ಗ್ವಾಟೆಮಾಲಾ: ಮೆಕ್ಸಿಕೊಡ ದಕ್ಷಿಣದ ರಾಜ್ಯವಾದ ಚಿಯಾಪಾಸ್ನ ಕರಾವಳಿಯಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ನೆರೆಯ ಗ್ವಾಟೆಮಾಲಾ ಮತ್ತು ಎಲ್ ಸಾಲ್ವಡಾರ್ಗಳಲ್ಲಿಯೂ ಕಟ್ಟಡಗಳು ಅಲುಗಾಡಿವೆ. ಆತಂಕದಿಂದ ಜನರು ಕಟ್ಟಡಗಳಿಂದ ಹೊರಬರುತ್ತಿರುವ ದೃಶ್ಯ ಕಂಡುಬಂದಿದೆ.
ತಕ್ಷಣಕ್ಕೆ ಯಾವುದೇ ಹಾನಿ ಮಾಹಿತಿ ಲಭ್ಯವಾಗಿಲ್ಲ.
ಚಿಯಾಪಾಸ್ ಕರಾವಳಿಯ 15.2 ಕಿ.ಮೀ (9.44 ಮೈಲಿ) ಆಳದಲ್ಲಿ ಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ.
ಕಂಪನದ ನಂತರ, ಭೂಕಂಪದ ಕೇಂದ್ರಬಿಂದುವಿನಿಂದ 300 ಕಿ.ಮೀ (186 ಮೈಲಿ) ವ್ಯಾಪ್ತಿಯಲ್ಲಿರುವ ಕರಾವಳಿ ಪ್ರದೇಶಗಳಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ತಿಳಿಸಿದೆ.

