HEALTH TIPS

ಇ-20ಗಿಂತ ಲೀಟರ್‌ ಗೆ 20 ರೂ. ಅಗ್ಗದಲ್ಲಿ ಇ-85 ಇಂಧನಕ್ಕೆ ಚಿಂತನೆ: ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ

 ನವದೆಹಲಿ: ಇ-20 ಇಂಧನಕ್ಕಿಂತ ಪ್ರತಿ ಲೀಟರ್‌ಗೆ ಸುಮಾರು 20 ರೂ. ಅಗ್ಗದ ದರದಲ್ಲಿ ಇ-85 ಇಂಧನವನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಆದರೆ, ಎಥನಾಲ್ ಮಿಶ್ರಿತ ಇಂಧನ ಬಳಕೆಗೆ ಮೀಸಲಾದ ವಾಹನಗಳಲ್ಲಿ ಮಾತ್ರ ಈ ಇಂಧನವನ್ನು ಬಳಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 


CNN-News18 ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರ ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದ್ದು, ಅದರೊಂದಿಗೆ ಗ್ರಾಹಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶವೂ ಇದೆ ಎಂದು ಹೇಳಿದರು.

ವಿಸ್ತೃತ ಜೈವಿಕ ಇಂಧನ ನೀತಿಯನ್ನು ಸಮರ್ಥಿಸಿಕೊಂಡ ಅವರು, ಎಥನಾಲ್ ಮಿಶ್ರಿತ ಪೆಟ್ರೋಲ್‌ ನಿಂದ ಎಂಜಿನ್‌ಗೆ ಹಾನಿಯಾಗುತ್ತದೆ ಹಾಗೂ ವಾಹನಗಳ ಕಾರ್ಯಕ್ಷಮತೆ ಕುಸಿಯುತ್ತದೆ ಎಂಬ ಆರೋಪಗಳನ್ನು ಅಲ್ಲಗಳೆದರು.

ಇ-85 ಇಂಧನ ಪ್ರಸ್ತಾವನೆಯ ಕುರಿತು ಮಾತನಾಡಿದ ಅವರು, ಶೇ. 85ರಷ್ಟು ಎಥನಾಲ್ ಹೊಂದಿರುವ ಈ ಇಂಧನವನ್ನು, ಅದನ್ನು ಬಳಸಲು ವಿನ್ಯಾಸಗೊಳಿಸಲಾದ ವಾಹನಗಳಲ್ಲಿ ಮಾತ್ರ ಬಳಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು. ಇ-20 ಪೆಟ್ರೋಲ್‌ಗೆ ಹೋಲಿಸಿದರೆ ಇ-85 ಇಂಧನದ ಬೆಲೆ ಪ್ರತಿ ಲೀಟರ್‌ ಗೆ ಅಂದಾಜು 20 ರೂ. ಕಡಿಮೆಯಾಗಲಿದೆ ಎಂದರು.

ಇದೇ ವೇಳೆ, ಇ-20 ಪೆಟ್ರೋಲ್ ಬಳಕೆಯಿಂದ ವಾಹನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಯಾಂತ್ರಿಕ ತೊಂದರೆಗಳು ಉಂಟಾಗುತ್ತಿವೆ ಹಾಗೂ ಈ ಇಂಧನಕ್ಕೆ ಗ್ರಾಹಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ದೀಪ್ ಸಿಂಗ್ ಪುರಿ, "ಈ ವಾದವು ತಪ್ಪು ಪ್ರತಿಪಾದನೆಯಾಗಿದೆ. ಮಾರುತಿ ಸುಜುಕಿ ಇದುವರೆಗೆ 1.5 ಕೋಟಿ ವಾಹನಗಳನ್ನು ಪರಿಶೀಲಿಸಿದ್ದು, ಇ-20 ಪೆಟ್ರೋಲ್‌ ನಿಂದ ಹಾನಿಯಾಗಿರುವ ಕುರಿತು ಯಾವುದೇ ವರದಿ ನೀಡಿಲ್ಲ. ಅಲ್ಲದೆ, ವಾಹನ ತಯಾರಕರು ಅಥವಾ ಮೆಕಾನಿಕ್‌ಗಳು ಇ-20 ಪೆಟ್ರೋಲ್‌ಗೆ ಸಂಬಂಧಿಸಿದ ಯಾವುದೇ ವ್ಯವಸ್ಥಿತ ಸಮಸ್ಯೆಯನ್ನು ಪತ್ತೆಹಚ್ಚಿಲ್ಲ" ಎಂದು ಉದ್ಯಮದ ದತ್ತಾಂಶವನ್ನು ಉಲ್ಲೇಖಿಸಿ ಸಮರ್ಥಿಸಿಕೊಂಡರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries