ಮಂಜೇಶ್ವರ: ಹೊಸಬೆಟ್ಟು ಗುಡ್ಡೆಕೇರಿಯಲ್ಲಿ ಮನೆಯಿಂದ ಮೂರುವರೆ ಪವನು ಚಿನ್ನ ಹಾಗೂ 8ಸಾವಿರ ರೂ. ನಗದು ಕಳವಾಘಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ಮಧ್ಯೆ ಮನೆಯ ಕಪಾಟಿನಲ್ಲಿರಿಸಿದ್ದ ಚಿನ್ನ ಹಾಗೂ ಹಣ ಕಳವಾಗಿರುವ ಬಗ್ಗೆ ಗುಡ್ಡೆಕೇರಿ ಸೀನತ್ ಮಜಿಲ್ನ ಸೌದಾ(41) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.


