HEALTH TIPS

ನಡಿಗೆಯಲ್ಲಿ ತಿರುಮಲ ಬೆಟ್ಟವೇರಿದ 116ರ ಅಜ್ಜಿ: VIP ದರ್ಶನ ಕಲ್ಪಿಸಿದ ಟಿಟಿಡಿ

 ತಿರುಮಲ: ಅಚಲವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುತ್ತದೆ ಎಂಬುದಕ್ಕೆ 116 ವರ್ಷದ ನವನೀತಮ್ಮ ಅವರು ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ನಡಿಗೆಯಲ್ಲಿ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ. 


ಸದ್ಯ ಬೆಟ್ಟವನ್ನು ಹತ್ತಿರುವ ಅಜ್ಜಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಜ್ಜಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾತ್ರವಲ್ಲದೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಅಜ್ಜಿಯ ಭಕ್ತಿಯನ್ನು ಶ್ಲಾಘಿಸಿದ್ದಾರೆ.

ಕರ್ನಾಟಕದ ಈ ಕುಟುಂಬವು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದಾರೆ. ಈ ಕಾರಣದಿಂದಾಗಿ ಅಜ್ಜಿ ಕೂಡ ಕುಟುಂಬದೊಂದಿಗೆ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದರು. ಆಗ ತಾನೂ ಕೂಡ ನಿಮ್ಮೊಂದಿಗೆ ಕಾಲ್ನಡಿಗೆಯಲ್ಲೇ ಬೆಟ್ಟ ಏರುವುದಾಗಿ ನಿರ್ಧರಿಸಿದ್ದರು. ಅಲಿಪಿರಿ ಮಾರ್ಗದ ಮೂಲಕ ಬೆಟ್ಟವನ್ನು ತಲುಪಬೇಕು. ಇದು ಶೇಷಾಚಲಂ ಬೆಟ್ಟದ ಮೂಲಕ ಹಾದುಹೋಗುತ್ತದೆ.

ಈ ಮಾರ್ಗವು 11 ಕಿ.ಮೀ ಉದ್ದವಿದ್ದು, ಸುಮಾರು 3,550 ಕಡಿದಾದ ಮೆಟ್ಟಿಲುಗಳನ್ನು ಒಳಗೊಂಡಿದೆ. ಯುವಕರು ಹಾಗೂ ದೈಹಿಕವಾಗಿ ಸದೃಢವಾಗಿರುವವರು ಕೂಡ ಈ ಮಾರ್ಗದಲ್ಲಿ ಕಷ್ಟ ಪಡುತ್ತಾರೆ. ಆದರೆ ಈ ಶತಾಯುಷಿ ಅಜ್ಜಿ ತನ್ನ ಕುಟುಂಬ ಸದಸ್ಯರ ನಿರಂತರ ಪ್ರೋತ್ಸಾಹ ಮತ್ತು ದೈಹಿಕ ಬೆಂಬಲದೊಂದಿಗೆ ಬೆಟ್ಟವನ್ನು ಹತ್ತಿದ್ದಾರೆ.

ಅಜ್ಜಿ ಬೆಟ್ಟವನ್ನು ಏರುವಾಗ ಸಹ ಯಾತ್ರಿಕರೊಬ್ಬರು ವಿಡಿಯೊ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಯಸ್ಸಿನಲ್ಲಿಯೂ ಬೆಟ್ಟವನ್ನು ಇಷ್ಟು ಸಾಲೀಸಾಗಿ ಏರುವುದು ಸಾಮಾನ್ಯವಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಜ್ಜಿಯ ಅಚಲವಾದ ಭಕ್ತಿಗೆ ಶ್ಲಾಘಿಸಿದ್ದಾರೆ. 'ನಿಜವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಕರ್ನಾಟಕದ ಈ 116 ವರ್ಷದ ಅಜ್ಜಿ ತಿರುಮಲಕ್ಕೆ ನಡೆದೇ ಬೆಟ್ಟವೇರಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅವರ ಕುಟುಂಬವು ಅವರಿಗೆ ನೀಡಿದ ಸಹಕಾರ, ಬೆಂಬಲ ಸ್ಪೂರ್ತಿದಾಯಕವಾಗಿದೆ' ಎಂದು ಬರೆದುಕೊಂಡಿದ್ದಾರೆ.

ತಿರುಪತಿ ದೇವಸ್ಥಾನದ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಅಜ್ಜಿಗೆ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಅಜ್ಜಿಯ ಮೊಮ್ಮಗ ಮಾತನಾಡಿ, ನನ್ನ ಅಜ್ಜಿಯ ಆಸೆಯನ್ನು ಈಡೇರಿಸಿದ್ದಕ್ಕಾಗಿ ಮತ್ತು ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ದರ್ಶನ ಭಾಗ್ಯವನ್ನು ನೀಡಿದ್ದಕ್ಕಾಗಿ ಟಿಟಿಡಿ ಮತ್ತು ಟಿಟಿಡಿ ಅಧ್ಯಕ್ಷರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries