ಮ್ಯಾಡ್ರಿಡ್: ಸಿಬ್ಬಂದಿ ಹಾಗೂ 116 ಪ್ರಯಾಣಿಕರಿದ್ದ ದೋಣಿಯು ಗಯಾನಾದಲ್ಲಿ ಮಗುಚಿದ್ದು, 15 ಮಕ್ಕಳು ಸೇರಿದಂತೆ ಈವರೆಗೆ 67 ಮಂದಿಯನ್ನು ರಕ್ಷಿಸಲಾಗಿದೆ.
ಎಂವಿ ಬರಿಮಾ ದೋಣಿಯು, ಜಾರ್ಜ್ಟೌನ್ನಿಂದ ಕೈಟುಮಾ ಬಂದರಿಗೆ ಪ್ರಯಾಣಿಸುತ್ತಿತ್ತು. ಪೊಮೆರೂನ್ ನದಿ ಬಳಿ ದೋಣಿ ಮಗುಚಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾತ್ರಿ 11 ಗಂಟೆಗೆ ಅಪಾಯದ ಕರೆ ಬಂದಿತು. ಬಳಿಕ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಗುಯಾನಾ ಲೋಕೋಪಯೋಗಿ ಸಚಿವರು ತಿಳಿಸಿದರು.
ಜನರು ಮೃತಪಟ್ಟಿರುವ ಬಗ್ಗೆ ಸದ್ಯ ಮಾಹಿತಿ ದೊರೆತಿಲ್ಲ.

