ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‍ನ ಕಾಸರಗೋಡು ವಲಯದ ಕುತ್ಯಾಳ ಶ್ರೀ ನವಜೀವನ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಮಿತಿ ಸದಸ್ಯರ ಮಕ್ಕಳಲ್ಲಿ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ವಿಜೇತರನ್ನು ಶಾಲು ಹಾಗು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭವನ್ನು ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾನುಪ್ರಕಾಶ್ ಉದ್ಘಾಟಿಸಿದರು. ನವಜೀವನ ಸಮಿತಿ ಅಧ್ಯಕ್ಷರಾದ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್, ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯರಾಮ ಪಾಠಾಳಿ, ಕಾಸರಗೋಡು ವಲಯದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಸದಸ್ಯರಾದ ರಾಮಕೃಷ್ಣ ಮಜಲು, ಸುಕುಮಾರ ಕುದ್ರೆಪ್ಪಾಡಿ. ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ವಿಜೇತರಾದ ಅನುಷ ಎಸ್ ಎ, ಶ್ರೀನಂದನ ಕೆ, ವರ್ಷ ಬಿ ಎಸ್, ವಿಷ್ಣು ಬಿ ಎಸ್, ಹಾಗೂ ಪ್ಲಸ್ ಟು ವಿಜೇತರಾದ ಅಭಿನವ್, ವೈಷ್ಣವಿ ಕೆ, ವೈಭವ್ ಕೆ ಇವರನ್ನು ಗೌರವಿಸಲಾಯಿತು. ನವಜೀವನ ಸಮಿತಿಯ ಜೋಷಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಜ್ಯೋತಿ ವಂದಿಸಿದರು.



