HEALTH TIPS

ಇರಾನ್‌ನ 6 ಶತಕೋಟಿ ಡಾಲರ್‌ ಬಿಡುಗಡೆ ಶೀಘ್ರ: ಮಸೂದ್‌ ಪೆಜೆಶ್ಕಿಯಾನ್‌

 ದುಬೈ (AP): 'ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಸಂಪನ್ಮೂಲಗಳ ಪೈಕಿ ಆರು ಶತಕೋಟಿ ಡಾಲರ್‌ನಷ್ಟು ಮೊತ್ತವನ್ನು ಕತಾರ್ ಬಿಡುಗಡೆ ಮಾಡಲಿದೆ' ಎಂದು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಸೋಮವಾರ ಹೇಳಿದ್ದಾರೆ.


'ಕತಾರ್‌ನಲ್ಲಿ ಇರಾನ್‌ಗೆ ಸೇರಿದ 12 ಶತಕೋಟಿ ಡಾಲರ್‌ ಮೌಲ್ಯದಷ್ಟು ಸಂಪನ್ಮೂಲಗಳಿದ್ದು, ಕದನ ವಿರಾಮ ಮಾತುಕತೆ ಭಾಗವಾಗಿ ಆರು ಶತಕೋಟಿ ಡಾಲರ್‌ ಅನ್ನು ಬಿಡುಗಡೆ ಮಾಡಿ, ಇರಾನ್‌ಗೆ ವಾಪಸು ಮಾಡಲಾಗುತ್ತಿದೆ' ಎಂಬ ಪೆಜೆಶ್ಕಿಯಾನ್‌ ಅವರ ಹೇಳಿಕೆ ಉಲ್ಲೇಖಿಸಿ ಇರಾನ್‌ ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

'ಈ ಬೆಳವಣಿಗೆ ಇರಾನ್‌ ಜನತೆಗೆ ದೊರೆತ ದೊಡ್ಡ ಗೆಲುವಾಗಿದೆ. ತಾತ್ಕಾಲಿಕ ಕದನ ವಿರಾಮ ಒಪ್ಪಂದ ಕುರಿತ ವಿಶ್ವಾಸ ಮತ್ತಷ್ಟು ಹೆಚ್ಚಲಿದೆ' ಎಂದೂ ಪೆಜೆಶ್ಕಿಯಾನ್‌ ಹೇಳಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿ ರುವ ಇರಾನ್‌ಗೆ ಸೇರಿದ ಸ್ವತ್ತುಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಕತಾರ್‌ ಕೂಡ ಈ ವಿಚಾರವನ್ನು ದೃಢಪಡಿಸಿಲ್ಲ. ಅಮೆರಿಕ ಮತ್ತು ಇರಾನ್‌ ನಡುವಿನ ಮಾತುಕತೆಗೆ ಸಂಬಂಧಿಸಿ ಕತಾರ್ ಮಧ್ಯಸ್ಥಿಕೆ ವಹಿಸಿದ ಪ್ರಮುಖ ರಾಷ್ಟ್ರಗಳಲ್ಲೊಂದಾಗಿದೆ.

ಅಮೆರಿಕ ಇತ್ತೀಚೆಗೆ ಇರಾನ್‌ ಮೇಲೆ ಹೊಸದಾಗಿ ವಾಯು ದಾಳಿಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ, ಬಹರೇನ್‌ ಮತ್ತು ಕುವೈತ್‌ ಗುರಿಯಾಗಿಸಿ ಡ್ರೋನ್‌ ಹಾಗೂ ಕ್ಷಿಪಣಿಗಳಿಂದ ಇರಾನ್‌ ದಾಳಿ ನಡೆಸಿತ್ತು. ಅಮೆರಿಕ ದಾಳಿಗಳನ್ನು ಮುಂದುವರಿಸಿದಲ್ಲಿ ಯುದ್ಧ ಕೊನೆಗೊಳಿಸುವ ಕುರಿತ ಮಾತುಕತೆ ಗಳನ್ನು ಸಂಪೂರ್ಣ ನಿಲ್ಲಿಸುವುದಾ ಗಿಯೂ ಇರಾನ್‌ ಬೆದರಿಕೆ ಒಡ್ಡಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries