂಗ್ ಹೇಳಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- ವಾಂಗ್ ಯಿ ಚೀನಾದ ವಿದೇಶಾಂಗ ಸಚಿವಭಾರತ ಮತ್ತು ಚೀನಾ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡು ಪ್ರಮುಖ ಆರ್ಥಿಕತೆಗಳಾಗಿವೆ. ದ್ವಿಪಕ್ಷೀಯ ಸಂಬಂಧಗಳನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ನೋಡುವುದಲ್ಲದೆ ಜಾಗತಿಕ ದೃಷ್ಟಿಕೋನದಿಂದ ಪರಸ್ಪರ ಸಹಕಾರವನ್ನು ಉತ್ತೇಜಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries