HEALTH TIPS

ಸ್ವಯಂ ಚಾಲಿತ ತಂತ್ರಜ್ಞಾನ ಅಳವಡಿಕೆ: ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌

ನವದೆಹಲಿ: ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ (HDFC Bank) ಸ್ವಯಂ ಚಾಲಿತ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ದೇಶಾದ್ಯಂತ 3,300ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. ಹೊಸ ನೇಮಕಾತಿಯಲ್ಲೂ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದ್ದು, ಮಾರ್ಚ್ 31ರ ವೇಳೆಗೆ ಬ್ಯಾಂಕಿನ ಒಟ್ಟು ಸಿಬ್ಬಂದಿ ಸಂಖ್ಯೆ 2,11,178ಕ್ಕೆ ಇಳಿದಿದೆ.

ಈ ಕುರಿತು ಶನಿವಾರ ವಾರ್ಷಿಕ ವರದಿಯನ್ನು (HDFC bank annual report) ಬಿಡುಗಡೆ ಮಾಡಲಾಗಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಉದ್ಯೋಗಿಗಳ ಸಂಖ್ಯೆ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ 3,343 ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸುವ ಮತ್ತು ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುವ ಪಾತ್ರಗಳಿಗೆ ಸಿಬ್ಬಂದಿಯನ್ನು ಮರು ನಿಯೋಜಿಸುವ ಪ್ರಯತ್ನಗಳನ್ನು ಹೆಚ್ಚುಗೊಳಿಸಿದೆ. ಹೀಗಾಗಿ 2026ರ ವಾರ್ಷಿಕ ಅವಧಿಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3,343 ರಷ್ಟು ಕಡಿಮೆ ಮಾಡಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಉದ್ಯೋಗಿಗಳಲ್ಲಿ ಕ್ಲೆರಿಕಲ್ ಸಿಬ್ಬಂದಿಯಲ್ಲಿ 8,153ಕ್ಕಿಂತ ಹೆಚ್ಚು ಕಡಿತ ಮಾಡಲಾಗಿದೆ. ಇದರಿಂದ ಒಟ್ಟು ಕ್ಲೆರಿಕಲ್ ಸಿಬ್ಬಂದಿ ಸಂಖ್ಯೆ1,62,797ಕ್ಕೆ ತಲುಪಿದೆ. ಇದು 2025ರ ಆರ್ಥಿಕ ವರ್ಷದಲ್ಲಿ 1,70,950 ರಷ್ಟಿತ್ತು. ಇದರೊಂದಿಗೆ ಬ್ಯಾಂಕ್ ವಹಿವಾಟಿನಲ್ಲಿ ಸೋಮವಾರ ಮುಂಬೈ ಮೂಲದ ಬ್ಯಾಂಕ್‌ನ ಷೇರುಗಳಲ್ಲಿ ಶೇಕಡಾ 1.7ರಷ್ಟು ಕುಸಿತವಾಗಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇಕಡಾ 3ರಷ್ಟು ಕುಸಿತವಾಗಿದೆ.

ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮಾನವ ಸೇವೆಯನ್ನು ಬದಲಾಯಿಸಲು ಅಲ್ಲ. ಬದಲಾಗಿ ಸಿಬ್ಬಂದಿ ಸೇವೆಯನ್ನು ಉನ್ನತೀಕರಿಸಲು. ಡಿಜಿಟಲ್ ಸೇವೆ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬ್ಯಾಂಕಿನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕುಗಳಲ್ಲಿ ದಿನನಿತ್ಯದ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣವನ್ನು ಹೆಚ್ಚಾಗಿ ಬಳಕೆಗೆ ಒತ್ತು ನೀಡಲಾಗುತ್ತಿದ್ದು, ಇದು ಉದ್ಯೋಗಿಗಳ ಉದ್ಯೋಗದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೆಪಿ ಮೋರ್ಗಾನ್ ಚೇಸ್ ಅಂಡ್ ಕಂ. ಸಿಟಿಗ್ರೂಪ್ ಇಂಕ್. ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಿದ್ದಂತೆ ಉದ್ಯೋಗಿಗಳು ಕೂಡ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ವೇಗವನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಜಗದೀಶನ್.

ಹಿರಿಯ ಹುದ್ದೆಗೆ 15 ಹೊಸ ಸೇರ್ಪಡೆ ಮಾಡಲಾಗಿದೆ. ಸಾಲದಾತರ ಮಧ್ಯಮ ಮತ್ತು ಕಿರಿಯ ಮಟ್ಟದ ಮುಖ್ಯಸ್ಥರ ಸಂಖ್ಯೆಯಲ್ಲಿ ಕ್ರಮವಾಗಿ 1,252 ಮತ್ತು 3,543ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries